ಈ ಬಾಲಿವುಡ್ ಬ್ಯೂಟಿ ಶಕೀಲಾ ಭೇಟಿ ಮಾಡಿದ್ದೇಕೆ?

First Published 21, Jul 2018, 8:42 PM IST
Richa Chadha Meets Shakeela Ahead of Playing Her in New Film
Highlights

ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ಶಕೀಲಾ ಆತ್ಮಕತೆ ಬಂದಿದ್ದು ಹಳೆ ಸುದ್ದಿ.  ಸನ್ನಿ ಲಿಯೋನ್ ಆಯ್ತು, ಸಿಲ್ಕ್ ಸ್ಮಿತಾ ಆಯ್ತು ಇದೀಗ ಶಕೀಲಾ ಜೀವನವೂ ಸಿನಿಮಾವಾಗುತ್ತಾ ಇದೆ. ಹಾಗಾದರೆ ಯಾವ ಬೆಡಗಿ ಶಕೀಲಾ ಪಾತ್ರ ಮಾಡುತ್ತಿದ್ದಾರೆ? ಇಲ್ಲಿದೆ ವಿವರ

ಬೆಂಗಳೂರು[ಜು.21] ಬಾಲಿವುಡ್ ಬೆಡಗಿ ರೀಚಾ ಛಡ್ಡಾ ಸಾಹಸವೊಂದಕ್ಕೆ ಮುಂದಾಗಿದ್ದಾರೆ. ಶಕೀಲಾ ಜೀವನದ ಕತೆ ಆಧರಿತ ಸಿನಿಮಾದಲ್ಲಿ ಶಕೀಲಾ ಪಾತ್ರ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಟಿ ಶಕೀಲಾ ಅವರನ್ನು ಭೇಟಿ ಮಾಡಿದ್ದಾರೆ. ಕೇವಲ ಭೇಟಿ ಮಾಡಿದ್ದಲ್ಲದೇ ಅನೇಕ ವಿಚಾರಗಳ ಬಗ್ಗೆ ಇಬ್ಬರೂ ಚರ್ಚೆ ಮಾಡಿದ್ದಾರೆ. ರಾಜಕಾರಣ ಮತ್ತು ಸಿನಿಮಾ ರಂಗದಲ್ಲಿ ಮಹಿಳೆಯರನ್ನು ಹೇಗೆ ತುಳಿಯಲಾಗುತ್ತಿದೆ ಎಂಬುದನ್ನು ವಿಶ್ಲೇಷಣೆ ಮಾಡಿದ್ದಾರೆ.

ಅಡಲ್ಟ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಶಕೀಲಾ ಜೀವನದ ಕತೆ ಆಧರಿತ ಸಿನಿಮಾ ತೆರಗೆ ಬರಲಿದೆ. ಸದಾ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿ ಮಾಡುವ ರೀಚಾ ಛಡ್ಡಾ ಈ ಪಾತ್ರದಲ್ಲಿ ಹೇಗೆ ತೊಡಗಿಕೊಳ್ಳಿದ್ದಾರೆ ಎಂದು ಬಾಲಿವುಡ್ ಮಾತ್ರ ಅಲ್ಲ ದಕ್ಷಿಣ ಭಾರತದ ಚಿತ್ರರಂಗ ಸಹ ಎದುರು ನೋಡುತ್ತಿದೆ.

ತಮ್ಮ 16 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿದ ನಟಿ ಶಕೀಲಾ ಅವರು  ಅರೇ ನೀಲಿ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದರು. ಕನ್ನಡದ ನಿರ್ದೇಶಕ ಇಂದ್ರಜೀತ್ ಲಂಕೇಶ್ ನಿರ್ದೇಶನ ಮಾಡುತ್ತಿದ್ದಾರೆ.

loader