Asianet Suvarna News Asianet Suvarna News

ಶಾರುಖ್​ ಬಳಿ ಇರೋ ಮೊಬೈಲ್​ ಫೋನ್​ ಎಷ್ಟು ಗೊತ್ತಾ? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ನಿರ್ಮಾಪಕ

ಶಾರುಖ್​ ಬಳಿ ಇರೋ ಮೊಬೈಲ್​ ಫೋನ್​ ಎಷ್ಟು ಗೊತ್ತಾ? ಶಾಕಿಂಗ್​ ವಿಷ್ಯ ರಿವೀಲ್​  ಮಾಡಿದ ನಿರ್ಮಾಪಕ ವಿವೇಕ್​ ವಾಸ್ವಾನಿ
 

Vivek Vaswani  says  Shah Rukh Khan  has 17 phones and he is running an empire suc
Author
First Published Feb 24, 2024, 6:02 PM IST

ನಟ-ನಿರ್ಮಾಪಕ ವಿವೇಕ್ ವಾಸ್ವಾನಿ ಶಾರುಖ್​ ಖಾನ್​ ಅವರ ಜೀವನದ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶಾರುಖ್​ ಅವರು ಸಿನಿಮಾಕ್ಕೆ ಪದಾರ್ಪಣೆ ಮಾಡಿದಾಗ ವಿವೇಕ್​ ಅವರು ಸಾಕಷ್ಟು ಸಹಾಯ ಮಾಡಿದ್ದರು. ಅಲ್ಲಿಂದಲೂ ಇವರಿಬ್ಬರ ಸ್ನೇಹ ಗಾಢವಾಗಿದ್ದು, ಅದರ ಬಗ್ಗೆ ಈಗ ಬಹಿರಂಗಗೊಳಿಸಿದ್ದಾರೆ. ಇವರಿಬ್ಬರ ಗೆಳೆತನ ಎಷ್ಟರಮಟ್ಟಿಗೆ ಇತ್ತು ಎಂದರೆ ಇಬ್ಬರಿಗೂ ಸಂಬಂಧವನ್ನೂ ಕಲ್ಪಿಸಲಾಗಿತ್ತು. ಈ ಕುರಿತೂ ವಿವೇಕ್​ ಅವರು ಹೇಳಿದ್ದಾರೆ.  ತಮ್ಮಿಬ್ಬರ ಸಂಬಂಧದ ಕುರಿತೂ ಸಾಕಷ್ಟು ಚರ್ಚೆಯಾಗಿದ್ದವು.  ವದಂತಿಗಳು ಎಲ್ಲಿಂದ ಬಂದವು ಎಂದು ನನಗೂ ತಿಳಿದಿಲ್ಲ. ನಾವು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೆವು, ನನ್ನ ಹೆತ್ತವರು ಇದ್ದರು, ವೃತ್ತಿಯ ಬಗ್ಗೆ ಟೆನ್ಷನ್ ಇತ್ತು, ಶಾರುಖ್​ಗೆ ಗೌರಿ ಜೊತೆ ಮದುವೆ ಮಾಡಬೇಕಾದ ಸ್ಥಿತಿ ಇತ್ತು. ಇದರ ಮಧ್ಯೆ ನಮ್ಮ ಮಧ್ಯೆ ತಮ್ಮ ಸಂಬಂಧದ ಬಗ್ಗೆ ಚರ್ಚೆಯಾಗಿದ್ದು ವಿಚಿತ್ರ ಎಂದು ವಿವೇಕ್​ ಹೇಳಿಕೊಂಡಿದ್ದಾರೆ.

ಇದರ ನಡುವೆಯೇ, ಶಾರುಖ್​ ಅವರ ಕುರಿತಾಗಿ ಕೆಲವೊಂದು ಇಂಟರೆಸ್ಟಿಂಗ್​ ಮಾಹಿತಿಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಶಾರುಖ್​ ಮತ್ತು ತಮ್ಮ ನಡುವೆ ಕೆಲ ಕಾರಣಗಳಿಂದ ಪರಸ್ಪರ ಭೇಟಿಯಾಗಲು ಸಾಧ್ಯವಾಗಿಲಿಲ್ಲ. ಆದರೆ 2018ರಲ್ಲಿ ಶಾರುಖ್ ಖಾನ್ ಬರ್ತ್​ಡೇ ಪಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ  ಪಾರ್ಟಿಯಲ್ಲಿ ಸಖತ್ ಫನ್ ಇತ್ತು. ಬಹಳ ವರ್ಷಗಳ ಬಳಿಕ ತಾವು ಭೇಟಿಯಾಗಿದ್ದು ಎಂದಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ಸಂಬಂಧ ಹೊಂದಿರುವವರು ಪರಸ್ಪರ ಭೇಟಿ ಹೇಗೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ವಿವೇಕ್​ ಅವರಿಗೆ ಎದುರಾಯಿತು. ಅದರಲ್ಲಿಯೂ ಇದೀಗ ಮೊಬೈಲ್​ ಜಮಾನಾ. ಒಂದೇ ಒಂದು ಕರೆಯಿಂದ ವಿಶ್ವದ ಯಾವುದೇ ಮೂಲೆಯಲ್ಲಿ ಇದ್ದರೂ ಸಂಪರ್ಕಿಸಬಹುದು. ಇಂಥ ವೇಳೆ ಯಾಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ವಿವೇಕ್​ ಅವರು ಶಾರುಖ್​ ಕುರಿತು ಕುತೂಹಲದ ಮಾಹಿತಿಯೊಂದನ್ನು ತೆರೆದಿಟ್ಟಿದ್ದಾರೆ.

ಶಾರುಖ್​ಗೆ ಕರಣ್​ ಜೋಹರ್​, ಪ್ರಿಯಾಂಕಾ ಜೊತೆ ಸಂಬಂಧವಿತ್ತಾ? ನಿರ್ಮಾಪಕ ವಿವೇಕ್ ವಾಸ್ವಾನಿ ಹೇಳಿದ್ದೇನು?

ಅಷ್ಟಕ್ಕೂ, ವಿವೇಕ್​ ಅವರು ಶಾರುಖ್​  ಕುರಿತು ಹೇಳಿದ್ದೇನೆಂದರೆ,  ಶಾರುಖ್​ ಖಾನ್ ಬಳಿ 17 ಫೋನ್​ಗಳು ಇವೆ. ಆದರೆ ಅವರ ಒಂದೇ ಒಂದು ಮೊಬೈಲ್​ ಸಂಖ್ಯೆ ಮಾತ್ರ ನನ್ನ ಬಳಿ ಇದೆ. ಆ 17 ಫೋನ್​ಗಳಲ್ಲಿ ಯಾವುದು ಅವರ ಬಳಿ ಇರುತ್ತದೆಯೋ ಗೊತ್ತಿಲ್ಲ. ನಾನು ಫೋನ್​ ಮಾಡಿದಾಗಲೆಲ್ಲಾ ಅವರು ರಿಸೀವ್​ ಮಾಡುವುದೇ ಇಲ್ಲ.ಸಂಪರ್ಕ ಹೇಗೆ ಸಾಧ್ಯ ಎಂದಿದ್ದಾರೆ. ಈ ಕುರಿತು ಘಟನೆಯೊಂದನ್ನು ಶೇರ್​ ಮಾಡಿಕೊಂಡಿರುವ ಅವರು, ಶಾರುಖ್​ ಅವರು ಬ್ಲಾಕ್​ಬಸ್ಟರ್​ ಜವಾನ್ ಸಿನಿಮಾ ರಿಲೀಸ್ ಆದ ತಕ್ಷಣ ಕಾಲ್​ ಮಾಡಿದ್ದೆ.  ಅವರು  ರಿಸೀವ್​ ಮಾಡಲಿಲ್ಲ.  ಆದರೆ ಪುಣ್ಯಕ್ಕೆ ಅವರು ಅದನ್ನು ನೋಡಿ ವಾಪ್​ ಮಾಡಿದಾಗ, ನಾನು ಸ್ನಾನ ಮಾಡುತ್ತಿದ್ದೆ.  ವಾಪಸ್​ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಶಾರುಖ್​ ಸದಾ ಓಡಾಟದಲ್ಲಿ ಇರುತ್ತಾರೆ,  ಅವರಿಗೆ ಸಾಕಷ್ಟು ಜವಾಬ್ದಾರಿ ಇದೆ. ಅವರು ಸಾಮ್ರಾಜ್ಯವನ್ನೇ ನಡೆಸುತ್ತಿದ್ದಾರೆ. ಆದ್ದರಿಂದ ನನ್ನ ಫೋನ್​ ಕರೆಗೆ ಅವರು ರೆಸ್​ಪಾನ್ಸ್​ ಮಾಡಲು ಟೈಂ ಇರುವುದಿಲ್ಲ. ಅವರು ಬಿಜಿ ಶೆಡ್ಯೂಲ್​ ನನಗೆ ಗೊತ್ತಿರುವ ಕಾರಣ, ನನಗೆ ಬೇಸರ ಆಗುವುದಿಲ್ಲ ಎಂದಿದ್ದಾರೆ.  
 
ಇದೇ ಸಂದರ್ಶನದಲ್ಲಿ  ವಿವೇಕ್ ವಾಸ್ವಾನಿ ಅವರು ಶಾರುಖ್​  ಮತ್ತು ಕರಣ್​ ಜೋಹರ್​ ಕುರಿತ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇಷ್ಟೇ ಅಲ್ಲದೇ, ಪ್ರಿಯಾಂಕಾ ಚೋಪ್ರಾ ಜೊತೆಗೆ ಶಾರುಖ್​ ಅವರ ಸಂಬಂಧವಿತ್ತೇ ಎನ್ನುವ ಬಗ್ಗೂ ಅವರು ಹೇಳಿದ್ದಾರೆ.  ಏಕೆಂದರೆ, ಶಾರುಖ್​ ಮತ್ತು ಕರಣ್​ ನಡುವೆ ಏನೋ ಸಂಬಂಧವಿತ್ತು ಎಂದು ಭಾರಿ ಚರ್ಚೆ ಇತ್ತು.  ಆ ಬಗ್ಗೆ ಹೇಳಿರುವ  ವಿವೇಕ್ ಅವರು,   ಶಾರುಖ್​ ಖಾನ್​ ಅವರಿಗೆ ಪ್ರಿಯಾಂಕಾ ಚೋಪ್ರಾ ಆಗಲೀ, ಕರಣ್​ ಜೋಹರ್​ ಜೊತೆಗಾಗಲೀ ಸಂಬಂಧವಿರಲಿಲ್ಲ.  ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ, ಏಕೆಂದರೆ ಶಾರುಖ್ "ಒಬ್ಬ ಮಹಿಳೆಗೆ ಮಾತ್ರ ಗಂಡನಾಗಿದ್ದು, ಅದಕ್ಕೆ ಅವರು ಬದ್ಧರಾಗಿದ್ದಾರೆ. ಆ ಮಹಿಳೆ ಅವರ ಪತ್ನಿ ಗೌರಿ ಖಾನ್ ಎಂದಿದ್ದಾರೆ. 

25 ಲಕ್ಷಕ್ಕೆ ಶಾಸಕನ ಜೊತೆ ರೆಸಾರ್ಟ್​ನಲ್ಲಿ! ರಾಜಕಾರಣಿ ವಿರುದ್ಧ ನಟಿ ತ್ರಿಷಾ ಕೇಸ್​- ನೆಟ್ಟಿಗರಿಗೂ ಎಚ್ಚರಿಕೆ

Follow Us:
Download App:
  • android
  • ios