ಪ್ರಿಯಾಂಕ ಚೋಪ್ರಾಳ ಆತ್ಮಕತೆ 'ಅನ್‌ಫಿನಿಷ್ಡ್' ಬಿಡುಗಡೆ ಆಗಿದೆ. ಅದರಲ್ಲಿರೋ ಹಲವಾರು ವಿಚಾರಗಳು ಹೊಸ ವಿಷಯ ಎಂಬಂತೆ ಅಲ್ಲಲ್ಲಿ ಪ್ರಕಟವಾಗ್ತಿವೆ. ಆದರೆ ಪ್ರಿಯಾಂಕ ಇಲ್ಲಿ ಹೇಳಿಕೊಂಡದ್ದಕ್ಕಿಂತಲೂ ಹೇಳದೆ ಉಳಿಸಿದ್ದೇ ಹೆಚ್ಚು ಎಂಬುದು ನಿಮಗೆ ಗೊತ್ತೆ?

ಯಾವುದೋ ಡೈರೆಕ್ಟರ್ ನನ್ನ ಎದೆಯ ಅಳತೆ ಸರಿಯಿಲ್ಲ, ಅಲ್ಲಿಗೆ ಸರ್ಜರಿ ಮಾಡಿಸಿಕೋ, ಪೃಷ್ಠದ ಭಾಗಕ್ಕೆ ಹತ್ತಿ ತುಂಬಿಸಿ ಉಬ್ಬಿ ಕಾಣುವಂತೆ ಮಾಡು ಎಂದೆಲ್ಲಾ ಹೇಳಿದ ಎಂದು ಪ್ರಿಯಾಂಕ ತನ್ನ ಆತ್ಮಕತೆಯಲ್ಲಿ ಬರೆದಿದ್ದಾಳೆ. ಹಾಗೇ ತನಗೂ ಕೂಡ ಮೀಟೂ ಸನ್ನಿವೇಶ ಎದುರಾಗಿತ್ತು, ಕೆಲವು ಡೈರೆಕ್ಟರ್‌ಗಳು ತನ್ನನ್ನು ಬಳಸಿಕೊಳ್ಳಲು ಯತ್ನಿಸಿದರು ಅಂತಲೂ ಬರೆದಿದ್ದಾಳೆ. ಆದರೆ ಅವರ ಹೆಸರನ್ನು ಪಿಂಕಿ ಬರೆದಿಲ್ಲ. ಹೀಗಾಗಿ ಅದು ಒಂದು ರೋಚಕ ಓದು ಆಗಿಯಷ್ಟೇ ಉಳಿದಿದೆ ವಿನಃ ಸತ್ಯಗಳನ್ನು ಬಯಲು ಮಾಡುವ ಆತ್ಮಕತೆಯಾಗಿ ಉಳಿದಿಲ್ಲ.
ಹಾಗೆ ನೋಡಿದರೆ ಪಿಂಕಿ ತನ್ನ ಆತ್ಮಕತೆಯಲ್ಲಿ ಬಹಳಷ್ಟನ್ನು ಹೇಳಿಕೊಂಡಿಲ್ಲ. ಅದರಲ್ಲೂ ತನಗಿದ್ದ ಬಾಯ್‌ಫ್ರೆಂಡ್‌ಗಳು, ತನ್ನ ಕೆರಿಯರ್‌ನುದ್ದಕ್ಕೂ ತಾನು ನಡೆಸಿದ ರೊಮ್ಯಾನ್ಸ್, ತನಗಿದ್ದ ಮದ್ಯ, ಸಿಗರೇಟು ವ್ಯಸನ, ಡಿಪ್ರೆಶನ್‌ನ ಸಮಸ್ಯೆ ಇತ್ಯಾದಿಗಳನ್ನು ಆಕೆ ಬರೆದಿಲ್ಲ. ಕೆಲವು ಬಾಯ್‌ಫ್ರೆಂಡ್‌ಗಳ ರೆಫರೆನ್ಸ್ ಹಾಗೆ ಬಂದು ಹೀಗೆ ಹೋಗುತ್ತದೆ. ಅವರ ಹೆಸರನ್ನೂ ಆಕೆ ಬರೆದಿಲ್ಲ. 
ಪ್ರಿಯಾಂಕ ಚಿತ್ರರಂಗದ ಹಲವು ಸಂಬಂಧಗಳ ನಡುವೆ ಬಿರುಗಾಳಿ ಎಬ್ಬಿಸಿದ್ದಾಳೆ. ಉದಾಹರಣೆಗೆ ಶಾರುಕ್ ಖಾನ್‌ ಹಾಗೂ ಅಕ್ಷಯ್‌ ಕುಮಾರ್‌ ಸಂಸಾರದಲ್ಲಿ ಆಕೆ ಎಬ್ಬಿಸಿದ ಕೋಲಾಹಲ ಸಣ್ಣದೇನಲ್ಲ. ಈಕೆ ಬ್ಯೂಟಿ ಕ್ವೀನ್ ಆಗಿದ್ದಳು. ನಂತರ ಬಾಲಿವುಡ್‌ಗೆ ಬಂದವಳು. ಹಾಗೆ ಬಂದ ಕಾಲದಲ್ಲಿ ಫ್ಯಾಶನ್‌ ಐಕನ್ ಆಗಿದ್ದಳು. ಇನ್ನೂ ಹಸಿಹಸಿಯಾಗಿದ್ದ ಈಕೆಯ ಕಡೆ ಮೊದಲು ಆಕರ್ಷಿತನಾದವನು ಅಕ್ಷಯ್ ಕುಮಾರ್. ಅದಾಗಲೇ ಅಕ್ಷಯ್ ಟ್ವಿಂಕಲ್‌ ಖನ್ನಾ ಜೊತೆ ಮದುವೆಯಾಗಿದ್ದ. ಮಕ್ಕಳೂ ಇದ್ದರು. ಅಕ್ಷಯ್ ಮತ್ತು ಪ್ರಿಯಾಂಕ ಜೋಡಿ ಕೆಲವು ಸೂಪರ್ ಹಿಟ್‌ ಫಿಲಂಗಳನ್ನೂ ಕೊಟ್ಟಿತು. ಅದೇ ಸಂದರ್ಭದಲ್ಲಿ ಅವರಿಬ್ಬರ ನಡುವೆ ಕುಚ್‌ಕುಚ್‌ ನಡೆಯುತ್ತಿತ್ತು. ಇಬ್ಬರೂ ಶೂಟಿಂಗ್‌ ಸೆಟ್‌ನಿಂದ ರಹಸ್ಯವಾಗಿ ಮಾಯವಾಗಿ ಯಾವುದೋ ಹೋಟೆಲ್ ರೂಮಿನಲ್ಲಿ ಪ್ರತ್ಯಕ್ಷರಾಗುತ್ತಿದ್ದರು. ಫಾರಿನ್ ಶೂಟಿಂಗ್ ಅಂತ ಸನ್ನಿವೇಶ ಸೃಷ್ಟಿಸಿಕೊಂಡು ಬೇಕೆಂದೇ ಹೋಗುತ್ತಿದ್ದರು. ಇದೆಲ್ಲಾ ಟ್ವಿಂಕಲ್‌ ಖನ್ನಾಗೆ ಗೊತ್ತಾಯಿತು. ಆಕೆ ಅಕ್ಷಯ್‌ ಕುಮಾರ್‌ಗೆ ಒಂದು ಖಡಕ್‌ ವಾರ್ನಿಂಗ್ ಕೊಟ್ಟಳು. ಇನ್ನೊಮ್ಮೆ ಆಕೆಯ ಜೊತೆ ಹೋದರೆ ಕೊಟಿಗಟ್ಟಲೆ ಮೌಲ್ಯದ ಡೈವೋರ್ಸ್ ತೆಗೆದುಕೊಂಡು ನಿನ್ನ ಬದುಕನ್ನು ಬರ್ಬಾದ್ ಮಾಡುವೆ ಎಂದು ಎಚ್ಚರಿಸಿದಳು. ಅಕ್ಷಯ್ ಕುಮಾರ್ ಹಿಂದೆಮುಂದೆ ಮುಚ್ಚಿಕೊಂಡು ಟ್ವಿಂಕಲ್ ಜೊತೆಗೆ ಮನೆಗೆ ತೆರಳಿದ. ಪಾಪ ಪ್ರಿಯಾಂಕ ಒಂಟಿಯಾದಳು.

ಪ್ರಿಯಾಂಕ ಎದೆಯತ್ತ ದಿಟ್ಟಿಸಿ ಸರ್ಜರಿ ಮಾಡಿಸ್ಕೋ ಎಂದ ಡೈರೆಕ್ಟರ್ ...

ಆದರೆ ಹೆಚ್ಚು ದಿನವೇನೂ ಆಕೆ ಹಾಗಿರಲಿಲ್ಲ. ಆಗ ಸಿಕ್ಕಿದವನು ಶಾರುಕ್ ಖಾನ್. ಒಂದು ಸನ್ನಿವೇಶದಲ್ಲಿ ಶಾರುಕ್ ಖಾನ್‌ನ ಹೆಗಲ ಮೇಲಿದ್ದ ಜಾಕೆಟ್, ಪಿಂಕಿಯ ಮೈಮೇಲೆ ಪತ್ತೆಯಾಗಿತ್ತು. ಇದನ್ನು ಯಾರು ಕೊಟ್ಟದ್ದು ಎಂದು ಕೇಳಲಾಗಿ, ಇದು ನನ್ನ ಲವರ್‌ನದು ಎಂದು ಪಿಂಕಿ ಹೇಳಿದ್ದಳು. ಶಾರುಕ್ ಖಾನ್ ಕೂಡ, ಮನೆಯಲ್ಲಿ ಗೌರಿಯಂಥ ಅಪ್ಪಟ ಅಪರಂಜಿ ಹೆಂಡತಿ ಇದ್ದಾಗಲೂ ಪಿಂಕಿಯ ಜೊತೆಗೆ ಚಕ್ಕಂದ ನಡೆಸಿದ್ದ. ಪಿಂಕಿ ಕೂಡ ಆತ ವಿವಾಹಿತ ಎಂಬುದು ಗೊತ್ತಿದ್ದರೂ ಶಾರುಕ್ ಜೊತೆ ಫ್ಲರ್ಟ್ ಮಾಡಿದ್ದಳು. ಕಡೆಗೆ ಗೌರಿ ಖಾನ್ ಮಧ್ಯೆ ಪ್ರವೇಶಿಸಿ ಕೆಂಡಗಣ್ಣು ಬೀರಬೇಕಾಯಿತು. ಅಂದಿನಿಂದ ಶಾರುಕ್ ಮತ್ತು ಪ್ರಿಯಾಂಕ ಜೊತೆಯಾಗಿ ನಟಿಸಿಲ್ಲ. 


ಇದಾದ ಬಳಿಕ ಶಹೀದ್ ಕಪೂರ್, ರಣಬೀರ್ ಕಪೂರ್ ಮುಂತಾದವರ ಜತೆಗೆಲ್ಲಾ ಪಿಂಕಿ ಓಡಾಡಿದಳು. ತನ್ನ ಆತ್ಮಕತೆಯಲ್ಲಿ ಇವರ ಜೊತೆ ನಟಿಸಿದ್ದನ್ನು ಬರೆದುಕೊಂಡಿದ್ದಾಳೆ ಬಿಟ್ಟರೆ. ಇವರ ಜೊತೆಗಿದ್ದ ರೊಮ್ಯಾನ್ಸ್ ಬಗ್ಗೆಗೆಲ್ಲಾ ಪ್ರಿಯಾಂಕ ಬರೆದೇ ಇಲ್ಲ. 

ಬ್ರೇಕಪ್ ನಂತ್ರ ಯಾವುದೇ ಚಟ ಹತ್ತಿಸ್ಕೊಳ್ಳಿಲ್ಲ, ಆದ್ರೆ ಸಿಕ್ಕಾಪಟ್ಟೆ ಡುಮ್ಮಿಯಾದ್ರು ಪ್ರಿಯಾಂಕ ...

ಈಗಲೂ ಪಿಂಕಿ ಹಾಗೂ ಬಾಲಿವುಡ್‌ನ ಅನೇಕ ದೊಡ್ಡ ನಟರ ನಡುವೆ ಸುಮಧುರ ಬಾಂಧವ್ಯ ಇಲ್ಲ. ಅದಕ್ಕೆ ಕಾರಣ, ಇವರೆಲ್ಲರ ಜೊತೆಗೂ ಪಿಂಕಿ ಒಂದಲ್ಲ ಒಂದು ಬಾರಿ ಫ್ಲರ್ಟ್ ಮಾಡಿ, ಕೈಕೊಟ್ಟು ತೆರಳಿದ್ದಾಳೆ. ಅಥವಾ ಸನ್ನಿವೇಶಗಳು ಆಕೆಯನ್ನು ಹಾಗೆ ಮಾಡುವಂತೆ ಪ್ರೇರೇಪಿಸಿವೆ. ಪಾಪ, ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಬಂದ ಪ್ರಿಯಾಂಕಳನ್ನು ಇವರೆಲ್ಲ ಬಳಸಿಕೊಂಡಿರಲೂ ಬಹುದು. ಆದರೆ ಬುದ್ಧಿ ಕಲಿತ ಮೇಲೆ ಪ್ರಿಯಾಂಕ, ಈ ಗುಂಡುಗೋವಿಗಳನ್ನೆಲ್ಲ ಬಿಟ್ಟ ನಿಕ್ ಜೊನಾಸ್ ಎಂಬ 'ಪುಟ್ಟ ಬಾಲಕ'ನನ್ನು ಕಟ್ಟಿಕೊಂಡು ಅಮೆರಿಕಕ್ಕೆ ಹಾರಿಬಿಟ್ಟಳು. ಸ್ವತಃ ನಿಕ್ ಜೊನಾಸ್ ಶ್ರೀಮಂತ. ನಿಕ್ ಜೊತೆ ಸೆಟಲ್ ಆಗಿರುವ ಪಿಂಕಿಗೆ ಈಗ ಬಾಲಿವುಡ್‌ನಲ್ಲಿ ಯಾವ ಫಿಲಂಗಳೂ ಇಲ್ಲ. ಅಮೆರಿಕದಲ್ಲೂ ಕ್ವಾಂಟಿಕೋ ಸೀರಿಯಲ್ ಬಳಿಕ ಇನ್ಯಾವುದೂ ದೊರೆತಂತಿಲ್ಲ.  

10 ವರ್ಷಕ್ಕೂ ಹೆಚ್ಚು ಹಲವರ ಜೊತೆ ಸಂಬಂಧ, ನಂತರ ಸಿಂಗಲ್ ಎಂದ ಪ್ರಿಯಾಂಕ ...