Asianet Suvarna News

ಶಕೀಲಾ ಎಂಬ ಹೆಸರು ತಂದಿಟ್ಟ ಫಜೀತಿ!

ಶಕೀಲಾ- ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಚಿತ್ರರಸಿಕರಲ್ಲಿ ರೋಮಾಂಚನ ಮೂಡಿಸುವ ಹೆಸರು. ಆದರೆ ಈ ಹೆಸರಿನಿಂದ ಫಜೀತಿ ಅನುಭವಿಸಿದವರ ಕತೆಯೂ ಈ ಸಿನಿಮಾದಲ್ಲಿದೆ, ನೋಡಿ.

 

How the name Shakeela embarrassing women
Author
Bengaluru, First Published Sep 1, 2020, 5:24 PM IST
  • Facebook
  • Twitter
  • Whatsapp

ಶಕೀಲಾ ಎಂದರೆ ದಕ್ಷಿಣ ಭಾರತದ ಚಿತ್ರರಸಿಕರಿಗೆಲ್ಲ ಗೊತ್ತು. ಮಲಯಾಳಂ ಚಿತ್ರರಂಗವನ್ನು ಒಂದು ಕಾಲದಲ್ಲಿ ಆಳಿದ ತಾರೆ ಈಕೆ. ಒಂದೊಮ್ಮೆ ರಾತ್ರಿ ಹನ್ನೊಂದು ಗಂಟೆಯಾದರೆ ಸಾಕು, ಕೆಲವು ಚಾನೆಲ್‌ಗಳು ಈಕೆಯ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದವು. ಪಡ್ಡೆಗಳು ಈ ಸಮಯವನ್ನೇ ಕಾದು ಸಿನಿಮಾ ನೋಡುತ್ತಿದ್ದರು. ಒಂದು ಕಾಲದಲ್ಲಿ ಮಾದಕ ಕಂಗಳ, ಎಲ್ಲರನ್ನೂ ಸೆಳೆಯುವ ಸುರಸುಂದರಿಯಾಗಿದ್ದ ಈಕೆ ಮೇಲೆ ಮೇಲೆ ಹಿಟ್‌ ಫಿಲಂಗಳನ್ನು ಕೊಟ್ಟಳು. ಅವೆಲ್ಲವೂ ಎ ಸರ್ಟಿಫಿಕೇಟ್‌ ಚಿತ್ರಗಳಾಗಿದ್ದವು. ಆಕೆಯದೇ ಅಭಿಮಾನಿಗಳು ಸಾಕಷ್ಟಿದ್ದರು. ಕನ್ನಡ ಚಿತ್ರರಂಗಕ್ಕೂ ಆಕೆಯನ್ನು ಇಂದ್ರಜಿತ್‌ ಲಂಕೇಶ್‌ ಕರೆ ತಂದರು. ಈಗ ಅವರೇ ಆಕೆಯ ಹೆಸರಿನಲ್ಲಿ ಒಂದು ಬಾಲಿವುಡ್‌ ಚಿತ್ರವನ್ನೂ ಮಾಡುತ್ತಿದ್ದಾರೆ.

ಆದರೆ ಇಲ್ಲಿ ಹೇಳಲು ಹೊರಟರುವುದು ಅದೇ ಹೆಸರಿನ ಇತರರ ಕತೆ. ಕೇರಳದಲ್ಲಿ ಶಕೀಲಾ ಎಂಬ ಹೆಸರಿನ ಇತರ ಹುಡುಗಿಯರೂ ಇದ್ದಾರಲ್ಲ! ಅವರ ಪಾಡು ಏನು? ಈ ಥೀಮ್ ಇಟ್ಟುಕೊಂಡು ಸುಗೀಶ್‌ ಎಸ್‌ಜಿ ಎಂಬವರು ಒಂದು ಶಾರ್ಟ್ ಫಿಲಂ ಮಾಡಿದ್ದಾರೆ. ಅದರಲ್ಲಿ ಶಕೀಲಾ ಎಂಬ ಹದಿಹರೆಯದ ಹೆಣ್ಣಿನ ಪಾಡು ಚಿತ್ರಿತವಾಗಿದೆ. ಈಕೆಗೆ ತನ್ನ ಹೆಸರಿನ ಬಗ್ಗೆ ಅಭಿಮಾನವಿದೆ. ಆದರೆ ಅದರಿಂದ ಹಲವು ಫಜೀತಿ ಉಂಟಾಗುತ್ತಿರುತ್ತದೆ. ಆಕೆಯನ್ನು ಮದುವೆಯಾಗಲು ಬಯಸಿ ಬರುವ ಗಂಡುಗಳು, ಆಕೆಯ ಹೆಸರು ತಿಳಿದ ಕೂಡಲೆ ತಿರುಗಿ ನೋಡದೆ ಪರಾರಿಯಾಗುತ್ತಾರೆ. ಅಥವಾ ಹೆಸರು ಚೇಂಜ್‌ ಮಾಡಿಕೊಳ್ಳಲು ಹೇಳುತ್ತಾರೆ. ಹೆಸರು ಬದಲಾಯಿಸಿಕೊಳ್ಳಲು ಶಕೀಲಾಗೆ ಇಷ್ಟವಿಲ್ಲ. ಹೀಗೆ ಇಪ್ಪತ್ತನಾಲ್ಕಕ್ಕೂ ಹೆಚ್ಚು ಸಂಬಂಧಗಳು ರಿಜೆಕ್ಟ್ ಆಗುತ್ತವೆ. ಹೊರಗಡೆ ಓಡಾಡುವಾಗ, ಈಕೆಯ ಹೆಸರು ಶಕೀಲಾ ಎಂದು ತಿಳಿದವರು ನೋಡುವ ನೋಟ, ಗಂಡಸರ ವಿಕೃತ ನೋಟಗಳು ಈಕೆಗೆ ಮುಜುಗರ ಉಂಟುಮಾಡುತ್ತವೆ. ಕೊನೆಗೂ ಈ ಮುಜುಗರಗಳನ್ನು ಈಕೆ ಎದುರಿಸಿ ನಿಲ್ಲುವುದು ಹೇಗೆ ಎಂಬುದನ್ನು ಈ ಕಿರುಚಿತ್ರ ನೋಡಿಯೇ ನೀವು ತಿಳಿಯಬೇಕು.

ಜುಲೈ ತಿಂಗಳಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್‌ ಆಗಿರುವ ಈ ಶಾರ್ಟ್‌ ಫಿಲಂ, ಎರಡೇ ತಿಂಗಳಲ್ಲಿ ೭ ಲಕ್ಷ ವೀಕ್ಷಣೆ ಕಂಡಿದೆ. ಶಕೀಲಾ ಎಂಬ ಹೆಸರಿನಿಂದ ಈ ಚಿತ್ರದತ್ತ ಆಕರ್ಷತರಾದವರೂ ಇರಬಹುದು. ಆದರೆ ಕಾಮೆಂಟ್‌ ಸೆಕ್ಷನ್‌ನಲ್ಲಿ ಇದರ ಸಂದೇಶದಿಂದ ಪ್ರೇರಿತರಾದ ತುಂಬ ಮಂದಿ ಇದನ್ನು ಶ್ಲಾಘಿಸಿದ್ದಾರೆ.

ಹಾಟೆಸ್ಟ್ ನಟಿಯ ಲೈಫ್ ಸ್ಟೋರಿ ಶಕೀಲಾ

ಶಕೀಲಾ ಎಂಬ ಹೆಸರು ಮಲಯಾಳಂನ ಚಿತ್ರತಯಾರಕರಿಗೆ ಲಾಭ ತಂದುಕೊಡುವ ಹೆಸರೇ ಇರಬಹುದು. ಆದರೆ ಕೇರಳದಲ್ಲಿ ಮುಸ್ಲಿಂ ಸಮುದಾಯದ ಎಷ್ಟೋ ಮಂದಿ ಹುಡುಗಿಯರು, ಮಹಿಳೆಯರು ಈ ಹೆಸರಿನಿಂದಾಗಿ ಮುಜುಗರ ಅನುಭವಿಸಿರುವುದು ಸುಳ್ಳಲ್ಲ. ಈ ಹೆಸರಿನವರು ಸಾರ್ವಜನಿಕವಾಗಿ ತಮ್ಮ ಹೆಸರು ಹೇಳಿಕೊಂಡ ಕೂಡಲೇ ಅಲ್ಲಿದ್ದವರು ಒಂದು ನಮೂನೆ ವಿಚಿತ್ರವಾಗಿ ನೋಡುತ್ತಾರೆ. ಕೆಲವು ಗಂಡಸರು ವಿಕೃತವಾಗಿ ನೋಡುವುದು, ನಗುವುದೂ ಉಂಟು. ಹೈಸ್ಕೂಲು, ಕಾಲೇಜು ಹುಡುಗಿಯರಾದರೆ ಕ್ಲಾಸ್‌ಮೇಟ್‌ಗಳಿದ ಕುಹಕ ಅನುಭವಿಸಬೇಕಾಗಿ ಬರುತ್ತದೆ. ಇದರಿಂದಾಗಿ ಎಷ್ಟೋ ಮಂದಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದೂ ಇದೆ. ಆದರೆ ದಿಟ್ಟವಾಗಿ, ನನ್ನ ಹೆಸರು ಶಕೀಲಾ, ಏನೀವಾಗ ಎಂದು ಕೇಳುವವರೂ ಇದ್ದಾರೆ. ಕೆಡುಕು ಮನಸ್ಥಿತಿ ಇರುವುದು ಹೆಸರಿನಲ್ಲಿ ಅಲ್ಲ, ಬದಲು ಸಮಾಜದಲ್ಲಿ. ನಾವು ಹೆಸರು ಹಿಡಿದು ಮಾಡುವ ಜೋಕ್‌ಗಳು ಇನ್ನೊಬ್ಬರಿಗೆ ಪ್ರಾಣಸಂಕಟ ಆಗಬಹುದು ಎನ್ನುವುದೂ ನಮಗೆ ತಿಳಿದಿರಬೇಕು ಎಂಬುದು ಈ ಕಿರುಚಿತ್ರ ನಿರ್ದೇಶಕ ಸುಗೀಶ್ ಹೇಳುವ ಮಾತು.

ಕರ್ನಾಟಕ ಸ್ವರ್ಗ: ಶಕೀಲಾ ನಟಿ

ಶಕೀಲಾ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಈಕೆ ಎಲ್ಲರಿಗೂ ಗೊತ್ತು. ಆದರೆ ಈಕೆಯ ಫಿಲಂಗಳು ಸಾಕಷ್ಟು ಹಿಂದಿಗೂ ಇತರ ಉತ್ತರ ಭಾರತೀಯ ಭಾಷೆಗಳಿಗೂ ಡಬ್ ಆಗಿವೆ. ಹೀಗಾಗಿ ಈಕೆ ಒಂಥರಾ ಪಾನ್ ಇಂಡಿಯಾ ಸ್ಟಾರ್. ರಜನೀಕಾಂತ್‌ಗೂ ಇಲ್ಲದಂಥ ಫ್ಯಾನ್‌ ಫಾಲೋಯಿಂಗ್ ಈಕೆಗೆ ಇದೆ. ಆದರೆ ಅದೊಂದು ಬಗೆಯ ಕಳಂಕಿತ ಇಮೇಜು. ಪ್ರಸ್ತುತ ಇಂದ್ರಜಿತ್‌ ಲಂಕೇಶ್‌ ಈಕೆಯ ಹೆಸರಿನಲ್ಲಿ ಬಾಲಿವುಡ್‌ ಬಯೋಪಿಕ್‌ ಮಾಡುತ್ತಿದ್ದು, ಶಕೀಲಾ ಪಾತ್ರದಲ್ಲಿ ರಿಚಾ ಚಡ್ಡಾ ನಟಿಸುತ್ತಿದ್ದಾರೆ. 

Follow Us:
Download App:
  • android
  • ios