Asianet Suvarna News Asianet Suvarna News

ನಾಯಿಯಿಂದ ಶುರುವಾಗಿ ನಾಯಿ ಜೊತೆ ಮುಕ್ತಾಯವಾಗೋ ನ್ಯಾಶನಲ್‌ ಕ್ರಶ್‌ ರಶ್ಮಿಕಾ ದಿನಚರಿ

ಕಿರಿಕ್‌ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣನಿಗೋಸ್ಕರ ಇಡೀ ದೇಶದ ಹುಡುಗ್ರು ಹಂಬಲಿಸುತ್ತಿದ್ದರೆ, ಆಕೆ ಮಾತ್ರ ತನ್ನ ನಾಯಿ ಔರಾಗೆ ಮನಸೋತಿದ್ದಾರೆ. ನಾಯಿಯಿಂದ ಶುರುವಾಗೋ ರಶ್ಮಿಕಾ ದಿನಚರಿ ಮುಕ್ತಾಯವಾಗೋದೂ ನಾಯಿ ಜೊತೆಗೇ..

 

What does national crush Rashmika Mandanna writes in her pink dairy
Author
Bengaluru, First Published Jul 2, 2021, 3:50 PM IST
  • Facebook
  • Twitter
  • Whatsapp

'ಓಹ್ ನನ್ನ ಡೈರಿ, ಇತ್ತೀಚೆಗೆ ಡೈರಿ ಬರಿಯೋಕೇ ಮರೆತು ಹೋಗ್ತಿದೆ. ನನ್ನ ಪ್ರೀತಿಯ ಡೈರಿ, ಇವತ್ತು ಖಂಡಿತಾ ನಿನ್ನ ಮೇಲೆ ನನ್ನ ದಿನಚರಿ ದಾಖಲಿಸುತ್ತೀನಿ. ಔರಾ ಬಂದು ಮೈ ಕೆರೆಯುತ್ತಾ, ಕಚ್ಚುತ್ತಾ, ಒದೆಯುತ್ತಾ ನನ್ನನ್ನ ಎಬ್ಬಿಸಿದಳು..'
ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮುದ್ದಾಗಿ ಬರೆದಿರೋ ಡೈರಿಯ ಪುಟಗಳಿವು. ರಶ್ಮಿಕಾ ಸೋಷಿಯಲ್‌ ಮೀಡಿಯಾದಲ್ಲಿ ನಸು ಪಿಂಕ್‌ ಬಣ್ಣದ ತನ್ನಇ ಡೈರಿಯನ್ನುತೆರೆದಿಟ್ಟಿದ್ದಾರೆ. ರಶ್ಮಿಕಾ ಡೈರಿಯಲ್ಲೇನಿಸಬಹುದು ಅಂತ ಎದೆಬಡಿತ ಹೆಚ್ಚಿಸಿಕೊಂಡು ನೋಡಿದ ಹುಡುಗರಿಗೆ ಕೊಂಚ ನಿರಾಸೆ, ಕೊಂಚ ನಿರಾಳತೆ. ನಿರಾಸೆ ಯಾಕೆ ಅಂದರೆ ಈ ಹುಡುಗಿ ನಾಯಿ ಮೇಲೆ ತೋರಿಸೋ ಪ್ರೀತಿ ಕಂಡು. ಅದರಲ್ಲಿ ಒಂದು ಪರ್ಸೆಂಟ್‌ಪ್ರೀತಿಯನ್ನಾದರೂ ನಮಗೆ ತೋರಿಸಿದ್ರೆ ಈ ಜನ್ಮದಲ್ಲಿ ಹುಟ್ಟಿರೋದಕ್ಕೂ ಸಾರ್ಥಕ ಆಗ್ತಿತ್ತು ಅಂತ ಹುಡುಗರು ತಲೆ ತಲೆ ಜಜ್ಜಿಕೊಳ್ತಿದ್ದಾರೆ.

 

ಈ ಕ್ಯೂಟ್ ನಟಿಯ ಒಂದು ನಗುವಿಗೆ, ತುಂಟಾಟಕ್ಕೆ ಹಂಬಲಿಸೋ ಅಭಿಮಾನಿಗಳಿಗೆ ತಮ್ಮ ಬಗ್ಗೆ ಈಕೆ ಒಂದು ಲೈನನ್ನೂ ಡೈರಿಯಲ್ಲಿ ಬರೆಯದೇ ಇರೋದಕ್ಕೆ ನಿರಾಸೆ ಆಗಿದೆ. ಗಳಗಳ ಅಳುತ್ತಿರುವ ಇಮೋಜಿ ಪೋಸ್ಟ್ ಮಾಡಿ ಅವರು ಹಗುರಾಗುತ್ತಿದ್ದಾರೆ. ನಿರಾಳತೆ ಏನಕ್ಕೆ ಅಂದರೆ ರಶ್ಮಿಕಾ ಈ ಡೈರಿಯಲ್ಲಿ ಬಾಯ್ ಫ್ರೆಂಡ್ ಬಗೆಗೆ ಒಂದು ಮಾತನ್ನೂ ಹೇಳಿಲ್ಲ. ಸೋ, ಈ ಹುಡುಗಿ ಕೆಲವರ ಜೊತೆಗೆ ಫ್ಲರ್ಟ್ ಮಾಡಬಹುದೇನೋ, ಆದರೆ ಯಾರನ್ನೂ ಬಾಯ್ ಫ್ರೆಂಡ್ ಮಾಡ್ಕೊಂಡಿಲ್ಲ ಅನ್ನೋ ಸಮಾಧಾನ. 

ಇನ್‌ಸ್ಟಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಪ್ರಿಯಾಂಕ, 1 ಪೋಸ್ಟ್‌ಗೆ 3 ಕೋಟಿ ...

   ನಿನ್ನೆ ತಾನೇ ರಶ್ಮಿಕಾ ತನ್ನ ಮುದ್ದಿನ ನಾಯಿ ಔರಾ ಜೊತೆಗೆ ಮುದ್ದಾಟ ಆಡುವ ವೀಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಒಂದಿಷ್ಟು ಮಂದಿ ಈ ಇಬ್ಬರ ಚಿನ್ನಾಟಕ್ಕೆ ಕಣ್ಣಲ್ಲೇ ಹೃದಯದ ಚಿಹ್ನೆ ತೋರಿಸಿದರೆ, ಮತ್ತೊಂದಿಷ್ಟು ಫ್ಯಾನ್ಸ್ ಕಣ್ತುಂಬ ನೀರು ತುಂಬಿಕೊಂಡು ಡ್ಯಾಮ್ ಇಟ್, ಐ ಲವ್ ಯೂ ಅಂತೆಲ್ಲ ಮೆಸೇಜ್ ಮಾಡಿದ್ರು. ಅಷ್ಟಕ್ಕೂ ನಾಯಿ ಪ್ರೀತಿಯ ಆ ವೀಡಿಯೋದಲ್ಲಿ ರಶ್ಮಿಕಾ ನಾಯಿಮರಿ ಔರಾಗೆ ಕಿಸ್ ಮಾಡಿದರೆ ಅದು ರಶ್ಮಿಕಾ ಮುಖವನ್ನೆಲ್ಲ ಮುದ್ದಿಕ್ಕುತ್ತಿತ್ತು. ಆಫ್ಟರ್ಆಲ್ ಒಂದು ನಾಯಿಮರಿಗಿರುವ ಸೌಭಾಗ್ಯವೂ ನಮಗಿಲ್ಲದೇ ಹೋಯ್ತೇ, ಮುಂದಿನ ಜನ್ಮ ಅಂತಿದ್ರೆ ಸುಂದರಿಯೊಬ್ಬಳ ಮನೆ ನಾಯಿಮರಿಯಾಗಿಯಾದರೂ ಹುಟ್ಟಿಸು ದೇವರೇ ಅಂತೆಲ್ಲ ಹುಡುಗ್ರು ಖಾಲಿ ಹೃದಯದಿಂದ ಗೋಳಾಡಿದ್ರು. ಆ ಬೆಂಕಿಗೆ ತುಪ್ಪ ಸುರಿವಂತೆ ಇವತ್ತು ರಶ್ಮಿಕಾ ತಮ್ಮ ಇನ್‌ಸ್ಟಾ ಸ್ಟೇಟಸ್‌ನಲ್ಲೇ ನಾಯಿಮರಿ ಹೇಗೆ ತನ್ನ ದಿನಚರಿಯ ಭಾಗವೇ ಆಗಿದೆ ಅಂತ ಬರೆದುಕೊಂಡಿದ್ದಾರೆ. 

ಆ ಒಂದು ಮಾತಿನಿಂದ ಕಣ್ಣೀರಿಟ್ಟ ಅರವಿಂದ್; ನಿಧಿ ಸುಬ್ಬಯ್ಯ ಪರ ದಿವ್ಯಾ ಉರುಡುಗ! ...
 

 ಅಷ್ಟಕ್ಕೂ ಆ ದಿನಚರಿಯಲ್ಲಿ ರಶ್ಮಿಕಾ ಅವರ ಒಂದು ದಿನ ಹೇಗೆ ಕಳೆಯುತ್ತೆ ಅನ್ನೋ ಇಂಟೆರೆಸ್ಟಿಂಗ್ ಮಾಹಿತಿ ಇದೆ.  ರಶ್ಮಿಕಾ ದಿನ ಆರಂಭ ಆಗೋದೇ ಔರಾ ನಾಯಿಮರಿಯಿಂದ. ಬೆಳಕು ಹರಿಯುತ್ತಲೇ ಅದು ಬಂದು ರಶ್ಮಿಕಾ ಮುಖವನ್ನ ನೆಕ್ಕಿ, ಮೈ ಮೇಲೆ ಹತ್ತಿ ಹಾರಿ ಉಗುರಿಂದ ಕೆರೆದು, ಒದೆದು ಎಬ್ಬಿಸುತ್ತಂತೆ. ಎದ್ದು ಬಂದು ಔರಾಗೆ ಅವಳ ಫುಡ್, ಮೆಡಿಸಿನ್ ಹಾಕಿ ಫ್ರೆಶ್‌ಅಪ್ ಆಗೋದು. ವರ್ಕೌಟ್ ಅದು ಇದು ಆದ್ಮೇಲೆ ಅವರ ಸಿನಿಮಾ ಟೀಮ್‌ನವರು ಮನೆಗೆ ಬರ್ತಾರೆ. ಅವರ ಜೊತೆಗೆ ಹರಟೆ. ಅವರನ್ನು ಕಳಿಸಿದ ಬಳಿಕ ಫೋನ್‌ನಲ್ಲೇ ಯಾವುದೋ ಪತ್ರಿಕೆಗೆ ಇಂಟರ್‌ವ್ಯೂ ಕೊಡ್ತಾರೆ. ಆಮೇಲೆ ಮೀಟಿಂಗ್‌ಗೆ ರೆಡಿ ಆಗೋದು, ಬಹುಶಃ ಅದು ಅವರ ಹೊಸ ಸಿನಿಮಾಕ್ಕೆ ಸಂಬಂಧಿಸಿದ ಮಾತುಕತೆ. ಅಲ್ಲಿ ತುಂಬ ಒಳ್ಳೆಯ ಜನರನ್ನು ಮೀಟ್‌ ಮಾಡಿದ ಖುಷಿ ಸಿಕ್ಕಿತು ಅಂತ ಬರೆದುಕೊಳ್ತಾರೆ ರಶ್ಮಿಕಾ. ಅದಾಗಿ ಆಡ್ ಫಿಲ್ಮಂಗೆ ಡಬ್ಬಿಂಗ್ ಮಾಡ್ತಾರೆ. ವಾಪಾಸ್ ಮನೆಗೆ ಬರುವಾಗ ಗಂಟೆ ಎಂಟು. ಊಟ ಮಾಡಿ, ಔರಾಗೂ ಊಟ ಮಾಡಿಸಿ ಆಟ ಆಡಿ ಇಬ್ಬರೂ ಒಂದೇ ಬೆಡ್‌ ಮೇಲೆ ನಿದ್ದೆ ಹೋಗ್ತಾರೆ. ಆಹಾ, ಲೈಫು ಎಂಥಾ ಚೆಂದ ಅಂತ ನಾಯಿಮರಿಯನ್ನು ಮುದ್ದು ಮಾಡ್ತಾನೇ ರಶ್ಮಿಕಾ ಹೇಳ್ತಿದ್ರೆ ಪಡ್ಡೆಗಳು, ಯಾರಿಗೆ ಬೇಕು ಈ ಲೋಕ ಅಂತ ಹಾಡಿಕೊಳ್ತಾ ಬಿದ್ಕೊಂಡ್ರು ಅನ್ನೋವಲ್ಲಿಗೆ ರಶ್ಮಿಕಾ ದಿನಚರಿ ಕತೆ ಮುಕ್ತಾಯ. 

ಮಾಸ್ಕ್ ಮರೆತಾಗ ರಶ್ಮಿಕಾ ರಿಯಾಕ್ಷನ್ ಹೀಗಿರುತ್ತೆ ನೋಡಿ ...
 

Follow Us:
Download App:
  • android
  • ios