ಈ ಮೂರು ಸಿನಿಮಾಗಳು ಹಾರ್ಟ್‌ಬೀಟ್ ಹೆಚ್ಚಿಸುತ್ತೆ! ಹುಷಾರ್, ನಿಮ್ಮ ಮೈಂಡ್ ಹ್ಯಾಂಗ್ ಆಗಬಹುದು!
ಒಂಟಿಯಾಗಿ ಕತ್ತಲೆಯಲ್ಲಿ ಸಿನಿಮಾ ನೋಡಿದ್ರೆ ಚಿತ್ರದ ಕಥೆ ನಿಮ್ಮನ್ನು ಬಹಳ ದಿನಗಳವರೆಗೆ ಕಾಡುತ್ತದೆ. ಚಿತ್ರದ ಪಾತ್ರಗಳು ಜೊತೆಯಲ್ಲಿಯೇ ಇದ್ದಂತೆ ಭಾಸವಾಗುತ್ತದೆ. ಹಾಗಾದ್ರೆ ಆ ಸಿನಿಮಾಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
ಕೆಲವರಿಗೆ ಎಷ್ಟೇ ಭಯವಾದ್ರೂ ಸಸ್ಪೆನ್ಸ್ ಆಂಡ್ ಹಾರರ್ ಸಿನಿಮಾ ನೋಡುವ ಕ್ರೇಜ್ ಇರುತ್ತದೆ. ಆದ್ರೆ ಯಾವ ಸಿನಿಮಾ ನೋಡಬೇಕು ಅನ್ನೋ ಗೊಂದಲ ಇರುತ್ತದೆ. ಇಂದು ನಾವು ನಿಮಗೆ ಹಾಲಿವುಡ್‌ನ ಮೂರು ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಸಿನಿಮಾಗಳ (Suspense And Thriiler Cinema) ಬಗ್ಗೆ ಹೇಳುತ್ತಿದ್ದೇವೆ. ನೆಟ್‌ಫ್ಲಿಕ್ಸ್ ನಲ್ಲಿ ಈ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ವೀಕ್ಷಿಸಬಹುದು. ಈ ಚಿತ್ರ ವೀಕ್ಷಣೆ (Watching Movies) ಬಳಿಕ ನಿಮ್ಮ ಮೈಂಡ್ ಹ್ಯಾಂಗ್ ಆಗಬಹುದು. ಹಾಗಾಗಿ ಜೊತೆಯಲ್ಲಿ ಯಾರಾದ್ರೂ ಇರಲೇಬೇಕು. ಒಂಟಿಯಾಗಿ ಕತ್ತಲೆಯಲ್ಲಿ ಸಿನಿಮಾ ನೋಡಿದ್ರೆ ಚಿತ್ರದ ಕಥೆ ನಿಮ್ಮನ್ನು ಬಹಳ ದಿನಗಳವರೆಗೆ ಕಾಡುತ್ತದೆ. ಚಿತ್ರದ ಪಾತ್ರಗಳು ಜೊತೆಯಲ್ಲಿಯೇ ಇದ್ದಂತೆ ಭಾಸವಾಗುತ್ತದೆ. ಹಾಗಾದ್ರೆ ಆ ಸಿನಿಮಾಗಳು ಯಾವವು ಎಂಬುದನ್ನು ನೋಡೋಣ ಬನ್ನಿ.
ಗರ್ಲ್ ಇನ್ ದಿ ಬೇಸ್ಮೆಂಟ್ - Girl In the Basement
ಇದೊಂದು ನೈಜ ಕಥೆಯಾಧಾರಿತ ಸಿನಿಮಾವಾಗಿದ್ದು, 2021ರಲ್ಲಿ ಬಿಡುಗಡೆಗೊಂಡಿತ್ತು. ತಂದೆಯೋರ್ವ ತನ್ನ ಮಗಳನ್ನು 24 ವರ್ಷಗಳ ಕಾಲ ನೆಲಮಹಡಿಯಲ್ಲಿ ಬಚ್ಚಿಟ್ಟಿರುತ್ತಾನೆ. 24 ವರ್ಷದಿಂದ ಮಗಳಿಗೆ ಕಿರುಕುಳ ನೀಡುತ್ತಿರುತ್ತಾನೆ. ಆಕೆ ಮಗಳನ್ನು ಬಂಧಿಯಾಗಿಟ್ಟಿರುತ್ತಾನೆ? ಆಕೆ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಬರ್ತಾಳಾ? 24 ವರ್ಷದಿಂದ ಒಂದೇ ಕೋಣೆಯಲ್ಲಿದ್ದ ಆಕೆ ಹೊರ ಜಗತ್ತಿಗೆ ಬಂದಾಗ ಯುವತಿಯ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ. ಈ ಸಿನಿಮಾವನ್ನು ಅಮೇಜಾನ್ ಪ್ರೈಮ್‌ನಲ್ಲಿ ನೋಡಬಹುದು. ಹಿಂದಿ ಭಾಷೆಯಲ್ಲಿಯೂ ಸಿನಿಮಾ ವೀಕ್ಷಕರಿಗೆ ಲಭ್ಯವಿದೆ.
ಒಟಿಟಿಯಲ್ಲಿ ನೀವು ನೋಡಲೇಬೇಕಾದ 6 ಅತ್ಯುತ್ತಮ ತಮಿಳು ಸಸ್ಪೆನ್ಸ್ ಥ್ರಿಲ್ಲರ್ಸ್
ದಿ ಸ್ಕಿನ್ ಐ ಲಿವ್ ಇನ್- The Skin I Live in
ದಿ ಸ್ಕಿನ್ ಐ ಲಿವ್ ಇನ್ ಚಿತ್ರದಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಆಗುತ್ತದೆ. ಯುವತಿಯ ತಂದೆ ಖ್ಯಾತ ವೈದ್ಯನಾಗಿರುತ್ತಾನೆ. ಮಗಳ ಮೇಲೆ ಅತ್ಯಾಚಾರ ಮಾಡಿದ ಯುವಕನನ್ನು ಪತ್ತೆ ಮಾಡುವ ತಂದೆ, ಆತನನ್ನು ಉಪಾಯವಾಗಿ ಕೋಣೆಯೊಂದರಲ್ಲಿ ಕೂಡಿ ಹಾಕುತ್ತಾನೆ. ನಂತರ ಯುವಕನ ಮೇಲೆ ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತಾಳೆ. ಪ್ರತಿಯೊಂದು ಪ್ರಯೋಗಗಳು ನಿಮ್ಮ ಹೃದಯ ಬಡಿತವನ್ನು ಹೆಚ್ಚಳ ಮಾಡುತ್ತದೆ. ಯುವಕ ನಿರಂತರ ವೈಜ್ಞಾನಿಕ ಪ್ರಯೋಗಗಳಿಂದ ಯುವತಿಯಾಗಿ ಬದಲಾಗುತ್ತಾನೆ. ನಂತರ ಏನಾಗುತ್ತೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಬಹುದು. ಈ ಸಿನಿಮಾವನ್ನ ನೆಟ್‌ಫ್ಲಿಕ್ಸ್ ನಲ್ಲಿ ನೋಡಬಹುದಾಗಿದೆ. ಈ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು. ಆಂಟೋನಿಯೊ ಬಾಂಡೆರಾಸ್, ಎಲೆನಾ ಅನಾಯಾ, ಮಾರಿಸಾ ಪರೆಡೆಸ್, ಜಾನ್ ಕಾರ್ನೆಟ್ ಮತ್ತು ರಾಬರ್ಟೊ ಅಲಾಮೊ ಸೇರಿದಂತೆ ಹಲವು ಕಲಾವಿದರು ದಿ ಸ್ಕಿನ್ ಐ ಲಿವ್ ಇನ್ ಸಿನಿಮಾದಲ್ಲಿ ನಟಿಸಿದ್ದಾರೆ.
ಫಾಲ್ ಗೈ -Fall Guy
ಇದೊಂದು ಸಿನಿಮಾ ಚಿತ್ರೀಕರಣವನ್ನು ಹೊಂದಿರುವ ಕಥೆಯಾಗಿದೆ. ಈ ಚಿತ್ರದಲ್ಲಿ ನಾಯಕ ನಟನ ಕಿಡ್ನ್ಯಾಪ್ ಆಗುತ್ತದೆ. ಹೀರೋನನ್ನು ಹುಡುಕುವ ಜವಾಬ್ದಾರಿ ಸ್ಟಂಟ್ ಮ್ಯಾನ್ ಮೇಲೆ ಬೀಳುತ್ತೆ. ಈ ಸ್ಟಂಟ್ ಮ್ಯಾನ್ ಹೇಗೆ ಹೀರೋನನ್ನು ಪತ್ತೆ ಹಚ್ಚುತ್ತಾನೆ ಎಂಬುವುದು ಚಿತ್ರದ ಒನ್ ಲೈನ್ ಸ್ಟೋರಿ. ಇದರ ಜೊತೆ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳನ್ನು ಹೇಗೆ ಚಿತ್ರೀಕರಣ ಮಾಡಲಾಗುತ್ತೆ ಎಂಬುವುದನ್ನು ಅದ್ಭುತವಾಗಿ ತೋರಿಸಲಾಗಿದೆ. ಫಾಲ್ ಗೈ ಮೇ 2024ರಂದು ರಿಲೀಸ್ ಆಗಿದೆ. ಈ ಸಿನಿಮಾ ಸಹ ಅಮೆಜಾನ್‌ನಲ್ಲಿ ಲಭ್ಯವಿದೆ. ರಯಾನ್ ಗೊಸ್ಲಿಂಗ್, ಎಮಿಲಿ ಬ್ಲಂಟ್ ಆರನ್, ಟೇಲರ್-ಜಾನ್ಸನ್ ಸೇರಿದಂತೆ ದೊಡ್ಡ ತಾರಾಗಣವನ್ನ ಫಾಲ್ ಗೈ ಹೊಂದಿದೆ.ಗ್ಲೆನ್ ಎ. ಲಾರ್ಸನ್, ಡ್ರೂ ಪಿಯರ್ಸ್ ಅವರ ಕಥೆಗೆ ಡೇವಿಡ್ ಲೀಚ್ ಆಕ್ಷನ್ ಕಟ್ ಹೇಳಿದ್ದಾರೆ.
ಒಟಿಟಿಯಲ್ಲಿ ಮಿಸ್ ಮಾಡದೆ ನೋಡಬೇಕಾದ 6 ರೋಮ್ಯಾಂಟಿಕ್ ವೆಬ್ ಸೀರಿಸ್!