ಶಕೀಲಾ!

ಒಂದು ಕಾಲದಲ್ಲಿ ಈ ಮಾದಕ ನಟಿಯನ್ನು ಕಂಡರೆ ಮಲಯಾಳಂನ ಸೂಪರ್ ಸ್ಟಾರ್ಗಳೂ ಹೆದರಿ ನಡುಗುತ್ತಿದ್ದರು. ಕಾರಣ ವಾರಕ್ಕೊಂದು ಶಕೀಲಾ ಸಿನಿಮಾಗಳು ಥಿಯೇಟರ್ ಗೆ ಬಂದರೆ ಜನ ಸ್ಟಾರ್ ಗಳಿಗಿಂತಲೂ ಈಕೆಯ ಸಿನಿಮಾಗಳನ್ನೇ ಹುಚ್ಚೆದ್ದು ನೋಡುತ್ತಿದ್ದರು. ತನ್ನ ಮೈ ಸಿರಿಯಿಂದಲೇ ಜನರನ್ನು ಆಕರ್ಷಿಸುವ ಗುಣ ಈ ನಟಿಯಲ್ಲಿತ್ತು. ಕೆಲವೇ ಲಕ್ಷಗಳಲ್ಲಿ ತಯಾರಾಗುತ್ತಿದ್ದ ಈಕೆಯ ಸಿನಿಮಾಗಳು ಹೀರೋಗಳ ಬಿಗ್ ಬಜೆಟ್ ಸಿನಿಮಾಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ದುಡ್ಡು ಮಾಡುತ್ತಿದ್ದದ್ದು ಹಲವರ ಕಣ್ಣು ಕೆಂಪಾಗಿಸಿತ್ತು.

ಶಕೀಲಾ ಎಂಬ ಹೆಸರು ತಂದಿಟ್ಟ ಫಜೀತಿ! ...

ಸಿ.ಶಕೀಲಾ ಬೇಗಂ ಎಂಬ ಹೆಸರಿನ ಈಕೆ ತನ್ನ ಹದಿನಾರನೇ ವಯಸ್ಸಲ್ಲೇ ಪ್ಲೇಗರ್ಲ್ಸ್ ಅನ್ನೋ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸುತ್ತಾಳೆ. ಅದಕ್ಕೂ ಮೊದಲು ಈಕೆಯದು ಎಂಥಾ ಬಡತನ ಎಂದರೆ ಸ್ವತಃ ತಾಯಿಯೇ ಈಕೆಯನ್ನು ವೇಶ್ಯಾ ವೃತ್ತಿಗೆ ನೂಕಲು ಮುಂದಾಗಿದ್ದರಂತೆ. ಸಿನಿಮಾ ರಂಗಕ್ಕೆ ಬಂದ ಆರಂಭದಲ್ಲಿ ಶಕೀಲಾ ನಟಿಸಿದ್ದಕ್ಕೆ ಹಣ ಪಡೆಯುತ್ತಿರಲಿಲ್ಲ. ಕೈಗೆ ಸಿಕ್ಕ ಅವಕಾಶ ಬಿಡಬಾರದು ಅಂತ ಒಂದೇ ಸಮನೆ ಚಿತ್ರಗಳಲ್ಲಿ ನಟಿಸತೊಡಗುತ್ತಾಳೆ. ದುರದೃಷ್ಟವಶಾತ್ ಅವೆಲ್ಲ ಪೋರ್ನ್ ಸಿನಿಮಾಗಳಂತೆ. ಆ ಸಿನಿಮಾಗಳನ್ನು ಮಾಡುತ್ತಿದ್ದವರು ಈಕೆಯ ಮೂಲಕ ಸಾಕಷ್ಟು ಹಣ ಮಾಡುತ್ತಿದ್ದರು. ಆದರೆ ಇವಳಿಗೆ ಹೆಸರಾಗಲೀ, ಹಣವಾಗಲೀ ಕೈಗೆ ಬರುತ್ತಿರಲಿಲ್ಲ.

ಹಾಟೆಸ್ಟ್ ಲೇಡಿಯ ಲೈಫ್ ಸ್ಟೋರಿ 'ಶಕೀಲಾ'! ...

ಒಂದು ಹಂತದ ಬಳಿಕ ಶಕೀಲಾಗೆ ಅದೃಷ್ಟ ಕುದುರಿತ್ತು. ಕಿನ್ನಾರ ತುಬಿಗಳ್ ಸಿನಿಮಾದ ಬಳಿಕವಂತೂ ವರ್ಷಕ್ಕೆ 40 ಸಿನಿಮಾಗಳಲ್ಲಿ ಶಕೀಲಾ ನಟಿಸುತ್ತಿದ್ದರು. ಲಾಸ್‌ನಲ್ಲಿದ್ದ ನಿರ್ಮಾಪಕರು ಈಕೆಯ ಬಳಿ ಬೇಡಿ ಕಾಲ್ ಶೀಟ್ ಪಡೆದು, ಸಿನಿಮಾ ಮಾಡಿ ದುಡ್ಡು ಮಾಡುತ್ತಿದ್ದರು. ಎಷ್ಟೂ ಜನ ಕೃತಜ್ಞತೆಯಿಂದ ತಮ್ಮ ಮನೆಗೇ ಶಕೀಲಾ ಹೆಸರು ಇಟ್ಟಿದ್ದೂ ಇದೆಯಂತೆ.

ಹೀಗೆ ಬಹುಬೇಡಿಕೆಯಲ್ಲಿದ್ದ ಶಕೀಲಾಗೆ ಬಹುಮಂದಿ ಪ್ರಿಯತಮರಿದ್ದರು. ಆ ಸಮಯದಲ್ಲಿ ಸುಮಾರು 21 ಜನರ ಜೊತೆಗೆ ಈಕೆ ಅಫೇರ್ ಇಟ್ಟುಕೊಂಡಿದ್ದಳು. ಅವರಲ್ಲೊಬ್ಬರ ಜೊತೆಗೆ ಅಗಾಧ ಪ್ರೀತಿಯೂ ಇತ್ತು. ಆದರೆ ಅವರು ಯಾರನ್ನೂ ಶಕೀಲಾ ಮದುವೆಯಾಗಲಿಲ್ಲ ಅವರ ಜೊತೆಗೆ ಸಂಸಾರ ಮಾಡಲಿಲ್ಲ. ಕಾರಣ ಕೇಳಿದರೆ ಎಂಥವರಿಗೂ ಬೇಸರವಾಗುತ್ತದೆ. ಮತ್ತೇನಲ್ಲ, ಅಷ್ಟು ಜನರಿದ್ದರೂ ಅವರು ಯಾರೂ ಈಕೆಯನ್ನು ಮನಸಾರೆ ಪ್ರೀತಿಸಿದವರಲ್ಲ. ಈಕೆಯ ದೇಹ ಸಿರಿಗೆ ಆಸೆಪಟ್ಟು ಈಕೆಯ ಜೊತೆಗಿದ್ದವರು. ಇದೆಲ್ಲ ತಿಳಿಯದಷ್ಟು ದಡ್ಡಿಯಲ್ಲ ಶಕೀಲಾ. ಆದರೂ ಯಾಕೋ ಸುಮ್ಮನಾಗಿಬಿಟ್ಟಳು. ಸ್ವಂತ ಅಕ್ಕನೇ ಈಕೆ ರಾತ್ರಿ ಹಗಲು ಕಷ್ಟಪಟ್ಟು ದುಡಿದ ಹಣವನ್ನೆಲ್ಲಾ ನುಂಗಿ ಹಾಕಿದಾಗ ಶಕೀಲಾಗೆ ಮನುಷ್ಯ ಸಂಬಂಧದ ಮೇಲೇ ಜಿಗುಪ್ಸೆ ಬಂದಿತ್ತು.

ಈ ಬಾಲಿವುಡ್ ಬ್ಯೂಟಿ ಶಕೀಲಾ ಭೇಟಿ ಮಾಡಿದ್ದೇಕೆ? ...

ಇಷ್ಟೆಲ್ಲ ಆದರೂ ಶಕೀಲಾ ತಾನಾಗಿಯೇ ಯಾರಿಗೂ ಕೆಟ್ಟದ್ದನ್ನು ಮಾಡಿದವಳಲ್ಲ. ಆದರೆ ಒಂದು ಹಂತದಲ್ಲಿ ಎಷ್ಟು ರೋಸಿ ಹೋಗಿದ್ದಳೆಂದರೆ ತನಗೆ ಅನ್ಯಾಯ ಮಾಡಿದವರಿಗೆ ಹೊಡೆತ ನೀಡಲೂ ಮುಂದಾಗುತ್ತಿದ್ದಳು. ನೀವು ಒಳ್ಳೆಯವರಾಗಿದ್ರೆ ನಾನೂ ಒಳ್ಳೆಯವಳು, ನೀವು ಕೆಟ್ಟವರಂತೆ ವರ್ತಿಸಿದರೆ ನಾನೂ ಕೆಟ್ಟವಳಾಗ್ತೀನಿ ಅನ್ನುತ್ತಿದ್ದಳು.

ತೀರಾ ಬಡತನದಲ್ಲಿದ್ದ ಇವರ ಕುಟುಂಬದವರನ್ನು ಈಕೆ ಚೆನ್ನಾಗಿಟ್ಟಳು. ಅವರೇನೋ ಶ್ರೀಮಂತರಾದರು. ಆದರೆ ಇವಳನ್ನು ಎಲ್ಲದವರಿಂದ ದೂರವೇ ಇಡತೊಡಗಿದರು. ತನ್ನ ಅಕ್ಕನ ಮಗಳ ಮದುವೆಗೂ ಆಕೆಗೆ ಆಹ್ವಾನ ನೀಡಲಿಲ್ಲ.

ಇಷ್ಟಾದರೂ ಶಕೀಲಾ ಇವತ್ತಿಗೂ ಇರುವುದು ಹಿಂದಿನಿಂದ ಇದ್ದ ಅದೇ ಬಾಡಿಗೆ ಮನೆಯಲ್ಲಿ. ಮನೆಯಿಂದ ಹೊರ ಹೋಗಬೇಕಾದರೆ ಕಡ್ಡಾಯವಾಗಿ ಬುರ್ಖಾ ಹಾಕಿಕೊಳ್ಳುತ್ತಾಳೆ. ಬುರ್ಖಾ ಹಾಕದೇ ಹೊರಗೆ ಕಾಲಿಟ್ಟರೆ ಜನ ಈಕೆಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಾತನಾಡಿಸಲು ಮುಗಿ ಬೀಳ್ತಾರಂತೆ.

ಇದೆಲ್ಲವನ್ನೂ ಶಕೀಲಾ ತನ್ನ ಆತ್ಮಕತೆಯಲ್ಲಿ ಬರೆದಿಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ಬಯೋಪಿಕ್ ನ ಟೀಸರ್ ಬಿಡುಗಡೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ನೀಲಿತಾರೆಯ ನಿಜ ಬದುಕನ್ನು ತೆರೆಯ ಮೇಲೆ ನೋಡಬಹುದು.