Asianet Suvarna News Asianet Suvarna News

ಸಪ್ತಮಿ ಗೌಡ ನಟನೆಯ 'ವ್ಯಾಕ್ಸಿನ್ ವಾರ್' ಶೂಟಿಂಗ್‌ನಲ್ಲಿ ಅವಘಡ; ಅಗಿಹೋತ್ರಿ ಪತ್ನಿಗೆ ತೀವ್ರ ಗಾಯ

ಸಪ್ತಮಿ ಗೌಡ ನಟನೆಯ ದಿ ವ್ಯಾಕ್ಸಿನ್ ವಾರ್ ಸಿನಿಮಾದ ಚಿತ್ರೀಕರಣದಲ್ಲಿ ಅವಘಡ ಸಂಭವಿಸಿದ್ದು ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಗಾಯಕೊಂಡಿದ್ದಾರೆ.  

vivek agnihotri wife Pallavi Joshi injured after getting hit by a vehicle on sets of The Vaccine War sgk
Author
First Published Jan 17, 2023, 11:16 AM IST

ದಿ ಕಾಶ್ಮೀರ್ ಫೈಲ್ಸ್ ಸಕ್ಸಸ್ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದಿ ವ್ಯಾಕ್ಸಿನ್ ವಾರ್‌ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಪ್ರಾರಂಭಿಸಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾಗೆ ಸಪ್ತಮಿ ಗೌಡ ಎಂಟ್ರಿ ಕೊಡುವ ಮೂಲಕ ಕನ್ನಡಿಗರಿಗೆ ಅಚ್ಚರಿ ವಿಚಾರ ಬಹಿರಂಗ ಪಡಿಸಿದ್ದರು. ಆದರೆ ವ್ಯಾಕ್ಸಿನ್ ವಾರ್ ಚಿತ್ರಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಚೀತ್ರೀಕರಣ ವೇಳೆ ಅವಘಡ ಸಂಭವಿಸಿದ್ದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪತ್ನಿ, ನಟಿ ಪಲ್ಲವಿ ಜೋಶಿ ಗಾಯಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಹೈದರಾಬಾದ್ ನಲ್ಲಿ ಚಿತ್ರತಂಡ ಸದ್ಯ ಚಿತ್ರೀಕರಣ ಮಾಡುತ್ತಿದೆ. ಶೂಟಿಂಗ್ ನಲ್ಲಿ ವಾಹನ ನಿಯಂತ್ರಣ ತಪ್ಪಿ ನಟಿ ಪಲ್ಲವಿ ಜೋಶಿ ಅವರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಲ್ಲವಿ ಜೋಶಿ ಪಾರಾಗಿದ್ದಾರೆ. ತೀವ್ರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. 

ಈ ಘಟನೆ ಬಳಿಕ ಪಲ್ಲವಿ ಜೋಶಿ ಪತಿ, ದಿ ವ್ಯಾಕ್ಸಿನ್ ವಾರ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ಬಗ್ಗೆ ಪರೋಕ್ಷ ಪೋಸ್ಟ್ ಹಂಚಿಕೊಂಡಿದ್ದಾರೆ. ಜೀವನ ಕೂಡ ಓಡುತ್ತಿರುವ ಅತೀ ವೇಗದ ಆಟವಾಗಿದೆ.  ಭಾರಿ ಟ್ರಾಫಿಕ್, ಕುಡಿದು ಚಾಲನೆ ಮಾಡಿ ಅಪಘಾತವಾಗುವುದು. ಆದರೆ ನಿಮ್ಮನ್ನು ನೀವು ಉಳಿಸಿಕೊಳ್ಳಬೇಕು. ಹೆಚ್ಚಿನವರು ಅಪಘಾತಕ್ಕೆ ಬಲಿಯಾಗುತ್ತಾರೆ. ಆದರೆ ಅಪಘಾತದಲ್ಲಿ ಬದುಕುಳಿದವರು ಎದ್ದು ನಿಂತು ಮತ್ತೆ ಓಡುತ್ತಾರೆ' ಎಂದು ಪೋಸ್ಟ್ ಮಾಡಿದ್ದಾರೆ.

'ಕಾಂತಾರ' ಸಕ್ಸಸ್ ಬಳಿಕ ಬಾಲಿವುಡ್‌ಗೆ ಹಾರಿದ ಸಪ್ತಮಿ ಗೌಡ; ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಸಿನಿಮಾದಲ್ಲಿ ನಟನೆ

ಪ್ರಮುಖ ಪಾತ್ರದಲ್ಲಿ ಸಪ್ತಮಿ ಗೌಡ

ಚೇತರಿಸಿಕೊಳ್ಳುತ್ತಿರುವ ಪಲ್ಲವಿ ಜೋಶಿ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ನಡುವೆ ಹೈದರಾಬಾದ್ ಚಿತ್ರೀಕರಣದ ಸೆಟ್‌ಗೆ ಕಾಂತಾರ ಸ್ಟಾರ್, ಕನ್ನಡದ ನಟಿ ಸಪ್ತಮಿ ಗೌಡ ಕೂಡ ಎಂಟ್ರಿ ಕೊಡುತ್ತಿದ್ದಾರೆ. ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ನಟಿಸುತ್ತಿರುವ ಸಪ್ತಮಿ ಸಖತ್ ಎಕ್ಸಾಯಿಟ್ ಆಗಿದ್ದಾರೆ. 

ವೈ ಭದ್ರತೆಯಲ್ಲಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಾಕಿಂಗ್; ಹಿಗ್ಗಾಮುಗ್ಗಾ ಟ್ರೋಲ್

ಸಪ್ತಮಿ ಬಗ್ಗೆ ವಿವೇಕ್ ಅಗ್ನಿಹೋತ್ರಿ ಮಾತು 

ಈ ಬಗ್ಗೆ ವಿವೇಕ್ ಅಗ್ನಿಹೋತ್ರಿ ಮಾತನಾಡಿ, 'ನಾನು ಕಾಂತಾರ ಸಿನಿಮಾ ನೋಡಿದ್ದೆ. ಅದರಲ್ಲಿ ಲೀಲಾ ಪಾತ್ರದಲ್ಲಿ ನಟಿಸಿದ್ದ ಸಪ್ತಮಿ ಗೌಡ ಅವರ ನಟನೆ  ನನಗೆ ತುಂಬಾ ಇಷ್ಟವಾಗಿತ್ತು. ಹಾಗಾಗಿ ಅವರನ್ನು ನಮ್ಮ ಸಿನಿಮಾಗೆ ಆಯ್ಕೆ ಮಾಡಬೇಕು ಎಂದು ನಿರ್ಧರಿಸಿದೆ. ಬಳಿಕ ನಾನು ಈ ಬಗ್ಗೆ ಸಪ್ತಮಿಗೆ ಕರೆಮಾಡಿ ಅಪ್ರೋಚ್ ಮಾಡಿದೆ. ಅವರು ನಟಿಸಲು ಒಪ್ಪಿಕೊಂಡರು. ಅವರು ದಿ ವ್ಯಾಕ್ಸಿನ್ ವಾರ್ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ ನೀಡಿದೆ' ಎಂದು ಹೇಳಿದ್ದರು.

   

Follow Us:
Download App:
  • android
  • ios