ಎರಡನೇ ಇನ್ನಿಂಗ್ಸ್‌ನಲ್ಲಿ ಕೋಪ ಮಾಡಿಕೊಂಡ ಅರವಿಂದ್. ದಿವ್ಯಾ ಉರುಡುಗ ಸರಿ-ತಪ್ಪುಗಳನ್ನು ಅರ್ಥ ಮಾಡಿ ಭೇಷ್‌ ಎನ್ನಿಸಿಕೊಂಡಿದ್ದಾರೆ. 

42 ದಿನಗಳ ಕಾಲ ಮನೆಯಿಂದ ಹೊರಗಿದ್ದ ಸ್ಪರ್ಧಿಗಳು ಪ್ರತಿಯೊಂದೂ ಎಪಿಸೋಡ್‌ಗಳನ್ನು ವೀಕ್ಷಿಸಿ ಮತ್ತೆ ಮನೆಯೊಳಗೆ ಪ್ರವೇಶಿಸಿದ್ದಾರೆನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ. ಸಣ್ಣ-ಪುಟ್ಟ ವಿಚಾರಕ್ಕೂ ಜಗಳ, ಮುನಿಸು. ಇನ್ನೂ ಕೆಲವರು ಇವರ ಸಹವಾಸವೇ ಬೇಡ ಎಂದು ದೂರದಿಂದಲೇ ನೋಡುತ್ತಾ ಕಾಮೆಂಟ್ ಮಾಡುತ್ತಾರೆ. 

ಅರವಿಂದ್- ದಿವ್ಯಾ ನಡುವೆ ಯಾರು ಮನೆಯಿಂದ ಹೊರ ಹೋಗುತ್ತಾರೆ? 

ಈ ವಾರ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳಿದ್ದಾರೆ. ಅರವಿಂದ್ ಮತ್ತು ಮಂಜು. ಆರಂಭದಲ್ಲಿ ಅರವಿಂದ್ ತಂಡ ಅದ್ಭುತವಾಗಿ ಆಟವಾಡುತ್ತಿತ್ತು. ಆನಂತರ ಮಂಜು ತಂಡ ಲೀಡಿಂಗ್‌ನಲ್ಲಿದೆ. ಆಟದ ಬಗ್ಗೆ ಅರವಿಂದ್ ಮತ್ತು ಮಂಜು ಚರ್ಚೆ ಮಾಡುವಾಗ ನಿಧಿ ಸುಬ್ಬಯ್ಯ ಸಲಹೆ ನೀಡಲು ಬರುತ್ತಾರೆ. ತಕ್ಷಣವೇ ಕೋಪಗೊಂಡ ಅರವಿಂದ್ 'ನಾನು ಕ್ಯಾಪ್ಟನ್‌ ಜೊತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳಿ,' ಎಂದು ಹೇಳಿದ್ದಾರೆ. ಆನಂತರ ಅರವಿಂದ್ ಕ್ಷಮೆ ಕೇಳುತ್ತಾರೆ ಆದರೆ ನಿಧಿ ಒಪ್ಪಿಕೊಳ್ಳುವುದಿಲ್ಲ. 

ಟಾಸ್ಕ್‌ನಲ್ಲಿ ಸೋಲುತ್ತಿದ್ದಂತೆ ದಿವ್ಯಾ ಉರುಡುಗ ಮನಸ್ತಾಪಗಳನ್ನು ಹೊರ ಹಾಕುತ್ತಾರೆ. ನೀವು ಮಾತನಾಡಿದ ರೀತಿ ಮಂಜು ಮಾತನಾಡಿದರೆ ನನಗೆ ಇಷ್ಟವಾಗುತ್ತಿರಲಿಲ್ಲ. ನಾನು ಕೂಡ ಎದುರು ಜವಾಬ್ ಕೊಟ್ಟು ಮಾತನಾಡುತ್ತಿದ್ದೆ. ನಿಧಿ ನಿಮ್ಮ ಜೊತೆ ಮಾತನಾಡಿದ ರೀತಿ ಸರಿ ಇದೆ ಎಂದು ಹೇಳುತ್ತಾರೆ. ಇಷ್ಟು ದಿನಗಳಿಂದ ಜೊತೆಗಿದ್ದ ದಿವ್ಯಾನೇ ಹೀಗೆ ಮಾತನಾಡಿದ್ದರು ಎಂದು ಅರವಿಂದ್ ಕಣ್ಣೀರಿಟ್ಟಿದ್ದಾರೆ. ಇನ್ನೂ ಮುಂದೆ ಈ ರೀತಿ ಮಾತನಾಡುವುದಿಲ್ಲ ಎಂದು ದಿವ್ಯಾಗೆ ಹೇಳಿದ್ದಾರೆ.