Asianet Suvarna News Asianet Suvarna News

ರಣವೀರ್ ನಟನೆಯ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾಗೆ ಬಿಡುಗಡೆಗೂ ಮುನ್ನವೇ ಸಂಕಷ್ಟ

  • ಜಯೇಶ್‌ಭಾಯ್ ಜೋರ್ದಾರ್ ಸಿನಿಮಾಗೆ ಬಿಡುಗಡೆಗೂ ಮುನ್ನವೇ ಸಂಕಷ್ಟ
  • ರಣವೀರ್ ಸಿಂಗ್‌ ಅಭಿನಯದ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾ
  • ಭ್ರೂಣ ಹತ್ಯೆಯ ವಿರೋಧಿಸುವ ಸಿನಿಮಾ
what Delhi High Court says on Ranveer Singhs Jayeshbhai Jordaar Movie akb
Author
Bangalore, First Published May 10, 2022, 3:42 PM IST

ಬಾಲಿವುಡ್‌ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಜಯೇಶ್‌ಭಾಯ್ ಜೋರ್ದಾರ್ (Jayeshbhai Jordaar) ಸಿನಿಮಾಗೆ ಬಿಡುಗಡೆಗೂ ಮುನ್ನವೇ ಕಾನೂನು ಸಂಕಷ್ಟ ಎದುರಾಗಿದೆ. ಟ್ರೇಲರ್‌ನಲ್ಲಿರುವ ದೃಶ್ಯ ವಿರೋಧಿಸಿ ದೆಹಲಿ ಹೈಕೋರ್ಟ್‌ನಲ್ಲಿ (Delhi High Court) ಈ ಸಿನಿಮಾದ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ ಎಂದು livelaw.in ವರದಿ ಮಾಡಿದೆ. ಈ ಸಿನಿಮಾದ ಟ್ರೈಲರ್‌ನಲ್ಲಿ ಪ್ರಸವಪೂರ್ವ ಲಿಂಗ (prenatal sex-determination) ಪತ್ತೆಯ ದೃಶ್ಯದ ಚಿತ್ರಣದ ಬಗ್ಗೆ ವಕೀಲ ಪವನ್ ಪ್ರಕಾಶ್ ಪಾಠಕ್ (Pawan Prakash Pathak) ಅವರ ಮೂಲಕ ಯೂತ್ ಅಗೇನ್ಸ್ಟ್ ಕ್ರೈಮ್ (Youth Against Crime) ಹೆಸರಿನ ಎನ್‌ಜಿಒವೊಂದು ಅರ್ಜಿ ಸಲ್ಲಿಸಿದೆ. 

ಈ ನಡುವೆ ಪ್ರಸವಪೂರ್ವ ಲಿಂಗ ನಿರ್ಣಯದಂತಹ ಕಾಯಿದೆಯನ್ನು ಸಣ್ಣ ವಿಚಾರ ಎಂದು ಪರಿಗಣಿಸಲಾಗದು ಎಂದು ಸೋಮವಾರ (ಮೇ.9) ದೆಹಲಿ ಹೈಕೋರ್ಟ್ ಹೇಳಿದೆ ಎಂದು ಸುದ್ದಿಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. ಲಿಂಗ ಆಯ್ಕೆಗಾಗಿ ಅಲ್ಟ್ರಾಸೌಂಡ್ ತಂತ್ರಜ್ಞಾನದ ಬಳಕೆಯನ್ನು ತೋರಿಸುವ ಟ್ರೇಲರ್‌ನಲ್ಲಿನ ದೃಶ್ಯವನ್ನು ಗಮನಿಸಿದ ಕೋರ್ಟ್ ಈ ಹೇಳಿಕೆ ನೀಡಿದೆ.

ರಣವೀರ್ ಸಿಂಗ್ ಟ್ರೋಲ್‌; ನಟನನ್ನು ಉರ್ಫಿ ಜಾವೇದ್ ಹೋಲಿಸಿದ ಜನ!

ಟ್ರೇಲರ್‌ನಲ್ಲಿ ಮಹಿಳೆಯನ್ನು ಗುಟ್ಟಾಗಿ ವೈದ್ಯರ ಬಳಿಗೆ ಕರೆದೊಯ್ಯಲಾಗಿದೆ ಎಂದು ತೋರಿಸಲು ಏನೂ ಇಲ್ಲ. ಯಾವುದೇ ಗರ್ಭಿಣಿ ಮಹಿಳೆಯನ್ನು ತಿಂಗಳ ತಪಾಸಣೆಗೆ ಸೋನೋಗ್ರಫಿ ಯಂತ್ರದೊಂದಿಗೆ ವಾಡಿಕೆಯಂತೆ ಕೇಂದ್ರಕ್ಕೆ ಕರೆದೊಯ್ಯಬಹುದು ಮತ್ತು ಇದನ್ನು ಯಾವುದೇ ಬಂಧನವಿಲ್ಲದೆ ಅಥವಾ ರಹಸ್ಯವಿಲ್ಲದೇ ಮಾಡಬಹುದು ಎಂದು ಟ್ರೇಲರ್ ವೀಕ್ಷಿಸಿದ ನಂತರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ (Vipin Sanghi) ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ (Navin Chawla)ಅವರನ್ನೊಳಗೊಂಡ ಪೀಠ ಹೇಳಿದೆ. ಅಲ್ಟ್ರಾಸೌಂಡ್ ಕ್ಲಿನಿಕ್ ದೃಶ್ಯದಲ್ಲಿ ಲಿಂಗ ಆಯ್ಕೆಗಾಗಿ ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನು ಸೆನ್ಸಾರ್ ಇಲ್ಲದೆ  ಬಹಿರಂಗವಾಗಿ ಜಾಹೀರಾತು ಮಾಡಲಾಗುತ್ತಿದೆ ಮತ್ತು PC & PNDT ಕಾಯಿದೆಯ ಸೆಕ್ಷನ್ 3, 3 ಎ, 3 ಬಿ, 4, 6 ಹಾಗೂ 22 ರ ಪ್ರಕಾರ ಇದಕ್ಕೆ ಅನುಮತಿ ಇಲ್ಲ ಹಾಗಾಗಿ ತ್ವರಿತ ವಿಚಾರಣೆ ನಡೆಸುವಂತೆ ವಕೀಲ ಪವನ್ ಪ್ರಕಾಶ್ ಪಾಠಕ್ ಮೂಲಕ ಅರ್ಜಿ ಸಲ್ಲಿಸಿದ ಅರ್ಜಿದಾರ  ಎನ್‌ಜಿಒ ಹೇಳಿತ್ತು.

ಮಗ ಅಥವಾ ಮಗಳು ಯಾವುದು ಬೇಕೆಂದು ಬಹಿರಂಗ ಪಡಿಸಿದ Ranveer Singh; ನಟ ತಂದೆಯಾಗಲು ರೆಡಿ ?

ಈ ಚಲನಚಿತ್ರವು  ಹೆಣ್ಣು ಮಗುವನ್ನು ಉಳಿಸಿ ಘೋಷಣೆಯನ್ನು ಉತ್ತೇಜಿಸಲು ಮತ್ತು ಅದು ಹೆಣ್ಣು ಭ್ರೂಣ ಹತ್ಯೆಯ (foeticide) ವಿರುದ್ಧವಾಗಿದ್ದರೂ, ಚಿತ್ರದ ಟ್ರೈಲರ್ ಅಲ್ಟ್ರಾಸೌಂಡ್ ತಂತ್ರವನ್ನು ಬಳಸುವುದನ್ನು ಜಾಹೀರಾತು ಮಾಡುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರ ಪರ ವಾದ ಮಂಡಿಸಿದ ವಕೀಲರು ಟ್ರೇಲರ್‌ನಲ್ಲಿ ಹಕ್ಕು ನಿರಾಕರಣೆ ಇದೆ ಎಂದು ವಾದಿಸಿದರು.

ಇದಕ್ಕೆ ಉತ್ತರವಾಗಿ, ಹಕ್ಕು ನಿರಾಕರಣೆಯು  ಗೋಚರಿಸುವುದಿಲ್ಲ ಅಥವಾ ಸ್ಪಷ್ಟವಾಗಿಲ್ಲ ಎಂದು ಪೀಠವು ಹೇಳಿದೆ. ಅಲ್ಲದೇ ಈ ಬಗ್ಗೆ ಸೂಚನೆಗಳನ್ನು ಪಾಲಿಸುವಂತೆ ಸಲಹೆಗಾರರಿಗೆ ಕೋರ್ಟ್‌ ನಿರ್ದೇಶಿಸಿತು. ನಾವು ನೋಡುತ್ತೇವೆ ಮತ್ತು ಈ ಬಗ್ಗೆ ತೃಪ್ತರಾಗದಿದ್ದರೆ, ನಾವು ಇದನ್ನು ಅನುಮತಿಸುವುದಿಲ್ಲ. ನೀವು ಸೂಚನೆಗಳನ್ನು ಪಡೆದುಕೊಳ್ಳಿ ಇಲ್ಲದಿದ್ದರೆ, ನಾವು ಇದಕ್ಕೆ ತಡೆ ನೀಡಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.  ನಾಳೆಯೂ ವಿಚಾರಣೆ ಮುಂದುವರಿಯಲಿದೆ.

ಕಳೆದ ತಿಂಗಳು ಜಯೇಶ್‌ಭಾಯ್ ಜೋರ್ದಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದರಲ್ಲಿ ರಣವೀರ್, ಶಾಲಿನಿ ಪಾಂಡೆ (Shalini Pandey)ಅವರನ್ನು ಮದುವೆಯಾಗಿರುವ ಗುಜರಾತಿ ವ್ಯಕ್ತಿಯಾಗಿ ಮತ್ತು ಓರ್ವ ಮಗಳ ತಂದೆಯಾಗಿ ಚಿತ್ರಿಸಲಾಗಿದೆ. ಆದರೆ, ಗ್ರಾಮದ ಸರಪಂಚ್‌ ಆಗಿರುವ ಅವರ ತಂದೆ, ತಾಯಿ ಈ ಬಾರಿ ಮೊಮ್ಮಗನನ್ನು ಹೊಂದಲು  ಇವರಿಗೆ ಹಿಂಸೆ ಮಾಡುತ್ತಾರೆ. ಜಯೇಶ್‌ಭಾಯ್ ಜೋರ್ದಾರ್ ಸಿನಿಮಾವನ್ನು ಯುವ ನಿರ್ದೇಶಕ   ದಿವ್ಯಾಂಗ್ ಠಕ್ಕರ್ (Divyang Thakkar) ನಿರ್ದೇಶಿಸಿದ್ದಾರೆ. ಇದು ಮೇ 13 ಶುಕ್ರವಾರ 2022 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
 

Follow Us:
Download App:
  • android
  • ios