Asianet Suvarna News Asianet Suvarna News

ನಿವೇದಿತಾ ಗೌಡ ಅಮ್ಮನೂ ಇಷ್ಟು ಕ್ಯೂಟಾ? ಫೋಟೋ ನೋಡಿ ಸಂತೂರ್​ ಮಮ್ಮಿ ಎಂದ ಫ್ಯಾನ್ಸ್​

ರೀಲ್ಸ್​ ಮೂಲಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿರೋ ನಟಿ ನಿವೇದಿತಾ ಅವರ ಅಪ್ಪ-ಅಮ್ಮನ ಜೊತೆಗಿರುವ ಫೋಟೋ ವೈರಲ್​ ಆಗಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ.  
 

Actress Niveditas photo with her parents has gone viral suc
Author
First Published Sep 25, 2023, 9:04 PM IST

ನಟಿ ನಿವೇದಿತಾ ಗೌಡ ಅವರು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಇರುವ ತಾರೆ. ಸದಾ ರೀಲ್ಸ್​ ಮಾಡುತ್ತಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda)  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾಗಿ ಲೈಫ್​ ಎಂಜಾಯ್​ ಮಾಡ್ತಿದ್ದಾರೆ. ಮದುವೆಯಾದ ಮೇಲೂ ರೀಲ್ಸ್​ ಮಾಡುತ್ತಲೇ ಚಿಕ್ಕ ಮಕ್ಕಳ ರೀತಿಯಲ್ಲಿ ಕುಣಿದಾಡುತ್ತಿರುತ್ತಾರೆ.  ಬೆಡಗಿ ದಿನನಿತ್ಯವೂ ಒಂದಿಲ್ಲೊಂದು ಪೋಸ್ಟ್​ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 
 
ಇಷ್ಟು ದಿನ ರೀಲ್ಸ್​ ಮೂಲಕ ಮನ ಗೆಲ್ಲುತ್ತಿದ್ದ ನಿವೇದಿತಾ ಅವರ ಅಪ್ಪ-ಅಮ್ಮನ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಇವರ ತಂದೆ ಉದ್ಯಮಿಯಾಗಿದ್ದು ಹೆಸರು ಲಕ್ಷ್ಮಣ್​. ತಾಯಿ ಹೇಮಾ ರಮೇಶ್​ ಗೃಹಿಣಿ. ಇದೀಗ ನಿವೇದಿತಾ ಅವರು ಅಪ್ಪ-ಅಮ್ಮನ ಜೊತೆ ಇರುವ ಕೆಲವು ಫೋಟೋಗಳನ್ನು ಸ್ಯಾಂಡಲ್​ವುಡ್​ ಸಮಾಚಾರ ಇನ್​ಸ್ಟಾಗ್ರಾಮ್​ ಶೇರ್​ ಮಾಡಿಕೊಂಡಿದೆ. ಇವರ ಅಮ್ಮ ಕೂಡ ನಿವೇದಿತಾ ಅವರಂತೆಯೇ ಕ್ಯೂಟ್​ ಆಗಿದ್ದು, ನೆಟ್ಟಿಗರು ಅಕ್ಕ-ತಂಗಿಯಂತೆ ಇದ್ದೀರಿ ಎಂದು ಕಮೆಂಟ್​ ಮಾಡುತ್ತಿದ್ದಾರೆ. ನಿವೇದಿತಾ ಬಾರ್ಬಿ ಡಾಲ್​ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ.


ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.  ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳುವುದಾದರೆ, ಚಂದನ್ ಮತ್ತು ನಿವೇದಿತಾ ಮದುವೆಯಾದದ್ದು  2020ರಲ್ಲಿ 26ರಂದು.  ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು. ನಿವೇದಿತಾ ಮತ್ತು ಚಂದನ್ ಶೆಟ್ಟಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬೆಳೆದು ಮನೆಯವರ ಸಮ್ಮುಖದಲ್ಲಿ ಮದುವೆ ಆಯ್ತು. ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದ ರೀತಿಯೂ ವಿಭಿನ್ನವಾಗಿತ್ತು.  ಕಳೆದ ವರ್ಷ ಇವರು ಕೂಡ ಅಪ್ಪ-ಅಮ್ಮ ಆಗಲಿದ್ದಾರೆ ಎಂದು ದೊಡ್ಡ ಸುದ್ದಿಯೇ ಹರಡಿತ್ತು. ನಂತರ ಅದು ಸುಳ್ಳು ಎನ್ನುವುದು ತಿಳಿದಿತ್ತು. 

ನಿವೇದಿತಾ ಡ್ಯಾನ್ಸ್​ ನೋಡಿ ಫ್ಯಾನ್ಸ್​ ಗರಂ! ಥೂ ಅದೇನ್ ಬಾಳಂತ ಬಾಳ್ತೀರಾ ಅಂತಿದ್ದಾರೆ ಅಭಿಮಾನಿಗಳು

ಇದೀಗ ನಿವೇದಿತಾ ಬಿಗ್​ಬಾಸ್​ನಲ್ಲಿ ಎಂಟ್ರಿ ಕೊಟ್ಟು ಸಕತ್​ ಫೇಮಸ್​  ಆಗಿದ್ದಾರೆ. ಇನ್ನು ಚಂದನ್​ ಶೆಟ್ಟಿ ಅವರು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 'ಎಲ್ರ ಕಾಲೆಳೆಯುತ್ತೆ ಕಾಲ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು ಇವರು. ಇದೀಗ ಹೀರೊ ಪಟ್ಟಕ್ಕೆ ಏರಿದ್ದಾರೆ. ಸದ್ಯ ಯಾವುದೂ ಚಿತ್ರ ರಿಲೀಸ್​ ಆಗಿಲ್ಲ. ಆದರೆ ಈಗಲೇ ಮೂರನೇ ಸಿನಿಮಾಗೆ ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ.  'ಎಲ್ರ ಕಾಲೆಳೆಯುತ್ತೆ ಕಾಲ', 'ಸೂತ್ರಧಾರಿ' ಸಿನಿಮಾಗಳ ನಂತರ ಈಗ ಹೊಸದೊಂದು ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದು, ಕಳೆದ ವರ ಮಹಾಲಕ್ಷ್ಮೀ ಹಬ್ಬದಂದು ಅವರ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಈ ಹೊಸ ಚಿತ್ರಕ್ಕೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಎಂದು ಹೆಸರಿಡಲಾಗಿದೆ. ಸಂಪೂರ್ಣ ಕಥೆ ಒಂದು ಕಾಲೇಜಿನ ಸುತ್ತವೇ ನಡೆಯಲಿದೆಯಂತೆ. ಆ ಕಾರಣಕ್ಕಾಗಿ ಈ ಟೈಟಲ್​. ಈ ಹಿಂದೆ ಶ್ರೀಮುರಳಿ, ಅಕುಲ್ ಬಾಲಾಜಿ, ಶ್ರೀಕಿ ನಟಿಸಿದ್ದ 'ಲೂಸ್‌ಗಳು' ಸಿನಿಮಾವನ್ನು ನಿರ್ದೇಶಿಸಿದ್ದ ಅರುಣ್ ಅಮುಕ್ತ ಅವರು 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ತೋಬಾ ತೋಬಾ ಹಾಡಿಗೆ ಬಳುಕಿದ ನಿವೇದಿತಾ: ಗಂಡನ ಕನ್ನಡ ಹಾಡೆಂದ್ರೆ ನಿಂಗೆ ಅಲರ್ಜಿನಾ ಎಂದ ಫ್ಯಾನ್ಸ್​!


 

Follow Us:
Download App:
  • android
  • ios