ನೀನು ನಿನ್ನ ದೇಶಕ್ಕೆ ಹಿಂದಿರುಗಿ ಹೋಗು, ಅಲ್ಲಿ ಗ್ಯಾಂಗ್ ರೇಪ್ ಅಗುತ್ತದೆ ಎಂದು ಪ್ರಿಯಾಂಕ ಚೋಪ್ರಾಳನ್ನು ಹಿಯಾಳಿಸಿದ್ದರು ಜನ. ಇದನ್ನು ಮೀರಿ ಪಿಗ್ಗಿ ಬೆಳೆದದ್ದು ಹೇಗೆ..?

ಕ್ವಂಟಿಕೋಗೂ ಮೊದಲು ಅಮೆರಿಕದಲ್ಲಿ ಟಿವಿಯಲ್ಲಿ ಮೊದಲ ಬಾರಿ ಕಾಣಿಸಿಕೊಂಡಾಗ ಪ್ರಿಯಾಂಕ ಚೋಪ್ರಾ ಎದುರಿಸಿದ ನಿಂದನೆಗಳು ಒಂದೆರಡಲ್ಲ. ಇನ್ ಮಯ್ ಸಿಟಿ ಹಾಡು ರಿಲೀಸ್ ಆದಾಗ ಎದುರಿಸಿದ ನೋವಿನ ಬಗ್ಗೆ ನಟಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಪ್ರಿಯಾಂಕ ಚೋಪ್ರಾ ಹೇಳದೆ ಉಳಿಸಿದ ರಹಸ್ಯಗಳು!

ತನ್ನ ಮೊದಲ ಸಾಂಗ್ನಲ್ಲಿಯೇ ಬರೀ ನೆಗೆಟಿವ್ ಪ್ರತಿಕ್ರಿಯೆಯನ್ನಷ್ಟೇ ಎದುರಿಸಿದ್ದರು ಪ್ರಿಯಾಂಕ. ಈಮೇಲ್, ಟ್ವೀಟ್ ಮತ್ತೆ ಎಲ್ಲಿ ನೋಡಿದರೂ ಬರೀ ನೆಗೆಟಿವ್ ಪ್ರತಿಕ್ರಿಯೆ. ಈ ಸಂದರ್ಭದಲ್ಲಿ ಕುಗ್ಗಿ ಹೋಗಿದ್ದರು ಪ್ರಿಯಾಂಕ.

ಮಿಡಲ್ ಈಸ್ಟ್ಗೆ ಹಿಂದಿರುಗಿ ಬುರ್ಖಾ ಹಾಕಿಕೋ, ನಿನ್ನ ದೇಶಕ್ಕೆ ಹಿಂದಿರುಗಿ ಅಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗುವ ಎಂದು ನಿಂದಿಸಿದ್ದರು.