ಆಸ್ಕರ್ ವಿನ್ನಿಂಗ್ ಚಿತ್ರದಲ್ಲಿ ನಟಿಸಿರುವ ರೇ ಇನ್ನಿಲ್ಲ. ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್‌ ಬರೆದ ರಾಜಮೌಳಿ....  

ರಾಮ್‌ಚರಣ್ ಮತ್ತು ಜ್ಯೂನಿಯರ್ ಎನ್‌ಟಿಆರ್‌ ನಟಿಸಿರುವ ಆರ್‌ಆರ್‌ಆರ್‌ ಸಿನಿಮಾದಲ್ಲಿ ಐರಿಶ್ ನಟ ರೇ ಸ್ಟೀವನ್ಸನ್ ಅಭಿನಯಿಸಿದ್ದಾರೆ. ರೇ ಅಗಲಿರುವ ವಿಚಾರವನ್ನು ರಾಜಮೌಳಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ರಾಜಮೌಳಿ ಪೋಸ್ಟ್‌:

'ಶಾಕಿಂಗ್ ವಿಚಾರ....ನನಗೆ ನಂಬಲಾಗದ ಸುದ್ದಿ ಇದು. ಸಿನಿಮಾ ಸೆಟ್‌ನಲ್ಲಿ ಕೆಲಸ ಮಾಡುವಾಗ ರೇ ಅದೆಷ್ಟೀ ಎನರ್ಜಿ ಮತ್ತು ವೈಬ್ರೆನ್ಸ್‌ ತಂದುಕೊಟ್ಟಿದ್ದಾರೆ. ಅವರ ಜೊತೆ ಮಾಡಿದ ಖುಷಿ ನನಗೆ ತುಂಬಾ ಇದೆ. ನನ್ನ ಪ್ರಾರ್ಥನೆ ಅವರ ಕುಟುಂಬದ ಜೊತೆ ಇರಲಿದೆ. ರೇ ಆತ್ಮಕ್ಕೆ ಶಾಂತಿ ಸಿಗಲಿ' 

RRRನ ನಾಟು ನಾಟು ಹಾಡಿಗೆ G20 ಪ್ರತಿನಿಧಿಗಳ ಸಖತ್ ಡಾನ್ಸ್: ವಿಡಿಯೋ ವೈರಲ್

ಜನಪ್ರಿಯಾ ಹಾಲಿವುಡ್‌ ಸಿನಿಮಾಗಳಾದ ಪನಿಶರ್‌:ದಿ ವಾರ್‌ ಜೋನ್‌, ಕಿಂಗ್ ಆಥರ್, ಥಾರ್‌ ಸಿನಿಮಾಗಳಲ್ಲಿ ರೇ ಸ್ಟೀವನ್ಸನ್ ಅಭಿನಯಿಸಿದ್ದಾರೆ. ಹೆಚ್‌ಬಿಓ ಚಾನೆಲ್‌ನ ಫೇಮಸ್‌ ಶೋ ಆಗಿದ್ದ ರೆಮೋ ಮತ್ತು ಅಶೋಕಾ ಸೀರಿಸ್‌ನಲ್ಲೂ ನಟಿಸಿದ್ದಾರೆ. ಮೇ 21 ಇಟಲಿಯಲ್ಲಿ ರೇ ಅಗಲಿದ್ದಾರೆ. 58 ವರ್ಷದ ರೇ ಕೆಲವೇ ದಿನಗಳಲ್ಲಿ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು ಎನ್ನಲಾಗಿದೆ. 

ಇತ್ತೀಚಿಗೆ ಎಸ್‌ ಎಸ್‌ ರಾಜಮೌಳಿ ನಿರ್ದೇಶನ ಮಾಡಿದ ಆಸ್ಕರ್ ಅವಾರ್ಡ್‌ ಸಿನಿಮಾ ಆರ್‌ಆರ್‌ಆರ್‌ನಲ್ಲಿ ದುಷ್ಟ ಗವರ್ನರ್ ಸ್ಕಾಟ್ ಬಕ್ಸ್ಟನ್ ಪಾತ್ರದಲ್ಲಿ ರೇ ಅಭಿನಯಿಸಿದರು. ಪಾತ್ರಕ್ಕೆ ಸೂಕ್ತವಾಗಿರುವ ವ್ಯಕ್ತಿ ಎಂಬ ಮೆಚ್ಚುಗೆಗೂ ಪಾತ್ರರಾಗಿದ್ದರು. ಇದಾದ ನಂತರ ಡಿಸ್ನಿ+ ಸ್ಟಾರ್‌ವಾರ್ಸ್‌ನ ಸೀರಿಸ್‌ ಆದ ಅಶೋಕದಲ್ಲಿ ಅಭಿನಯಿಸಿದ್ದಾರೆ. 

ಅನಾರೋಗ್ಯದಿಂದ ಅಗಲಿರುವುದಾ ಅಥವಾ ಮತ್ತೇನಾದರೂ ಕಾರಣ ಇದ್ಯಾ ಅನ್ನೋ ವಿಚಾರಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. 

ನಾಟು ನಾಟು ಹಾಡಿಗೆ 'ಟೆಸ್ಲಾ ಲೈಟ್‌ ಶೋ' ಗೌರವ, ರಾಜಮೌಳಿ ಏನಂದ್ರು?

ರೇ ಸ್ಟೀವನ್ಸನ್ ಹುಟ್ಟಿದ್ದು ಮೇ 25, 1964 ಐರ್ಲೆಂಡ್‌ನಲ್ಲಿ. 1990ರಲ್ಲಿ ಟಿವಿ ಶೋ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಜರ್ನಿ ಆರಂಭಿಸಿದ್ದರು. 2000ರಲ್ಲಿ ಹಾಲಿವುಡ್‌ ಪ್ರಪಂಚಕ್ಕೆ ಎಂಟ್ರಿ ಕೊಟ್ಟರು. 2004ರಲ್ಲಿ ರಿಲೀಸ್ ಆದ ಅಡ್ವೆಂಜರ್ ಸಿನಿಮಾ ಕಿಂಗ್ ಆಥರ್‌ನಲ್ಲಿ ರೌಂಡ್‌ ಟೇಬಲ್‌ನಲ್ಲಿ ಕುಳಿತಿದ್ದ ರಾಜರಲ್ಲಿ ಒಬ್ಬರಾಗಿ ಡಾಗೋನ್ ಪಾತ್ರ ಮಾಡಿದ್ದಾರೆ.