ಬಾಲಿವುಡ್‌ನ ಶ್ರೀಮಂತ ನಟ ಶಾರುಕ್‌ ಖಾನ್‌, ಎರಡು ತಿಂಗಳಿನಿಂದ ಮನೆಯೊಳಗೇ ಇದ್ದಾರೆ. ಹಾಗಂತ ಸುಮ್ಮನೆ ಉಳಿದಿಲ್ಲ. ಕೋವಿಡ್‌ ಪೀಡಿತರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಅವರು ಲಾಕ್‌ಡೌನ್‌ನಿಂದ ತಾವು ಕಲಿತ ಪಾಠಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

ಬಾಲಿವುಡ್‌ನ ಶ್ರೀಮಂತ ನಟ ಶಾರುಕ್‌ ಖಾನ್‌, ಎರಡು ತಿಂಗಳಿನಿಂದ ಮನೆಯೊಳಗೇ ಇದ್ದಾರೆ. ಹಾಗಂತ ಸುಮ್ಮನೆ ಉಳಿದಿಲ್ಲ. ಕೋವಿಡ್‌ ಪೀಡಿತರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಲೇ ಇದ್ದಾರೆ. 
ಇತ್ತೀಚೆಗೆ ಅವರು ಲಾಕ್‌ಡೌನ್‌ನಿಂದ ತಾವು ಕಲಿತ ಪಾಠಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವು ಹೀಗಿವೆ: 

"ನಾವು ನಮ್ಮ ಅಗತ್ಯಕ್ಕೆ ಬೇಕಾದುದಕ್ಕಿಂತ ಹೆಚ್ಚು ವಸ್ತುಗಳನ್ನು ಗುಡ್ಡೆ ಹಾಕಿಕೊಂಡು ಬದುಕುತ್ತಿದ್ದೇವೆ. ಅವುಗಳಲ್ಲಿ ಹಲವು ವಸ್ತುಗಳು ನಾವು ಈ ಮೊದಲು ನಮಗೆ ಬೇಕಾದೀತು ಅಂತ ಯೋಚಿಸಿದಂತೆ ನಮಗೆ ನಿಜಕ್ಕೂ ಅಗತ್ಯವೇ ಇಲ್ಲ.''

"ನಮ್ಮ ಸುತ್ತಮುನ್ನ ಅನಗತ್ಯ ವ್ಯಕ್ತಿಗಳೂ ಸಾಕಷ್ಟಿದ್ದಾರೆ. ಅವರಲ್ಲಿ ಹಲವರು ಅಲ್ಲಿ ಬೇಕಿಲ್ಲ. ಭಾವನಾತ್ಮಕವಾಗಿ, ನಾವು ಬಂಧಿತರಾದ ಸ್ಥಿತಿಯಲ್ಲಿ ನಾವು ಯಾರ ಜೊತೆ ಮುಕ್ತವಾಗಿ ಮಾತನಾಡಬಹುದೋ, ಅದಕ್ಕಿಂತ ಹೆಚ್ಚು ಮಂದಿ ನಮಗೆ ನಿಜಕ್ಕೂ ಅಗತ್ಯವಿಲ್ಲ''

"ಕೆಲವು ಸಂಗತಿಗಳನ್ನು ನಾವು ನಾವು ಭದ್ರತೆ ಎಂದು ತಿಳಿದುಕೊಂಡಿದ್ದೇವೆ. ಆದರೆ ಇಂಥ ಸುಳ್ಳು ಭ್ರಮೆಗಳು ಕಳಚಿಕೊಂಡಾಗ ನಾವು ನಮ್ಮ ಬದುಕನ್ನು ನಿಜಕ್ಕೂ ಬೇರೊಂದು ರೀತಿಯಲ್ಲಿ ಮರು ರೂಪಿಸಿಕೊಳ್ಳಬಹುದು. ಗಡಿಯಾರವನ್ನು ಒಂದಿಷ್ಟು ಚಲಿಸದಂತೆ ನಿಲ್ಲಿಸಬಹುದು''

"ಜೀವನದಲ್ಲಿ ನಾವು ಯಾರು ಯಾರೊಂದಿಗೇ ಸುಮ್ಮನೇ ಜೋರಾಗಿ ಜಗಳ ಆಡಿರುತ್ತೇವೆ. ಆದರೆ ನಿಜಕ್ಕೂ ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ ನಗಬಹುದು. ಆಗ ನಮಗೆ, ನಮ್ಮ ಐಡಿಯಾಗಳೂ ಅವರ ಐಡಿಯಾಗಳಿಗಿಂತ ಭಾರಿ ದೊಡ್ಡದೇನಲ್ಲ ಎಂದು ಅರಿವಾಗುತ್ತದೆ''

ಲಾಕ್ ಡೌನ್ ನಲ್ಲಿ ಸುಹಾನಾ ಎಂಥಾ ಕೆಲಸ ಮಾಡ್ಕೊಂಡ್ರು, ತಾಯಿ ಸಪೋರ್ಟ್ ಬೇರೆ! ...

""ಎಲ್ಲದಕ್ಕಿಂತ ಹೆಚ್ಚಾಗಿ, ಪ್ರೀತಿ ಅತ್ಯಂತ ಮುಖ್ಯವಾದುದು, ಎಲ್ಲದಕ್ಕಿಂತ ಮೇಲೆ ನಿಲ್ಲುವಂಥದು. ಯಾರು ನಿಮಗೆ ಏನೇ ಹೇಳಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.'' ಈ ನುಡಿಗಳ ಜೊತೆಗೆ ಅವರು ತಮ್ಮ ಇತ್ತೀಚಿನ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಸಾಲ್ಟ್ ಆಂಡ್‌ ಪೆಪ್ಪರ್‌ ಲುಕ್‌ನಲ್ಲಿದ್ದಾರೆ.

ಶಾರುಕ್‌ ಖಾನ್‌ ಮುಂಬಯಿಯಲ್ಲಿರುವ ತಮ್ಮ ಮನೆಯಲ್ಲಿ ಪತ್ನಿ ಗೌರಿ, ಮಕ್ಕಳಾದ ಆರ್ಯನ್ ಹಾಗೂ ಅಬ್ರಾಮ್ ಹಾಗೂ ಸುಹಾನಾರೊಂದಿಗೆ ಇದ್ದಾರೆ. ಇತ್ತೀಚೆಗೆ ಅವರು ಕೋವಿಡ್‌ ಪೀಡಿತರಿಗಾಗಿ ಹಣಕಾಸು ಸಂಗ್ರಹಿಸಲು ನಡೆಸಲಾದ ಐ ಫಾರ್‌ ಇಂಡಿಯಾ ಸಂಗೀತ ಕಛೇರಿಯಲ್ಲಿ ಭಾಗವಹಿಸಿದ್ದರು. 

ಐಶ್ವರ್ಯ ಅತ್ತಿಗೆ ಶ್ರೀಮಾ ಸೌಂದರ್ಯದಲ್ಲಿ ಅತ್ತಿಗೆಗಿಂತ ಕಡಿಮೆಯಿಲ್ಲ! 

ಶಾರುಕ್ ತಮ್ಮ ಕೆಲವು ಕಂಪನಿಗಳ ಮೂಲಕ- ಕೋಲ್ಕತ್ತಾ ನೈಟ್‌ ರೈಡರ್ಸ್, ರೆಡ್‌ ಚಿಲ್ಲೀಸ್‌ ಎಂಟರ್‌ಟೇನ್‌ಮೆಂಟ್‌, ರೆಡ್‌ ಚಿಲ್ಲೀಸ್‌ ವಿಎಫ್‌ಎಕ್ಸ್‌, ಮೀರ್‌ ಫೌಂಡೇಶನ್‌ಗಳ ಮೂಲಕ ನಾನಾ ಸಹಾಯಾರ್ಥ ಕಾರ್ಯಕ್ರಮಗಳನ್ನು ನಡೆಸಿ, ಅದರಿಂದ ಬಂದ ಹಣವನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ. 25,000 ಪಿಪಿಇ ಕಿಟ್‌ಗಳನ್ನು ತರಿಸಿ ಮಹಾರಾಷ್ಟ್ರ ರಾಜ್ಯದಾದ್ಯಂತ ವೈದ್ಯಕಯ ಸೇವೆಯಲ್ಲಿರುವವರಿಗೆ ಹಂಚಿದ್ದಾರೆ. ತಮ್ಮ ಕಚೇರಿ ಕಟ್ಟಡವನ್ನು ಕೋವಿಡ್‌ ಕ್ವಾರಂಟೇನ್‌ಗೆ ಬಳಸಲು ಬೃಹನ್ಮುಂಬಯಿ ಕಾರ್ಪೊರೇಶನ್‌ಗೆ ಬಿಟ್ಟುಕೊಟ್ಟಿದ್ದರು. 

45 ವರ್ಷದ ಮಲೈಕಾಗೆ 34 ವರ್ಷದ ಅರ್ಜುನ್‌ ಮೋಸ ಮಾಡಿದ್ರಾ? 

ಇನ್ನೊಂದು ಟ್ವೀಟ್‌ನಲ್ಲಿ ಅವರು ಹೀಗೆ ಹೇಳಿದ್ದರು- "ಇಂಥ ಸಂಕಷ್ಟದ ಸಮಯದಲ್ಲಿ ನಾವೂ ಪರಿಶ್ರಮ ವಹಿಸಿ ದುಡಿಯುವುದು, ನಿಮ್ಮ ಸುತ್ತಮುತ್ತಲೂ ಇರುವವರನ್ನು ದುಡಿಸುವುದು, ನಿಮಗೆ ಪರಿಚಯವಿಲ್ಲದವರನ್ನೂ ದುಡಿಮೆಗೆ ಹಚ್ಚುವುದು, ಅಗತ್ಯ. ಯಾರೊಬ್ಬರೂ ತಾವು ಏಕಾಂಗಿ ಎಂದು ಭಾವಿಸದಂತೆ ನಾವು ಮಾಡಬೇಕು. ನಾವೆಲ್ಲರೂ ಪರಸ್ಪರರನ್ನು ಕಾಳಜಿ ವಹಿಸಬೇಕು ಹಾಗೂ ಇನ್ನೊಬ್ಬರಿಗಾಗಿ ಸ್ವಲ್ಪವಾದರೂ ದುಡಿಯಬೇಕು. ಭಾರತ ಮತ್ತು ಭಾರತೀಯರು ಸದಾ ಒಂದೇ ಕುಟುಂಬ.''