ಬಜರಂಗಿ ಭಾಯಿಜಾನ್-2ನಲ್ಲಿ ಕರೀನಾ ಬದ್ಲು ಸಲ್ಮಾನ್ ಗರ್ಲ್ಫ್ರೆಂಡ್?
2015ರಲ್ಲಿ ತೆರೆ ಕಂಡಿದ್ದ ಬಜರಂಗಿ ಭಾಯಿಜಾನ್ ಸೀಕ್ವಲ್ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ಕರೀನಾ ಕಪೂರ್ ಬದಲು ಬೇರೊಬ್ಬ ನಟಿ ಬರಲಿದ್ದಾರೆ ಎನ್ನುವ ಸುದ್ದಿ ಇದೆ. ಏನದು?
2015ರಲ್ಲಿ ತೆರೆ ಕಂಡಿದ್ದ ಕಬೀರ್ ಖಾನ್ ನಿರ್ದೇಶನ ಬಜರಂಗಿ ಭಾಯಿಜಾನ್ (Bajrangi Bhaijaan) ನೆನಪಿದೆ ತಾನೆ? ಹಾಸ್ಯಪ್ರಧಾನ ಚಲನಚಿತ್ರವನ್ನು ನಿರ್ಮಿಸಿದವರು ಸಲ್ಮಾನ್ ಖಾನ್ ಮತ್ತು ರಾಕ್‌ಲೈನ್ ವೆಂಕಟೇಶ್. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ್ಹೋತ್ರಾ ನಟಿಸಿದ್ದು, ನವಾಜ಼ುದ್ದೀನ್ ಸಿದ್ದೀಕಿ ಮತ್ತು ಕರೀನಾ ಕಪೂರ್ ಖಾನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಹನುಮಂತನ ದೇವರ ಉತ್ಕಟ ಭಕ್ತನಾದ ಪವನ್ ಕುಮಾರ್ ಚತುರ್ವೇದಿ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದರು. ಭಾರತದಲ್ಲಿ ತನ್ನ ಪೋಷಕರಿಂದ ಬೇರ್ಪಟ್ಟ, ಆರು ವರ್ಷದ ಮೂಕ ಪಾಕಿಸ್ತಾನಿ ಮುಸ್ಲಿಂ (Pak Muslim gril) ಹುಡುಗಿಯನ್ನು ಪಾಕಿಸ್ತಾನದ ಅವಳ ಸ್ವಂತ ಊರಿಗೆ ವಾಪಸು ಕರೆದೊಯ್ಯಲು ಮಾಡುವ ಸಾಹಸದ ಕಥಾಚಿತ್ರವನ್ನು ಇದು ಒಳಗೊಂಡಿದೆ. ಸುಮಾರು 90 ಕೋಟಿ ರೂಪಾಯಿ ಬಂಡವಾಳದಲ್ಲಿ ತಯಾರಾದ ಈ ಚಿತ್ರದ ಛಾಯಾಗ್ರಹಣವನ್ನು ಅಸೀಮ್ ಮಿಶ್ರಾ ಮಾಡಿದ್ದು, ರಾಮೇಶ್ವರ ಎಸ್.ಭಗತ್ ಈ ಚಿತ್ರದ ಸಂಕಲನ ಮಾಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕರೀನಾ ಕೆಮಿಸ್ಟ್ರಿಯನ್ನು ಜನರು ಬಹಳವಾಗಿ ಮೆಚ್ಚಿಕೊಂಡಿದ್ದರು.
ಈ ಚಿತ್ರದ ಮುಂದುವರೆದಿರುವ ಭಾಗವಾಗಿ ಈಗ ಬಜರಂಗಿ ಭಾಯಿಜಾನ್ 2 ಬರುತ್ತಿದೆ. ಬಜರಂಗಿ ಭಾಯಿಜಾನ್‌ನ ಸೀಕ್ವೆಲ್ ಅನ್ನು ಕೆಲವು ಸಮಯದ ಹಿಂದೆ ಘೋಷಿಸಲಾಗಿತ್ತು. ಈ ಚಿತ್ರದ ಹೆಸರು ಪವನ್ ಪುತ್ರ ಭಾಯಿಜಾನ್ (Pawan Putra Bhaijaan)ಎಂದು ಹೇಳಲಾಗಿತ್ತು. ಅಂದಿನಿಂದ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಇರಲಿಲ್ಲ. ಆದರೆ ಇದೀಗ ಅದರ ಘೋಷಣೆಯಾಗಿದೆ. ಆದರೆ ಕರೀನಾ ಫ್ಯಾನ್ಸ್ಗೆ (Fans) ನಿರಾಶೆಯಾಗುವ ಸುದ್ದಿ ಹೊರಬಂದಿದೆ. ಅದೇನೆಂದರೆ, ಕರೀನಾ ಕಪೂರ್ ಖಾನ್ ಇಲ್ಲದ ಬಜರಂಗಿ ಭಾಯಿಜಾನ್ 2 ಅನ್ನು ನೀವು ಊಹಿಸಬಹುದೇ? ಆದರೆ ನೀವು ಊಹಿಸಿಕೊಳ್ಳಲೇಬೇಕು.ಏಕೆಂದರೆ ಕರೀನಾ ಅವರ ಸ್ಥಾನವನ್ನು ಪೂಜಾ ಹೆಗ್ಡೆ ತುಂಬಲಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಪವನ್ ಪುತ್ರ ಭಾಯಿಜಾನ್ ಚಿತ್ರದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆಯನ್ನು ಆಯ್ಕೆ ಮಾಡಲಾಗಿದೆ.
ಸೈಫ್ ಅಲಿಯನ್ನೇ ಮದ್ವೆಯಾಗಿದ್ದೇಕೆ? ಗುಟ್ಟು ರಟ್ಟು ಮಾಡಿದ Kareena Kapoor
ಬಾಲಿವುಡ್ ಹಂಗಾಮಾದ ವರದಿಗಳ ಪ್ರಕಾರ, 'ಪವನ್ ಪುತ್ರ ಭಾಯಿಜಾನ್' ಚಿತ್ರದಲ್ಲಿ ಕರೀನಾ ಕಪೂರ್ (Kareena Kapoor) ಬದಲಿಗೆ ಸಲ್ಮಾನ್ ಪೂಜಾ ಹೆಗ್ಡೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಪೂಜಾ ಹೊಸ ಪಾತ್ರವನ್ನು ನಿರ್ವಹಿಸುತ್ತಾರೋ ಅಥವಾ ಬೆಬೋನೇ ಹೆಜ್ಜೆ ಹಾಕುತ್ತಾರೋ ಎಂದು ನೋಡಬೇಕಾಗಿದೆ' ಎನ್ನಲಾಗಿದೆ. ಚಿತ್ರದ ಬರಹಗಾರ ವಿಜಯೇಂದ್ರ ಪ್ರಸಾದ್ ಅವರು ಸಲ್ಮಾನ್ ಖಾನ್ ಅವರಿಗೆ ಕಥೆಯನ್ನು ಹೇಳಲಿದ್ದಾರೆ ಮತ್ತು ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಖಚಿತಪಡಿಸಿದ್ದಾರೆ. 'ನಾನು ಸಲ್ಮಾನ್ ಭಾಯ್ಗೆ ಕಥೆಯ ರೂಪರೇಖೆಯನ್ನು ವಿವರಿಸಿದ್ದೇನೆ ಮತ್ತು ಅವರು ಅದನ್ನು ಇಷ್ಟಪಟ್ಟಿದ್ದಾರೆ. ಈಗ ಸಮಯಾವಧಿಯನ್ನು ನಿರ್ಧರಿಸಬೇಕು. ಸದ್ಯ ಚೆಂಡು ಸಲ್ಮಾನ್ ಅವರ ಅಂಗಳದಲ್ಲಿದೆ' ಎಂದಿದ್ದಾರೆ ವಿಜಯೇಂದ್ರ ಪ್ರಸಾದ್ (Vijayendra Prasad).
ಕರೀನಾ ಕಪೂರ್ ಖಾನ್ ಚಿತ್ರದ ತಾರೆಯಾಗಿದ್ದರು, ಆದರೆ ತಯಾರಕರು ಪೂಜಾ ಹೆಗ್ಡೆ ಅವರನ್ನು ಸೀಕ್ವಲ್ನಲ್ಲಿ ಜೋಡಿ ಮಾಡಲು ನಿರ್ಧರಿಸಿದ್ದಾರೆಂದು ವರದಿಯಾಗಿದೆ. ಪೂಜಾ ಅವರು ಸಲ್ಮಾನ್ ಖಾನ್ ಅವರೊಂದಿಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ನಲ್ಲಿ ಕಾಣಿಸಿಕೊಂಡಿದ್ದು, ಇವರ ಕೆಮೆಸ್ಟ್ರಿಯು ಜನರ ಹೃದಯಗಳನ್ನು ಗೆಲ್ಲುತ್ತಿದೆ. ಅಷ್ಟಕ್ಕೂ ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಬಲವಾದ ವರದಿಗಳು ಬಂದಿದ್ದವು. ಆದರೆ ಇದನ್ನು ಪೂಜಾ ನಿರಾಕರಿಸಿದ್ದಾರೆ. ನಾವಿಬ್ಬರೂ ಒಳ್ಳೆಯ ಸ್ನೇಹತರು ಎಂದಿದ್ದಾರೆ.
ಸಲ್ಮಾನ್ಗೆ ಜೀವ ಬೆದರಿಕೆ ಮೇಲ್ ಬಂದಿದ್ದಾದ್ರೂ ಎಲ್ಲಿಂದ? ಕೊನೆಗೂ ಸಿಕ್ತು ಸುಳಿವು!
ಆದರೆ ಸದ್ಯ ಸಲ್ಮಾನ್ ಅವರು ತಮ್ಮ ಮುಂದಿನ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'ನಲ್ಲಿ ಬಿಜಿಯಾಗಿದ್ದಾರೆ. ಇದರಲ್ಲೂ ಸಲ್ಮಾನ್ ಎದುರು ಪೂಜಾ ಹೆಗ್ಡೆ (Pooja Hegde) ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆಯೇ 'ಪವನಪುತ್ರ ಭಾಯಿಜಾನ್' ಬಗ್ಗೆ ಅಪ್‌ಡೇಟ್ ಬಂದಿರುವುದು ಸಿನಿಪ್ರಿಯರನ್ನು ಅಚ್ಚರಿಗೆ ತಳ್ಳಿದೆ. ಏಕೆಂದರೆ ಒಂದೆಡೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಬಿಡುಗಡೆಗೆ ತಯಾರಿ ನಡೆಯುತ್ತಿದ್ದರೆ, ಇನ್ನೊಂದೆಡೆ 'ಟೈಗರ್ 3' ಚಿತ್ರೀಕರಣ ನಡೆಯುತ್ತಿದೆ. ಇದೆಲ್ಲದರ ನಡುವೆ 'ಬಜರಂಗಿ ಭಾಯಿಜಾನ್ 2' ಚಿತ್ರಕ್ಕೆ ಪೂಜಾ ಹೆಗ್ಡೆ ಆಯ್ಕೆಯ ಸುದ್ದಿಗೆ ಯಾವುದೇ ಅರ್ಥವಿಲ್ಲ ಎಂದೇ ಬಿ ಟೌನ್ನಲ್ಲಿ ಚರ್ಚೆ ಶುರುವಾಗಿದೆ. ಅದೇ ಇನ್ನೊಂದೆಡೆ, ಕರೀನಾ ಕಪೂರ್ ಅಭಿನಯದ ಹೊಸ ಚಿತ್ರ ‘ದಿ ಕ್ರ್ಯೂ’ ಶೂಟಿಂಗ್ ಶುರುವಾಗಿದೆ. ಕರೀನಾ ಕಪೂರ್ ಖಾನ್ ಈ ಚಿತ್ರದಲ್ಲಿ ಟಬು ಮತ್ತು ಕೃತಿ ಸನೋನ್ (Kriti Sanon) ಜೊತೆ ಕೆಲಸ ಮಾಡುತ್ತಿದ್ದಾರೆ. ರಿಯಾ ಕಪೂರ್ ಮತ್ತು ಏಕ್ತಾ ಕಪೂರ್ ನಿರ್ಮಾಣದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ರಾಜೇಶ್ ಕೃಷ್ಣನ್ ನಿರ್ದೇಶಿಸುತ್ತಿದ್ದಾರೆ.