Asianet Suvarna News

ಮಾಸ್ಕ್ ಮರೆತಾಗ ರಶ್ಮಿಕಾ ರಿಯಾಕ್ಷನ್ ಹೀಗಿರುತ್ತೆ ನೋಡಿ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಮಾಸ್ಕ್ ಮರೆಯುತ್ತಾರಾ.. ? ಹೌದು ಅಂತಿದೆ ಇತ್ತೀಚೆಗೆ ವೈರಲ್ ಆಗಿರೋ ವಿಡಿಯೋ

Rashmika mandannas shocking reaction after she forgot to wear mask video goes viral dpl
Author
Bangalore, First Published Jul 2, 2021, 10:04 AM IST
  • Facebook
  • Twitter
  • Whatsapp

ಆರಂಭದಲ್ಲಿ ಮಾಸ್ಕ್ ಹಾಕೋಕೆ ಮರೆತೋಗೋದು ಸಾಮಾನ್ಯವಾಗಿತ್ತು. ಆದರೆ ಈಗೆಲ್ಲರಿಗೂ ರೂಢಿಯಾಗಿದೆ, ಮಾಸ್ಕ್ ಧರಿಸದಿದ್ದರೆ ಏನೋ ಬಿಟ್ಟಿರುವಂತೆ ಭಾಸವಾಗುತ್ತದೆ, ಆದ್ರೆ ರಶ್ಮಿಕಾಗೆ ಇನ್ನೂ ಮಾಸ್ಕ್ ರೂಢಿಯಾಗಿಲ್ಲ.

ಹೌದು. ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮಾಸ್ಕ್ ಮರೆತು ಬಂದಿದ್ದು, ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ಸಿನಿಮಾ ಶೂಟಿಂಗ್ ಭಾಗವಾಗಿ ಮುಂಬೈನಲ್ಲಿರೋ ರಶ್ಮಿಕಾ ವಿಡಿಯೋ ಈಗ ವೈರಲ್ ಆಗಿದೆ.

ಸ್ಟೈಲಾಗಿ ಬ್ಲಾಕ್ ಕಾರಿನಿಂದಿಳಿದ ರಶ್ಮಿಕಾ ಇನ್ನೂ ಸ್ಟೈಲಾಗಿ ತಮ್ಮ ಕೂದಲನ್ನು ತಳ್ಳಿ ಇನ್ನೇನು ಮುಂದೆ ಹೆಜ್ಜೆ ಇಡಬೇಕೆನ್ನುವಾಗ ಮಾಸ್ಕ್ ಧರಿಸಿಲ್ಲ ಎನ್ನುವುದು ನೆನಪಾಗಿದೆ.

ಓಹ್ ಮಾಸ್ಕ್ ಅಂತ ಶಾಕ್ ಆಗಿ ತಟ್ಟನೆ ಹಿಂದಿರುಗಿ ಕಾರ್‌ನತ್ತ ಸಾಗಿದ್ದಾರೆ. ಅಂತೂ ಮಾಸ್ಕ್ ಮರೆತದ್ದು ಅರಿವಾಗ ನಟಿ ಕೊಟ್ಟ ಶಾಕಿಂಗ್ ಎಕ್ಸ್‌ಪ್ರೆಷನ್ ಇದ್ಯಲ್ಲಾ.. ಮಾಸ್ಕ್ ಎಷ್ಟು ಇಂಪಾರ್ಟೆಂಟ್ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ.

ನಟಿ ಸದ್ಯ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ ಮಿಷನ್ ಮಜ್ನು ಹಾಗೂ ಅಮಿತಾಭ್ ಬಚ್ಚನ್ ಜೊತೆ ಗುಡ್‌ ಬೈ ಸಿನಿಮಾ ಮಾಡುತ್ತಿದ್ದಾರೆ.

Follow Us:
Download App:
  • android
  • ios