Radha Nair: ಆ ಕಾಲದಲ್ಲಿಯೇ ನಟಿ ಮಾಧವಿ ಈ ಪರಿ ಡ್ರೆಸ್ಸಾ? ಅಬ್ಬಬ್ಬಾ ಅಂತಿದ್ದಾರೆ ಫ್ಯಾನ್ಸ್​!

70-90ರ ದಶಕದವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಮಾಧವಿ ಹಿಂದೊಮ್ಮೆ ಬಿಕಿನಿ ಡ್ರೆಸ್​ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್​  ಆಗಿದೆ.
 

Tik Tik Tik actress Radha Nair recalls struggle behind wearing a bikini on sets of film

80-90ರ ದಶಕದಲ್ಲಿ ಚಿತ್ರರಂಗ ಆಳಿದ ಬಹುತೇಕ ನಟಿಯರ ಪೈಕಿ ನಟಿ ಮಾಧವಿ (Madhavi) ಕೂಡ ಒಬ್ಬರು. 'ಹಾಲುಜೇನು', 'ಕೈದಿ', 'ಭಾಗ್ಯದ ಲಕ್ಷ್ಮಿ ಬಾರಮ್ಮ', 'ಅನುರಾಗ ಅರಳಿತು', 'ಜೀವನಚೈತ್ರ', 'ಆಕಸ್ಮಿಕ'ದಂಥ ಬ್ಲಾಕ್​ಬಸ್ಟರ್​ ಚಿತ್ರವನ್ನು ಕನ್ನಡಕ್ಕೆ ನೀಡಿದ ಬಹುಭಾಷಾ ನಟಿ ಮಾಧವಿ. ಇವರು 17 ವರ್ಷಗಳ ಅವಧಿಯಲ್ಲಿ ತೆಲುಗು, ತಮಿಳು, ಕನ್ನಡ , ಬೆಂಗಾಲಿ, ಮಲಯಾಳಿ, ಒರಿಯಾ ಮತ್ತು ಹಿಂದಿ - ಹೀಗೆ  ಏಳು ಭಾಷೆಗಳಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ. ಅವರು ಈವರೆಗೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ಆದರೆ ಈ ಎಲ್ಲಾ ಚಿತ್ರಗಳನ್ನು ನೋಡಿದವರಿಗೆ ನಟಿ ಮಾಧವಿ ಹಿಂದೊಮ್ಮೆ ಬಿಕಿನಿಯಲ್ಲಿಯೂ (Bikini) ಕಾಣಿಸಿಕೊಂಡಿದ್ದರು ಎಂದು ಹೇಳುವುದೇ ಕಷ್ಟ. ಸಾಂಪ್ರದಾಯಿಕ ಉಡುಗೆಯಲ್ಲಿಯೇ ಕಂಗೊಳಿಸುತ್ತಿದ್ದ ನಟಿ ಮಾಧವಿ, ಬಿಕಿನಿ ಎಂದರೆ ದೂರ ಸರಿಯುತ್ತಿದ್ದ ಕಾಲದಲ್ಲಿಯೂ ಆ ಬಟ್ಟೆ ತೊಟ್ಟಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ (Viral) ಆಗಿದೆ. 

ಅಷ್ಟಕ್ಕೂ ಈ ಚಿತ್ರವನ್ನು ಪೋಸ್ಟ್​ ಮಾಡಿದ್ದು ಇದೇ ಕಾಲದ, ಅಷ್ಟೊಂದು ಪ್ರಸಿದ್ಧಿಗೆ ಬರದಿದ್ದ ನಟಿ ರಾಧಾ. ಟಿಕ್​ಟಿಕ್​ಟಿಕ್​ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ನಟಿ ರಾಧಾ, ತಾವು, ಮಾಧವಿ, ಕಮಲಹಾಸನ್​ ಇರುವ ಫೋಟೋ ಶೇರ್​ ಮಾಡಿದ್ದು, ಅಂದು ಬಿಕಿನಿ ತೊಡಲು ತಾವು ಪಟ್ಟಿರುವ ಕಷ್ಟದ ಕುರಿತು ವಿವರಿಸಿದ್ದಾರೆ. ಆದರೆ ಈ ಫೋಟೋದಲ್ಲಿ ರಾಧಾ ನಾಯರ್​ ಅವರಿಗಿಂತಲೂ ಹೆಚ್ಚು ಸುದ್ದಿಯಾಗುತ್ತಿರುವುದು ನಟಿ ಮಾಧವಿ.  ಆ ದಿನಗಳಲ್ಲಿಯೇ  ಬಿಕಿನಿ ತೊಟ್ಟು ಮೈಚಳಿ ಬಿಟ್ಟು ನಟಿಸಿದ್ದ ನಟಿಯರ ಪೈಕಿ ಮಾಧವಿಯೂ ಒಬ್ಬರು ಎಂದರೆ ಹಲವರಿಗೆ ನಂಬುವುದೇ ಕಷ್ಟ.  ಆದರೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಾಧವಿ ಸಿಕ್ಕಾಪಟ್ಟೆ ಬೋಲ್ಡ್ (Bold) ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದುದು ಕೆಲವರಿಗೆ ಮಾತ್ರ ಗೊತ್ತಿದೆ.

ಮೊದಲ ರೋಜಾದ ವೀಡಿಯೋ ಶೇರ್ ಮಾಡಿದ ರಾಖಿ ಸಾವಂತ್, ಕಾಲೆಳೆದ ನೆಟ್ಟಿಗರು!
 
1976ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ. 1996 ರಲ್ಲಿ ಅವರು ಉದ್ಯಮಿ ರಾಲ್ಫ್ ಶರ್ಮಾ ಅವರನ್ನು ಮಾಧವಿ ವಿವಾಹವಾದರು.  ಮದುವೆಯಾದ ನಂತರ ಮಾಧವಿ ಪತಿಯೊಂದಿಗೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ.  ಇವರ ಹುಟ್ಟು ಹೆಸರು ವಿಜಯಲಕ್ಷ್ಮಿ. ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ಒಂದು ದಿನ ದಾಸರಿ ನಾರಾಯಣ ರಾವ್ ರವೀಂದ್ರ ಭಾರತಿಯಲ್ಲಿ ಕನಕ ವಿಜಯಲಕ್ಷ್ಮಿ ಅವರು ನೃತ್ಯ ಪ್ರದರ್ಶನ ನೀಡುತ್ತಿದ್ದುದನ್ನು ನೋಡಿ ನೃತ್ಯದಿಂದ ಪ್ರಭಾವಿತರಾದರು. ಹಾಗಾಗಿ ಮಾಧವಿ 13ನೇ ವಯಸ್ಸಿನಲ್ಲಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಚಿತ್ರರಂಗದಲ್ಲಿ ವಿಜಯಲಕ್ಷ್ಮಿ, ಲಕ್ಷ್ಮಿ ಎಂಬ ಹೆಸರಿನಿಂದ ಸಾಕಷ್ಟು ಮಂದಿ ಇದ್ದುದರಿಂದ ಕನಕ ವಿಜಯಲಕ್ಷ್ಮಿಗೆ ‘ಮಾಧವಿ’ ಎಂದು ಹೆಸರಿಡಲಾಗಿತ್ತು. 1996ರಲ್ಲೇ ಮಾಧವಿ ಸಿನಿಮಾಗಳಲ್ಲಿ ನಟಿಸೋದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರು. ಕನ್ನಡದಲ್ಲಿ ಆಕೆ ಕೊನೆಯದಾಗಿ ಡಾ. ರಾಜ್‌ಕುಮಾರ್ ಜೊತೆ 'ಒಡಹುಟ್ಟಿದವರು' ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಬೆಳ್ಳಿತೆರೆಯಿಂದ  ಮರೆಯಾಗಿರುವ ಈ ನಟಿ ರಾಧಾ ನಾಯರ್​ (Radha Nair) ಅವರ ಇನ್​ಸ್ಟಾಗ್ರಾಮ್​ ಮೂಲಕ ಮತ್ತೆ ಚಾಲ್ತಿಗೆ ಬಂದಿದ್ದಾರೆ. 

ಈ ಫೋಟೋ ತಮಿಳಿನ 'ಟಿಕ್‌ ಟಿಕ್‌ ಟಿಕ್' ಸಿನಿಮಾ ಶೂಟಿಂಗ್ ಸಮಯದಲ್ಲಿ ಕ್ಲಿಕ್ಕಿಸಿದ್ದು.  ಅದರಲ್ಲಿ ಕಮಲ್ ಹಾಸನ್ ಕುಳಿತುಕೊಂಡಿದ್ದರೆ, ನಟಿಯರಾದ ಸ್ವಪ್ನಾ , ರಾಧಾ, ಮಾಧವಿ ಬಿಕಿನಿಯಲ್ಲಿ  ನಿಂತು ಪೋಸ್ ಕೊಟ್ಟಿರುವುದನ್ನು ನೋಡಬಹುದು.  ಈ ಚಿತ್ರ ಬಿಡುಗಡೆಯಾದದ್ದು 1981ರಲ್ಲಿ.  ಆ ವೇಳೆಯಲ್ಲಿಯೇ ಬಿಕಿನಿ ತೊಟ್ಟಿದ್ದರು ಈ ನಟಿಯರು. ಉಳಿದಿಬ್ಬರು ನಟಿಯರು ಸ್ವಿಮ್‌ ಸೂಟ್ ಧರಿಸಿದ್ದರೂ ಅದೇನು ಅಷ್ಟು ಅಸಹ್ಯ ಎನಿಸುವಂತಿರಲಿಲ್ಲ. ಆದರೆ ಸಿಕ್ಕಾಪಟ್ಟೆ ಬೋಲ್ಡ್​ ಬಿಕಿನಿಯಲ್ಲಿ ಕಾಣಿಸಿಕೊಂಡವರು ನಟಿ ಮಾಧವಿ. ಇದನ್ನು ನೋಡಿ ಆಕೆಯ ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ. 

ಸೈಫ್​ ಅಲಿಯನ್ನೇ ಮದ್ವೆಯಾಗಿದ್ದೇಕೆ? ಗುಟ್ಟು ರಟ್ಟು ಮಾಡಿದ Kareena Kapoor

ಅಂದಹಾಗೆ ಮಾಧವಿ, ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದವರು. ಈಕೆ ಭರತನಾಟ್ಯ ಕಲಾವಿದೆ ಕೂಡ.  ಬಾಲ್ಯದಲ್ಲೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಹದಿಹರೆಯದಲ್ಲಿ ಇವರಿಗೆ ದಾಸರಿ ನಾರಾಯಣರಾವ್ ರವರು ತೆಲುಗು ಚಿತ್ರವೊಂದರಲ್ಲಿ ಪೋಷಕ ಪಾತ್ರವನ್ನು ಕೊಟ್ಟರು. ಅದು ತುಂಬ ಯಶಸ್ವಿ ಆಯಿತು . ನಂತರ ಕೆ. ಬಾಲಚಂದರ್ 1979ರಲ್ಲಿ ಮರೋಚರಿತ್ರ ಚಿತ್ರದಲ್ಲಿ ಕಮಲಹಾಸನ್ ಜತೆಗೆ ಪ್ರಮುಖಪಾತ್ರವೊಂದನ್ನು ಕೊಟ್ಟರು. ಅದ್ಭುತ ಯಶಸ್ಸು ಕಂಡ ಈ ಚಿತ್ರ ಹಿಂದಿಯಲ್ಲಿ 'ಏಕ್ ದೂಜೆ ಕೇ ಲಿಯೆ' (Ek Duje Ke liye) ಹೆಸರಿನಲ್ಲಿ ತಯಾರಾಗಿ ಅಲ್ಲಿಯೂ ಭಾರೀ ಯಶ ಪಡೆಯಿತು. 1996 ರಲ್ಲಿ ಅವರು ಉದ್ಯಮಿ ರಾಲ್ಫ್ ಶರ್ಮಾ (Ralf Sahrma) ಅವರನ್ನು ಮಾಧವಿ ವಿವಾಹವಾದರು.  ಮದುವೆಯಾದ ನಂತರ ಮಾಧವಿ ಪತಿಯೊಂದಿಗೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಇವರ ಪತಿ ಭಾರತೀಯ ಮತ್ತು ಜರ್ಮನ್ ಮೂಲದವರು.  ಮೆಡಿಕಲ್ ಕಂಪೆನಿ ಮತ್ತು ರೆಸ್ಟೋರೆಂಟ್ ವ್ಯವಹಾರಗಳನ್ನು ಹೊಂದಿದ್ದಾರೆ. 
 

Latest Videos
Follow Us:
Download App:
  • android
  • ios