Vivian Dsena: ಈ ನಟನ ಮದುವೆನೂ ಸೀಕ್ರೇಟ್​, ಮಗುನೂ ಸೀಕ್ರೇಟ್​, ಅಭಿಮಾನಿಗಳಿಗೆ ಡಬಲ್​ ಶಾಕ್​!

ಕಿರುತೆರೆ ಮೂಲಕ ಅಸಂಖ್ಯ ಅಭಿಮಾನಿಗಳನ್ನು ಗಳಿಸಿರುವ ನಟ ವಿವಿಯನ್ ಡಿಸೇನಾ ಅಭಿಮಾನಿಗಳಿಗೆ ಡಬಲ್​ ಶಾಕ್​ ನೀಡಿದ್ದಾರೆ.  ಏನದು? 
 

Vivian Dsena has a two month old daughter and has kept it secret from the world

ಕಿರುತೆರೆ ನಟ ವಿವಿಯನ್ ಡಿಸೇನಾ (Vivian Dsena) ಹಿಂದಿ ಧಾರಾವಾಹಿ ನೋಡುವವರ ಫೆವರೆಟ್​ ಹೀರೊ. ಝಲಕ್ ದಿಖ್ಲಾ ಜಾ 8 ಮತ್ತು ಫಿಯರ್ ಫ್ಯಾಕ್ಟರ್ ಎಂಬ ರಿಯಾಲಿಟಿ ಷೋ ಗಳಲ್ಲಿ ಇವರು ಭಾಗವಹಿಸಿದ ಮೇಲಂತೂ ಫ್ಯಾನ್ಸ್​ಗಳ ಸಂಖ್ಯೆ ಹೆಚ್ಚಿಸಿಕೊಂಡಿರೋ ಈ ನಟನ ಖಾಸಗಿ ಜೀವನ ಮಾತ್ರ ಬಲು ಸೀಕ್ರೇಟ್​! ಸೆಲೆಬ್ರಿಟಿಗಳು ಎಂದರೆ ಕೇಳಬೇಕೆ? ದಿನಪೂರ್ತಿ ಕ್ಯಾಮೆರಾ ಕಣ್ಣು ಅವರ ಮೇಲೆಯೇ ನೆಟ್ಟಿರುತ್ತದೆ. ಅದರಲ್ಲಿಯೂ ಡೇಟಿಂಗ್​, ಮದುವೆ, ಗರ್ಭಿಣಿ, ಮಕ್ಕಳು... ಹೀಗೆ ಅವರ ಪ್ರತಿಯೊಂದು ಕ್ಷಣವೂ ರೆಕಾರ್ಡ್​ ಆಗುತ್ತಲೇ ಇರುತ್ತದೆ. ಅಂಥದ್ದರಲ್ಲಿ ವಿವಿಯನ್​ ಡಿಸೇನಾ ಮಾತ್ರ ಅಭಿಮಾನಿಗಳಿಗೆ ಡಬಲ್​ ಶಾಕ್​ ನೀಡಿದ್ದಾರೆ. ಇವರು   ತಮ್ಮ ಈಜಿಪ್ಟ್ ಗೆಳತಿಯನ್ನು ಮದುವೆಯಾಗಿ ಒಂದು ವರ್ಷವಾಗಿದೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ವರದಿಯ ಪ್ರಕಾರ, ವಿವಿಯನ್ ಈಜಿಪ್ಟ್ ಪ್ರಜೆಯಾಗಿರುವ ತನ್ನ ದೀರ್ಘಕಾಲದ ಸಂಗಾತಿ ನೌರಾನ್ ಅಲಿಯನ್ನು ವಿವಾಹವಾಗಿದ್ದಾರಂತೆ, ಆದರೆ ಅದನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾರಿಗೂ ಗೊತ್ತಾಗದೆ ರಹಸ್ಯವಾಗಿಯೇ ಇಟ್ಟಿದ್ದಾರೆ.

ಇದು ಗೊತ್ತಾಗುತ್ತಿದ್ದಂತೆ ಮಾಧ್ಯಮದವರು ಸುಮ್ಮನೆ ಬಿಟ್ಟಾರೆಯೇ? ಅವರ ಬಳಿ ಪ್ರಶ್ನೆ ಕೇಳಿಯೇ ಬಿಟ್ಟಿದ್ದಾರೆ. ಇನ್ನು ರಹಸ್ಯವಾಗಿಟ್ಟು ಉಪಯೋಗ ಇಲ್ಲ ಎಂದುಕೊಂಡಿರುವ ನಟ, ತಮ್ಮ ಮದುವೆಯ ರಹಸ್ಯವನ್ನು ಮಾಧ್ಯಮಗಳಿಗೆ ತೆರೆದಿಟ್ಟಿದ್ದರು. ಈ ಬಗ್ಗೆ  ಮುಕ್ತವಾಗಿ ಮಾತನಾಡಿದ್ದರು. ತಾವು ಈಜಿಪ್ಟ್​ನಲ್ಲಿಯೇ ನೌರನ್ (Nouran) ಎಂಬಾಕೆಯನ್ನು ವಿವಾಹವಾಗಿದ್ದು, ಮದುವೆಯಾಗಿ ಒಂದು ವರ್ಷವಾಗಿದೆ ಎಂದಿದ್ದರು. ಆದರೆ ಈ ಬಗ್ಗೆ ಹೆಚ್ಚಿಗೆ ಹೇಳಲು ಇಷ್ಟಪಡದಿದ್ದ ನಟ ಇದರ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದರೆ ನನ್ನ ಅಸಿಸ್ಟೆಂಟ್​ ಅವರನ್ನು ಕೇಳಿ ಎಂದು ಜಾಗ ಖಾಲಿ ಮಾಡಿದ್ದರು. ಕೆಲವು ಪತ್ರಕರ್ತರು ಫೋನ್​ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಅಂದಹಾಗೆ ವಿವಿಯನ್​ ಅವರಿಗೆ ಇದು ಎರಡನೆಯ ಮದುವೆ. ಈ ಮೊದಲು ಅವರು  ವಹ್ಬಿಜ್ ದೊರಾಬ್ಜಿ (Vahbiz Dorabjee) ಎಂಬುವವರನ್ನು  ವಿವಾಹವಾಗಿದ್ದರು.

ನಟ ದಂಪತಿಗಳಾದ ವಿವಿಯನ್ ಮತ್ತು ವಹ್ಬಿಜ್ ದೊರಾಬ್ಜಿ 2016 ರಲ್ಲಿ ಬೇರ್ಪಟ್ಟರು. ಆಗಲೂ ಅವರು ಮಾಧ್ಯಮದವರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ.  ಇದು ತಮ್ಮ ಮತ್ತು ವಹ್ಬಿಜ್ ಅವರ ವೈಯುಕ್ತಿಕ ವಿಚಾರವಾಗಿದ್ದು, ಇದು ಬೇರೆಯವರು ತಲೆ ಹಾಕುವ ವಿಚಾರವಲ್ಲ ಎಂದು ಹೇಳಿದ್ದರು. ನಂತರ ಇಬ್ಬರ ಡಿವೋರ್ಸ್​ ಆದದ್ದು  ಡಿಸೆಂಬರ್ 18, 2021 ರಂದು. ಅಂದಹಾಗೆ ವಹ್ಬಿಜ್​ ಕೂಡ ನಟಿಯೇ. ರಾಬರ್ಟ್ ಪ್ಯಾಟಿನ್ಸನ್ ಮತ್ತು ಕರ್ಸ್ಟನ್ ಸ್ಟೀವರ್ಟ್ ಅವರ ಟ್ವಿಲೈಟ್ ಸರಣಿಯಿಂದ ಸ್ಫೂರ್ತಿ ಪಡೆದ 2010 ರ ಟಿವಿ ಸೀರಿಯಲ್ ‘ಪ್ಯಾರ್ ಕಿ ಯೆ ಏಕ್ ಕಹಾನಿ’ (Pyaar Kii Ye Ek Kahaani ) ಸೆಟ್ ಗಳಲ್ಲಿ ವಿವಿಯನ್ ಮತ್ತು ವಹ್ಬಿಜ್ ಭೇಟಿಯಾದರು. ಮೂರು ವರ್ಷಗಳ ಡೇಟಿಂಗ್ ನಂತರ, ಅವರು 2013 ರಲ್ಲಿ ವಿವಾಹವಾಗಿದ್ದರು.

Radha Nair: ಆ ಕಾಲದಲ್ಲಿಯೇ ನಟಿ ಮಾಧವಿ ಈ ಪರಿ ಡ್ರೆಸ್ಸಾ? ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​!

ಈಗ ವಿವಿಯನ್ ಎರಡನೆಯ ಮದುವೆಯ ಶಾಕ್​ ಕೊಟ್ಟಿದ್ದಾರೆ. ಇದನ್ನು ಅರಗಿಸಿಕೊಳ್ಳುವಷ್ಟರಲ್ಲಿಯೇ ಇವರ ಫ್ಯಾನ್ಸ್​ ಮತ್ತೊಂದು ಶಾಕ್​ (Shock)  ಎದುರಿಸುತ್ತಿದ್ದಾರೆ. ಅದೇನೆಂದರೆ, ಈ ಮದುವೆಯಿಂದ ವಿವಿಯನ್​ ಅವರಿಗೆ ಇದಾಗಲೇ ಎರಡು ತಿಂಗಳ ಮಗು ಕೂಡ ಇದೆ ಎನ್ನುವ ಸುದ್ದಿ. ನಟ ಎರಡು ತಿಂಗಳ ಹಿಂದೆ ಮಗಳ ತಂದೆಯಾಗಿದ್ದು ಇದನ್ನು ಕೂಡ ಸೀಕ್ರೆಟ್​ ಮಾಡಿದ್ದಾರೆ.  ವರದಿಗಳ ಪ್ರಕಾರ, ವಿವಿಯನ್ ಪತ್ನಿ ನೂರಾನ್ ಅಲಿಯಿಂದ ಎರಡು ತಿಂಗಳ ಮಗಳನ್ನು ಹೊಂದಿದ್ದಾರೆ. ಆದರೆ ಜನರ ಮುಂದೆ ಈ ವಿಷಯವನ್ನು ಏಕೆ ತರಲಿಲ್ಲ ಎಂದು ಫ್ಯಾನ್ಸ್​ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ ಮಾಧ್ಯಮಗಳಿಂದ ತಮ್ಮ ಸಂಸಾರವನ್ನು ದೂರ ಇರಿಸಲು ಬಯಸಿರುವ ಕಾರಣ, ನಟ ಹೀಗೆಲ್ಲಾ ಮಾಡಿರುವುದಾಗಿ ಹೇಳಲಾಗುತ್ತಿದೆ. ಮದುವೆಯನ್ನು ರಹಸ್ಯವಾಗಿಟ್ಟರೆ ಮಗು ಆದ ಮೇಲಾದರೂ ತಮಗೆ ತಿಳಿಸಬೇಕಿತ್ತು ಎಂದು ಅವರ ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​  ಮಾಡುತ್ತಿದ್ದಾರೆ.  

ಬಜರಂಗಿ ಭಾಯಿಜಾನ್-2ನಲ್ಲಿ ಕರೀನಾ ಬದ್ಲು ಸಲ್ಮಾನ್​ ಗರ್ಲ್​ಫ್ರೆಂಡ್​?

ಮಗುವಿನ ಚಿತ್ರವನ್ನು ವಿವಿಯನ್​ ಅವರ ಪತ್ನಿ ನೌರನ್ ಆಗಾಗ್ಗೆ  ತಮ್ಮ ಆಪ್ತರೊಂದಿಗೆ ಹಂಚಿಕೊಳ್ಳುತ್ತಾರೆ ವಿವಿಯನ್​ ಅವರು ತಮ್ಮ ಎರಡನೆಯ ಪತ್ನಿಯೊಂದಿಗೆ  ಸಂತೋಷವಾಗಿದ್ದಾರೆ. ಅವರ ಅಭಿಮಾನಿಗಳು ಬೆಳ್ಳಿ ಪರದೆಯ ಮೇಲೆ ನೋಡಲು ಇಷ್ಟಪಟ್ಟಿದ್ದಾರೆ.  ಅವರು ಕೊನೆಯದಾಗಿ ಸಿರ್ಫ್ ತುಮ್ (Sirf Tum) ಚಿತ್ರದಲ್ಲಿ ರಣವೀರ್ ಒಬೆರಾಯ್ ಜೊತೆಗೆ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ಹೃದಯಗಳನ್ನು ಗೆದ್ದಿದ್ದರು. 

Latest Videos
Follow Us:
Download App:
  • android
  • ios