ಒಟಿಟಿಯಲ್ಲಿ ಮಿಸ್ ಮಾಡದೆ ನೋಡಬೇಕಾದ 6 ರೋಮ್ಯಾಂಟಿಕ್ ವೆಬ್ ಸೀರಿಸ್!

ರೋಮ್ಯಾಂಟಿಕ್ ಲೈಫ್ ಎಲ್ಲರೂ ಬಯಸುತ್ತಾರೆ. ಆದರೆ ಎಷ್ಟರಮಟ್ಟಿಗೆ ರೋಮ್ಯಾಂಟಿಕ್ ಅನ್ನೋದೇ ಪ್ರಶ್ನೆ. ನಿಮ್ಮೊಳಗಿನ ರೋಮ್ಯಾನ್ಸ್‌ಗೆ ಹೊಸ ಹುರುಪು ತುಂಬುವ ಹಲವು ವೆಬ್ ಸೀರಿಸ್‌ಗಳಿವೆ. ಈ ಪೈಕಿ ನೋಡಲೇಬೇಕಾದ 6 ಅತ್ಯುತ್ತಮ ರೋಮ್ಯಾಂಟಿಕ್ ವೆಬ್ ಸೀರಿಸ್ ಇಲ್ಲಿದೆ

Best Romantic web series you can watch with your partner top six list ckm

ಯೌವ್ವನದಲ್ಲಿ ಚಿಗುರೊಡೆಯುವ ಪ್ರೀತಿ, ರೋಮ್ಯಾನ್ಸ್, ಕುತೂಹಲ ಬೆಟ್ಟಕ್ಕಿಂತ ಎತ್ತರ, ಜೇನಿಗಿಂತ ಸಿಹಿ. ಇನ್ನು ದಾಂಪತ್ಯ ಜೀವನದಲ್ಲಿನ ರೋಮ್ಯಾನ್ಸ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಅನ್ನೋ ಆರೋಪ ಬಹುತೇಕರದ್ದು. ಆದರೆ ನಿಮ್ಮೊಳಗಿನ ರೋಮ್ಯಾನ್ಸ್‌ಗೆ ಹೊರ ಹುರುಪು ತುಂಬಿ, ಜೀವನೋತ್ಸಾಹ ಹೆಚ್ಚಿಸಲು ಒಟಿಟಿಯಲ್ಲಿ ಹಲವು ರೋಮ್ಯಾಂಟಿಕ್ ವೆಬ್ ಸೀರಿಸ್‌ಗಳಿವೆ. ಈ ಪೈಕಿ 6 ರೋಮ್ಯಾಂಟಿಕ್ ವೆಬ್ ಸೀರಿಸ್ ಮಿಸ್ ಮಾಡದೇ ನೋಡಲೇಬೇಕು.

ಮಿಸ್‌ಮ್ಯಾಚ್ಡ್
ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಮಿಸ್‌ಮ್ಯಾಚ್ಡ್ ರೋಮ್ಯಾಂಟಿಕ್ ವೆಬ್ ಸಿರೀಸ್ ಅತ್ಯಂತ ಜನಪ್ರಿಯವಾಗಿದೆ. ಸಂಧ್ಯಾ ಮೆನನ್ ರಚಿತ ಡಿಂಪಲ್ ಮೆಟ್ಸ್ ರಿಶಿ ಕಾದಂಬರಿಯನ್ನು ವೆಬ್ ಸೀರಿಸ್ ಮೂಲಕ ತೆರೆಗೆ ತರಲಾಗಿದೆ. 2020ರಲ್ಲಿ ಮೊದಲ ಸೀರಿಸ್ ಬಿಡುಗಡೆಯಾಗಿತ್ತು. ಡಿಂಪಲ್ ಹಾಗೂ ರಿಶಿ ನಡುವೆ ಪ್ರೀತಿ, ರೋಮ್ಯಾನ್ಸ್ ಈ ವೆಬ್ ಸೀರಿಸ್‌ನ ಕಥಾ ವಸ್ತು. ಭಾರತೀಯ ಕೌಟುಂಬಿಕ ಜೀವನ, ಪದ್ಧತಿ, ಪ್ರೀತಿ, ಪೋಷಕರು ಹೀಗೆ ಹಲವು ಸೆಲೆಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಇದರ ನಡುವೆ ಇವರಿಬ್ಬರ ಪ್ರೀತಿಯೇ ಪ್ರಮುಖ ಕಥಾವಸ್ತು.

ಕರೀನಾ ಕಪೂರ್ ಕ್ರ್ಯೂ ಸೇರಿದಂತೆ ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗ್ತಿವೆ ಈ ಪ್ರಮುಖ ಸಿನಿಮಾಗಳು..

ಬ್ರೋಕನ್ ಬಟ್ ಬ್ಯೂಟಿಫುಲ್
ರೋಮ್ಯಾಂಟಿಕ್ ಸೀರಿಸ್ ಪೈಕಿ ಬ್ರೋಕನ್ ಬಟ್ ಬ್ಯೂಟಿಫುಲ್ ಸೀರಿಸ್ ಕೂಡ ಅಷ್ಟೇ ಜನಪ್ರಿಯ. ವೀರ್ ಹಾಗೂ ಸಮೀರಾ ಪಾತ್ರಗಳನ್ನು ನಿಮ್ಮನ್ನು ಬಿಟ್ಟು ಬಿಡದೆ ಕಾಡುತ್ತದೆ. ಒಡೆದ ಹೃದಯಗಳು ಒಂದಾಗುವ ರೋಮ್ಯಾಂಟಿಕ್ ಪ್ರೀತಿಯ ಕಥಾಹಂದರ ಹೊಂದಿರುವ ಈ ಸೀರಿಸ್ ಪ್ರಸ್ತುತ ಭಾರತದ ಯುವ ಸಮೂಹದ ತುಮುಲಗಳ ನಡುವಿನ ಸಂಘರ್ಷವನ್ನೂ ಬಿಚ್ಚಿಡುತ್ತದೆ.

ಪರ್ಮನೆಂಟ್ ರೂಮೇಟ್ಸ್
ಮೂರು ಸೀಸನ್ ಒಟ್ಟು 17 ಎಪಿಸೋಡ್ ಹೊಂದಿರುವ ಪರ್ಮನೆಂಟ್ ರೂಮೇಟ್ಸ್ ಸೀರಿಸ್ ಸುಂದರ ಪ್ರೀತಿಯ ಕತೆ ಬಿಚ್ಚಿಡುತ್ತದೆ. ಅಮೆರಿಕದಿಂದ ಮರಳಿದ ಮಿಕೇಶ್ ಹಾಗೂ ತಾನ್ಯ ನಡುವಿನ ಪ್ರೀತಿ, ಎದುರಾಗುವ ಸವಾಲುಗಳು ಹೀಗೆ ಹಲವು ಸನ್ನಿವೇಶಗಳು ಈ ಸೀರಿಸ್ ಒಳಗೊಂಡಿದೆ. 

ಲಿಟನ್ ಥಿಂಗ್ಸ್
2016ರಲ್ಲಿ ಲಿಟಲ್ ಥಿಂಗ್ಸ್ ಸೀರಿಸ್ ರಿಲೀಸ್ ಆಗಿದೆ. ಧ್ರುವ್ ಸೆಹಗಲ್ ನಿರ್ದೇಶನದ ವೆಸ್ ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಧ್ರುವ್ ಹಾಗೂ ಕಾವ್ಯ ನಡುವಿನ ಪ್ರೀತಿ, ಮುಂಬೈ ನಗರದಲ್ಲಿ ವಾಸಿಸುವ ಹಂಬಲ, ಕುಟುಂಬಗಳಿಂದ ಎದುರಾಗುವ ಸಮಸ್ಯೆಗಳು, ಎದುರಿಸು ರೀತಿ ಸೇರಿದಂತೆ ಭಿನ್ನ ಕತೆಯ ಮೂಲಕ ರೋಮ್ಯಾಂಟಿಕ್ ಪ್ರೀತಿ ಮುಂದುವರಿಯುತ್ತದೆ.

ಕರ್ಲೇ ತೂ ಬಿ ಮೊಹಬ್ಬತ್
ಎಕ್ತಾ ಕಪೂರ್ ನಿರ್ಮಾಣದ ಕರ್ಲೇ ತೂ ಬಿ ಮೊಹಬ್ಬದ್ ಸೀರಿಸ್‌ನಲ್ಲಿ ರಾಮ್ ಕಪೂರ್ ಹಾಗೂ ಸಾಕ್ಷಿ ತನ್ವಾರ್ ಅಭಿನಯಿಸಿದ್ದಾರೆ. ಪ್ಲೇ ಬಾಯ್ ಆಗಿ ಕಾಣಿಸಿಕೊಂಡಿರುವ ರಾಮ ಕಪೂರ್ ಹಾಗೂ ನಾಯಕಿ ನಡುವಿನ ರೋಮ್ಯಾಂಟಿಕ್ ಪ್ರೀತಿ ಇದರ ಕಥಾವಸ್ತು.

ಹೀರಾಮಂಡಿ ವೆಬ್ ಸೀರಿಸ್: ವೇಶ್ಯೆಯರೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತೆತ್ತಿದ್ದು ಸುಳ್ಳಲ್ಲ!

ಬ್ಯಾಂಡಿಶ್ ಬಂಡಿತ್ಸ್
ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿರುವ ಬ್ಯಾಂಡಿಶ್ ಬಂಡಿತ್ಸ್ ಸೀರಿಸ್‌ನ್ನು ಅಮೃತ್‌ಪಾಲ್ ಸಿಂಗ್ ಬಿಂದ್ರಾ ನಿರ್ದೇಶಿಸಿದ್ದಾರೆ. ಮ್ಯೂಸಿಕಲ್ ಜರ್ನಿಯ ರೋಮ್ಯಾಂಟಿಕ್ ಜರ್ನಿಯ ಕತೆ ಹೊಂದಿದೆ. 

ಈ ರೋಚಕ ಹಾಗೂ ರೋಮ್ಯಾಂಟಿಕ್ ವೆಬ್ ಸೀರಿಸ್ ಹೊಸ ಹುರುಪಿನ ಜೊತೆ ಸಮಾದದಲ್ಲಿನ ಒರೆ ಕೋರೆಗಳು, ಹುಳುಕುಗಳನ್ನು ಕಣ್ತೆರೆಸುತ್ತದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ನಿಂದ ಮನೋಂಜನೆಗೆ ಕೊರತೆಯಿಲ್ಲ. ಸಿನಿಮಾ, ಸೀರಿಸ್ ಸೇರಿದಂತೆ ಎಲ್ಲವೂ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಸುಲಭವಾಗಿ ಲಭ್ಯವಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ಗಳಲ್ಲಿ ಮನೋರಂಜನೆಯ ಪ್ರವಾಹವೇ ಇದೆ. 
 

Latest Videos
Follow Us:
Download App:
  • android
  • ios