Asianet Suvarna News Asianet Suvarna News

ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ನಟಿ ವಹೀದಾ ರೆಹಮಾನ್‌ ಆಯ್ಕೆ

ಬಾಲಿವುಡ್‌ ನಟಿ ವಹೀದಾ ರೆಹಮಾನ್‌ ಅವರನ್ನು ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
 

Waheeda Rehman honoured with Dadasaheb Phalke Award for contributions suc
Author
First Published Sep 26, 2023, 1:55 PM IST

ಹುಡುಗಿಯರು ಚಿತ್ರರಂಗಕ್ಕೆ ಕಾಲಿಟ್ಟರೆ ಅದೊಂದು ಅಸಭ್ಯ, ಅಶ್ಲೀಲ ಎನ್ನುವಂಥ ಕಾಲದಲ್ಲಿಯೇ ಬಾಲಿವುಡ್‌ನಲ್ಲಿ ಮೆರೆದು ಮಿಂಚಿ ಐದು ದಶಕಗಳ ಕಾಲ ಚಿತ್ರರಂಗವನ್ನು ಆಳಿದ ಹಿರಿಯ ನಟಿ ವಹೀದಾ ರೆಹಮಾನ್ (Waheeda Rehman) ಅವರನ್ನು ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ಯಾಸಾ, ಕಾಗಜ್ ಕೆ ಫೂಲ್, ಚೌಧವಿ ಕಾ ಚಾಂದ್, ಸಾಹೇಬ್ ಬಿವಿ ಔರ್ ಗುಲಾಮ್, ಗೈಡ್, ಖಾಮೋಶಿ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್‌ ಚಿತ್ರಗಳನ್ನು ನೀಡಿರುವ ನಟಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಸಂಸತ್ತು ಅಂಗೀಕರಿಸಿರುವ ಈ ಸಮಯದಲ್ಲಿ ವಹೀದಾ ರೆಹಮಾನ್ ಅವರಿಗೆ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿರುವುದು ಭಾರತೀಯ ಚಿತ್ರರಂಗದ ಪ್ರಮುಖ ಮಹಿಳೆಯೊಬ್ಬರಿಗೆ ಸೂಕ್ತವಾದ ಗೌರವವಾಗಿದೆ ಎಂದು ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. 

ಪ್ರಶಸ್ತಿಯ ಕುರಿತಂತೆ,  ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾಹಿತಿ ನೀಡಿದ್ದು,  ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ವಹೀದಾ ರೆಹಮಾನ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದಿದ್ದಾರೆ. ಐದು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ, ವಹೀದಾ ರೆಹಮಾನ್ ತನ್ನ ಪಾತ್ರಗಳನ್ನು ಅತ್ಯಂತ ಚತುರತೆಯನ್ನು ಮರೆದಿದ್ದಾರೆ.  ರೇಷ್ಮಾ ಮತ್ತು ಶೇರಾ ಚಿತ್ರಕ್ಕೆ ಇವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಮಾತ್ರವಲ್ಲದೇ ವಹೀದಾ ರೆಹಮಾನ್‌ ಅವರು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ.  ವಹೀದಾ ರೆಹಮಾನ್ ಅವರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಮಟ್ಟದ ವೃತ್ತಿಪರ ಶ್ರೇಷ್ಠತೆಯನ್ನು ಸಾಧಿಸಬಲ್ಲ ಭಾರತೀಯ ನಾರಿಯ ಸಮರ್ಪಣೆ, ಬದ್ಧತೆ ಮತ್ತು ಶಕ್ತಿಯನ್ನು ಉದಾಹರಿಸಿದ್ದಾರೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ನಿವೇದಿತಾ ಗೌಡ ಅಮ್ಮನೂ ಇಷ್ಟು ಕ್ಯೂಟಾ? ಫೋಟೋ ನೋಡಿ ಸಂತೂರ್​ ಮಮ್ಮಿ ಎಂದ ಫ್ಯಾನ್ಸ್​

ಸಿನಿಮಾ ಲೋಕದಲ್ಲಿ ಐದು  ದಶಕಗಳ ಕಾಲ ಸಕ್ರಿಯವಾಗಿದ್ದ ವಹೀದಾ ರೆಹಮಾನ್​ ಅವರು 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಅವರು ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. 1955ರಲ್ಲಿ ತೆಲುಗಿನ ‘ರೋಜುಲು ಮಾರಾಯಿ’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ವಹೀದಾ ಅವರು,  ದೇವ್​ ಆನಂದ್​ ನಟನೆಯ ‘ಸಿಐಡಿ’ ಸಿನಿಮಾ ಮೂಲಕ ವಹೀದಾ ರೆಹಮಾನ್​ ಅವರು ಬಾಲಿವುಡ್​ಗೆ ಎಂಟ್ರಿ ಕೊಟ್ಟವರು. ಇವರ ‘ಪ್ಯಾಸಾ’, ‘ಕಾಗಜ್​ ಕೆ ಫೂಲ್​’, ‘ಸಾಹಿಬ್​ ಬಿಬಿ ಔರ್​ ಗುಲಾಮ್​​’ ಮುಂತಾದ ಚಿತ್ರಗಳು ಸೂಪರ್‌ಹಿಟ್‌ ಎನಿಸಿ, ನಟಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು.
 
ಅಂದಹಾಗೆ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ. ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ (ದುಂಡಿರಾಜ್ ಗೋವಿಂದ ಫಾಲ್ಕೆ) ಯವರ ಜನ್ಮ ಶತಾಬ್ದಿಯ ವರ್ಷ'ವಾದ  1969ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ ಶುರುವಾಯಿತು. ಪ್ರತಿ ವರ್ಷದ ಪ್ರಶಸ್ತಿಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ನೀಡಲಾಗುತ್ತದೆ.

 

Follow Us:
Download App:
  • android
  • ios