Asianet Suvarna News Asianet Suvarna News

RRRನ ನಾಟು ನಾಟು ಹಾಡಿಗೆ G20 ಪ್ರತಿನಿಧಿಗಳ ಸಖತ್ ಡಾನ್ಸ್: ವಿಡಿಯೋ ವೈರಲ್

ಆಸ್ಕರ್ ಪ್ರಶಸ್ತಿಗೆ ಭಾಜನವಾದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿನ ಕ್ರೇಜ್‌ ಇನ್ನು ಕಡಿಮೆ ಆಗಿಲ್ಲ. ಜಿ.20 ಪ್ರತಿನಿಧಿಗಳು ಕೂಡ ಈಗ ಈ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ.  ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

G20 Delegates Dance Naatu Naatu song in sidelines of the second Agriculture Deputies Meeting at Chandigarh akb
Author
First Published Mar 30, 2023, 4:09 PM IST

ಚಂಡೀಗಢ:  ಆಸ್ಕರ್ ಪ್ರಶಸ್ತಿಗೆ ಭಾಜನವಾದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿನ ಕ್ರೇಜ್‌ ಇನ್ನು ಕಡಿಮೆ ಆಗಿಲ್ಲ.  ಹಿರಿಯರು ಕಿರಿಯರು ಎನ್ನದೇ ಎಲ್ಲರೂ ಈ ಹಾಡಿಗೆ ಕುಣಿದು ಕುಪ್ಪಳಿಸುತ್ತಾರೆ. ಜೊತೆಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಆಸ್ಕರ್ ನಂತರ ವಿದೇಶದಲ್ಲೂ ಈ ಹಾಡಿನ ಬಗ್ಗೆ ಕ್ರೇಜ್ ಹೆಚ್ಚಾಗಿದೆ.  ವಿದೇಶಿಯರು ಕೂಡ ನಾಟು ನಾಟಿಗೆ ಕುಣಿದು ವಿಡಿಯೋ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿದೇಶಿಯರ ಸಾಕಷ್ಟು ವೀಡಿಯೋಗಳನ್ನು  ನೋಡಬಹುದಾಗಿದೆ. ಇದರ ಜೊತೆಗೆ ಈಗ ಜಿ.20 ಪ್ರತಿನಿಧಿಗಳು ಕೂಡ ಈಗ ಈ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ.  ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಜಿ.20 ಶೃಂಗದ ಆತಿಥ್ಯ ಅಧ್ಯಕ್ಷತೆಯನ್ನು ಭಾರತ ಹೊತ್ತಿರುವುದು ಈಗ ಎಲ್ಲರಿಗೂ ಗೊತ್ತೇ ಇದೆ. G20 ಕಾರ್ಯಕ್ರಮದಲ್ಲಿ ಕೃಷಿ ವರ್ಕಿಂಗ್ ಗ್ರೂಪ್‌ನ ಎರಡನೇ ಕೃಷಿ ಪ್ರತಿನಿಧಿಗಳ ಸಭೆಯ (ADM) ನಂತರ ವಿವಿಧ ದೇಶಗಳ ಜಿ20 ಪ್ರತಿನಿಧಿಗಳು ನಾಟು ನಾಟು ಹಾಡಿಗೆ ಜಬರ್ದಸ್ತ್ ಆಗಿ ಡಾನ್ಸ್ ಮಾಡಿದರು. 

ಮೊನ್ನೆ ನಾಟು ನಾಟು, ಇಂದು ಲುಂಗಿ ಡ್ಯಾನ್ಸ್, ಕೊಹ್ಲಿ ಸ್ಟೆಪ್ಸ್‌ಗೆ ಅಭಿಮಾನಿಗಳು ಫಿದಾ!

ಚಂಡೀಗಢದಲ್ಲಿ (Chandigarh) ಬುಧವಾರ ಈ ಸಭೆ ಆರಂಭವಾಗಿದ್ದು, ಜಿ20 ನಿಯೋಗದ ಪ್ರತಿನಿಧಿಗಳು ಇಲ್ಲಿ ನಾಟು ನಾಟು ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದ ವಿಡಿಯೋ ವೈರಲ್ ಆಗಿದೆ.  ಅವರೆಲ್ಲರೂ ಅಕ್ಷರಶಃ ಸಂತಸದ ಮೂಡ್‌ನಲ್ಲಿದ್ದರು. ಮಿಶ್ರ ಸಂಸ್ಕೃತಿಯ ಈ ನಾಟು ನಾಟು ಹಾಡು ಈಗಾಗಲೇ ಆಸ್ಕರ್‌ ಪ್ರಶಸ್ತಿ ಗಳಿಸಿದೆ.  ಆದರೆ ಈ ಪ್ರಶಸ್ತಿ ಗಳಿಸುವ ಮೊದಲೇ ಈ ಹಾಡು ವಿದೇಶಗಳಲ್ಲೂ ಗಮನ ಸೆಳೆದಿತ್ತು, ವಿದೇಶಗಳಲ್ಲೂ ಅನೇಕ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಇನ್ನು ಜನವರಿಯಲ್ಲಿ ನಾಟು ನಾಟು ಹಾಡಿಗೆ  ಗೋಲ್ಡನ್‌ ಗ್ಲೋಬ್‌ನಿಂದ ಬೆಸ್ಟ್ ಒರಿಜಿನಲ್‌ ಸಾಂಗ್ ಕೆಟಗರಿಯಲ್ಲಿ ಪ್ರಶಸ್ತಿ ಗಳಿಸಿತ್ತು. 

'Naatu Naatu' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ರೈನಾ-ಪಠಾಣ್ ಜೋಡಿ..! ವಿಡಿಯೋ ವೈರಲ್

ಇದಾಗಿ 5 ದಿನಗಳ ನಂತರ RRR ವಿಮರ್ಶಕರ ಆಯ್ಕೆಯ ಪ್ರಶಸ್ತಿ ವಿಭಾಗದಲ್ಲಿ  ಮತ್ತೆರಡು ಪ್ರಶಸ್ತಿಗಳನ್ನು ಗಳಿಸಿದೆ.  ಒಂದು ಉತ್ತಮ ಹಾಡಿಗೆ ಪ್ರಶಸ್ತಿ ಬಂದಿದ್ದರೆ ಮತ್ತೊಂದು ಉತ್ತಮ  ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಬಂದಿತ್ತು.  ಅಲ್ಲದೇ ಈ ಹಾಡು ಹಿಂದಿ ಭಾಷೆಯಲ್ಲಿ ನಾಚೋ ನಾಚೋ ಎಂದು ಬಿಡುಗಡೆ  ಆಗಿದ್ದು, ತಮಿಳಿನಲ್ಲಿ ನಾಟು ಕೂಟು ಕನ್ನಡದಲ್ಲಿ ಹಳ್ಳಿ ನಾಟು ಮಲೆಯಾಳಂನಲ್ಲಿ ಕರಿಂಥೊಲ್ ಎಂದು ಈ ಹಾಡು ಆರಂಭವಾಗುತ್ತಿದೆ.  ಈ ಹಾಡಿನ ಹಿಂದಿ ವರ್ಶನ್‌ ಅನ್ನು ರಾಹುಲ್ ಸಿಪ್ಲಿಗುಂಜ್ (Rahul Sipligunj) ಹಾಗೂ ವಿಶಾಲ್ ಮಿಶ್ರಾ (Vishal Mishra) ಹಾಡಿದ್ದಾರೆ. 

ಈ ಹಾಡಿನಲ್ಲಿ ಟಾಲಿವುಡ್ ನಟರಾದ ಜೂನಿಯರ್ ಎನ್‌ಟಿಆರ್ (NTR) ಹಾಗೂ ರಾಮ್ ಚರಣ್ (Ram Charan) ಅವರು, ಹುಕ್ ಸ್ಟೆಪ್ ಅನ್ನು ಸಖತ್ ಆಗಿ ನಿರ್ವಹಿಸುತ್ತಿದ್ದಾರೆ. ಅವರಿಬ್ಬರ ಸಖತ್ ಜುಗಲ್‌ಬಂಧಿ (synchronisation) ಸಾಮಾಜಿಕ ಜಾಲತಾಣದಲ್ಲಿ ಹಾಡನ್ನು ವೈರಲ್ ಆಗುವಂತೆ ಮಾಡಿದೆ.

Follow Us:
Download App:
  • android
  • ios