25 ಲಕ್ಷಕ್ಕೆ ಶಾಸಕನ ಜೊತೆ ರೆಸಾರ್ಟ್​ನಲ್ಲಿ! ರಾಜಕಾರಣಿ ವಿರುದ್ಧ ನಟಿ ತ್ರಿಷಾ ಕೇಸ್​- ನೆಟ್ಟಿಗರಿಗೂ ಎಚ್ಚರಿಕೆ

ಸೌತ್​ ಬ್ಯೂಟಿ ತ್ರಿಷಾ ಈಗ ಮತ್ತೆ ಚರ್ಚೆಯಲ್ಲಿದ್ದಾರೆ. ಇವರ ವಿರುದ್ಧ ಎಐಡಿಎಂಕೆ ಮಾಜಿ ನಾಯಕ ಎ.ವಿ ರಾಜು ಹೇಳಿದ ಅಸಭ್ಯ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 
 

Actor Trisha sues former AIADMK leader for defamation about defarmatory statement suc

ನಟಿ ತ್ರಿಷಾ ಕುರಿತು ಅಸಭ್ಯ ಮಾತನಾಡಿ ಈಚೆಗಷ್ಟೇ ಖಳ ನಟ ಮನ್ಸೂರ್ ಅಲಿ ಖಾನ್​ ಪೇಚಿಗೆ ಸಿಲುಕಿದ್ದರು. ಇವರಿಗೆ  ಕೋರ್ಟ್ ಛೀಮಾರಿ ಹಾಕಿದ್ದೂ ಅಲ್ಲದೇ  ಒಂದು ಲಕ್ಷ ರೂಪಾಯಿ ದಂಡ ಹಾಕಿಸಿಕೊಂಡಿದ್ದರು.  ಅಷ್ಟಕ್ಕೂ ಆಗಿದ್ದೇನೆಂದರೆ, ತಮಿಳು ಚಿತ್ರ 'ಲಿಯೋ'ಕ್ಕೆ ಸಂಬಂಧಿಸಿದಂತೆ ಈ ಚಿತ್ರದ ಖಳ ನಟರಾಗಿರುವ ಖಾನ್​  ಅಸಹ್ಯ ಹೇಳಿಕೆ ಕೊಟ್ಟಿದ್ದರು.  'ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದ್ದೆ ಎಂದಿದ್ದರು. ಇದೀಗ ಇನ್ನೊಂದು ಪ್ರಕರಣದಲ್ಲಿ ತ್ರಿಷಾ ಪ್ರತಿಷ್ಠಿತ ರಾಜಕಾರಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ನಟಿ ತ್ರಿಷಾ ಕನ್ನಡ ತೆಲುಗು ತಮಿಳು ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ನಟಿಸುತ್ತಿರುವ ಸ್ಟಾರ್ ನಟಿ. ಪುನೀತ್ ಜೊತೆ ಕನ್ನಡಲ್ಲೂ ನಟಿಸಿದ್ದ ತ್ರಿಷಾ ಪವರ್ ಚಿತ್ರದಲ್ಲಿ ಪುನೀತ್​ ಅವರಿಗೆ  ನಾಯಕಿಯಾಗಿದ್ದರು. ಇತ್ತೀಚೆಗೆ ತೆರೆಕಂಡ ಮಣಿರತ್ನಂ ನಿರ್ದೇಶನದ ಯಶಸ್ವೀ ಚಿತ್ರ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸಿ ಮತ್ತೆ ಮುಖ್ಯ ವಾಹಿನಿಗೆ  ಬಂದಿದ್ದಾರೆ. ಕಮಲ್ ಹಾಸನ್ ಅಜಿತ್ , ವಿಕ್ರಂ ರಂತಹ ದೊಡ್ಡ ಸ್ಟಾರ್ಗಳ ದೊಡ್ಡ ಸಿನಿಮಾಗಳ ನಾಯಕಿಯಾಗಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ, ಆದರೆ ಇದೀಗ ರಾಜಕಾರಣಿಯೊಬ್ಬರು ತ್ರಿಷಾ ಮೇಲೆ ಗಂಭೀರ ಆರೋಪ ಮಾಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.  

ಬಾತಿಂಗ್ ವಿಡೀಯೋ ಲೀಕ್ ನಿಂದ... ಲವ್, ಅಫೇರ್‌ವರೆಗೂ ನಟಿ ತ್ರಿಷಾ ಲೈಫಲ್ಲಿ ಎಷ್ಟೊಂದು ಕಾಂಟ್ರವರ್ಸಿ!

ಅಷ್ಟಕ್ಕೂ ನಟಿ ಗಂಭೀರ ಆರೋಪ ಮಾಡಿರುವುದು ಎಐಡಿಎಂಕೆ ಮಾಜಿ ನಾಯಕ ಎ.ವಿ ರಾಜು ಅವರ ಮೇಲೆ. 25 ಲಕ್ಷ ರೂಪಾಯಿಗೆ  ಎಂಎಲ್ಎ ಜೊತೆ ತ್ರಿಷಾ ರೆಸಾರ್ಟ್​ಗೆ  ಹೋಗಿದ್ದರೆಂಬ  ಆರೋಪವನ್ನು ಮಾಜಿ ಎಐಡಿಎಂಕೆ ನಾಯಕ ಎ.ವಿ ರಾಜು ಮಾಡಿದ್ದರು.  ಇದು ನಟಿಯನ್ನು ತೀವ್ರ ಗರಂ ಆಗಿಸಿದೆ. ವಿ ರಾಜು ಅವರ ವೈರಲ್ ವಿಡಿಯೋ ಖಂಡಿಸಿರುವ ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಎ.ವಿ ರಾಜು ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದೇನೆ. ಇದು ನಿಜಕ್ಕೂ ಅಸಹ್ಯಕರವಾದದ್ದು. ಕೆಟ್ಟ ಮನುಷ್ಯರು ತಮ್ಮ ಕಡೆ ಜನರ ಗಮನ ಸೆಳೆಯಲು ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಇದರ ವಿರುದ್ಧ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಲೇ ಬೇಕಾಗಿದೆ. ಇನ್ನು ಮುಂದೆ ಈ ಮಾತುಗಳ ಬಗ್ಗೆ ನನ್ನ ಕಚೇರಿಯ ಕಾನೂನು ಘಟಕ ನೋಡಿಕೊಳ್ಳಲಿದೆ ಎಂದು ನಟಿ ಟ್ವೀಟ್ ಮಾಡಿದ್ದರು. ಇದೀಗ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 

ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್ ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಮುಖಂಡ ಎ.ವಿ.ರಾಜು ಅಸಂಬದ್ಧ ಹೇಳಿಕೆ ನೀಡಿದ್ದು ಈ ಹೇಳಿಕೆ ಸಂಚಲನ ಸೃಷ್ಟಿಸುತ್ತಿದ್ದಂತೆಯೇ  ಚಿತ್ರರಂಗದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತಮಿಳು ಸಿನಿಮಾ ರಂಗದ ಅನೇಕರು ರಾಜು ವಿರುದ್ಧ ಹರಿಹಾಯ್ದಿದ್ದರು.   ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜು ಕ್ಷಮೆ ಕೇಳಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ನಾನು ತ್ರಿಷಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಷಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲವೆಂದು ಹೇಳಿದ್ದಾರೆ. ಈ ನಡುವೆ ನಟಿ ತ್ರಿಷಾ  ಮತ್ತೊಂದು ಪೋಸ್ಟ್ ಮಾಡಿದ್ದು ಅದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತ್ರಿಷಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೆಲ್ಲಾ ಸುದ್ದಿ ಮಾಡಿದ್ದಾರೋ ಆ ಲಿಂಕ್​ಗಳನ್ನು ಹಂಚಿಕೊಂಡಿದ್ದು ಇವನ್ನೆಲ್ಲಾ ಡಿಲೀಟ್ ಮಾಡುವಂತೆ ಹೇಳಿದ್ದಾರೆ. ಇಲ್ಲವಾದಲ್ಲಿ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಬೆಡ್​ರೂಂ, ರೇಪ್​ ಉಸಾಬರಿಗೆ ಹೋಗಿ ಹೈಕೋರ್ಟ್​ನಿಂದ ಒಂದು ಲಕ್ಷ ದಂಡ ಹಾಕಿಸ್ಕೊಂಡ ಖ್ಯಾತ ನಟ ಖಾನ್​!
 

Latest Videos
Follow Us:
Download App:
  • android
  • ios