ಊಹಿಸಲಾಗದ ದ್ವೇಷ ಅನುಭವಿಸ್ತೀರಿ: 'ದಿ ಕೇರಳ ಸ್ಟೋರಿ' ತಂಡಕ್ಕೆ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಎಚ್ಚರಿಕೆ
ಊಹಿಸಲಾಗದ ದ್ವೇಷ ಅನುಭವಿಸ್ತೀರಿ: 'ದಿ ಕೇರಳ ಸ್ಟೋರಿ' ತಂಡಕ್ಕೆ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಎಚ್ಚರಿಕೆ
ಭಾರಿ ವಿವಾದ ಸೃಷ್ಟಿಮಾಡಿದ್ದ ದಿ ಕೇರಳ ಸ್ಟೋರಿ ಸಿನಿಮಾ ಕೊನೆಗೂ ರಿಲೀಸ್ ಆಗಿದ್ದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ದೇಶದಾದ್ಯಂತ ದಿ ಕೇರಳ ಸ್ಟೋರಿ ಸಿನಿಮಾ ತೆರೆಗೆ ಬಂದಿದ್ದು ಕರ್ನಾಟಕದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಬಾರದು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೋರ್ಟ್ ನಿರಾಕರಿಸುವ ಮೂಲಕ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್‌ಗೆ ಅಸ್ತು ಎಂದಿತ್ತು. ಒಂದಿಷ್ಟು ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ದಿ ಕೇರಳ ಸ್ಟೋರಿ ತೆರೆಗೆ ಬಂದಿದೆ. ಒಂದಿಷ್ಟು ವಿರೋಧ, ಟೀಕೆಯ ನಡುವೆಯೂ ಅನೇಕರು ಕೇರಳ ಸ್ಟೋರಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಅನೇಕರು ದಿ ಕೇರಳ ಸ್ಟೋರಿ ಸಿನಿಮಾವನ್ನು ಕಾಶ್ಮೀರ್ ಫೈಲ್ಸ್‌ಗೆ ಹೋಲಿಸುತ್ತಿದ್ದಾರೆ. ದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿ ದಿ ಕೇರಳ ಸ್ಟೋರಿ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ದಿ ಕೇರಳ ಸ್ಟೋರಿ ಬಿಡುಗಡೆ ನಂತರ ನಿರ್ದೇಶಕ ಅಗ್ನಿಹೋತ್ರಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ಚಿತ್ರದ ನಿರ್ಮಾಪಕ ವಿಪುಲ್ ಶಾ, ನಿರ್ದೇಶಕ ಸುದೀಪ್ತೋ ಸೇನ್ ಮತ್ತು ನಟ ಅದಾ ಶರ್ಮಾ ಅವರಿಗೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
'The Kerala Storyತಂಡ, ಮೊದಲು ನಾನು ನಿಮ್ಮ ಧೈರ್ಯಶಾಲಿ ಪ್ರಯತ್ನಕ್ಕಾಗಿ ಅಭಿನಂದಿಸುತ್ತೇನೆ. ಅದೇ ಸಮಯದಲ್ಲಿ ನಾನು ನಿಮಗೆ ಕೆಟ್ಟ ಸುದ್ದಿಯನ್ನು ನೀಡುತ್ತೇನೆ, ಇಲ್ಲಿಂದ ಇನ್ಮುಂದೆ ನಿಮ್ಮ ಜೀವನವು ಒಂದೇ ಆಗಿರುವುದಿಲ್ಲ. ನೀವು ಊಹಿಸಲಾಗದ ದ್ವೇಷವನ್ನು ಸ್ವೀಕರಿಸುತ್ತೀರಿ. ನೀವು ಉಸಿರುಗಟ್ಟಿದ ಅನುಭವ ಪಡೆಯುತ್ತೀರಿ. ಅನೇಕ ಬಾರಿ ನೀವು ಗೊಂದಲಕ್ಕೊಳಗಾಗಬಹುದು ಮತ್ತು ಖಿನ್ನತೆಗೆ ಒಳಗಾಗಬಹುದು' ಎಂದು ಹೇಳಿದ್ದಾರೆ.
The Kerala Story Review: ಬರಿ ಸಿನಿಮಾವಲ್ಲ, ಹೆಣ್ಣು ಮಕ್ಕಳ ಬದುಕು ಬದಲಿಸೋ ನೈಜಕಥೆ!
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಬಾಲಿವುಡ್ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆಲಸ ಹುಡುಕಿ ಬೇರೆ ದೇಶಗಳಿಗೆ ಹೋಗುವ ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡಲಾಗುತ್ತದೆ ಹಾಗೂ ಮತಾಂತರದ ಬಗ್ಗೆ ಈ ಸಿನಿಮಾದಲ್ಲಿ ತೋರಸಲಾಗಿದೆ. ಈ ವಿಚಾರಕ್ಕೆ ಅನೇಕರು ವಿರೋಧ ವ್ಯಕ್ತ ಪಡಿಸಿದ್ದರು. ವಿರೋಧದ ನಡುವೆಯೂ ತೆರೆಗೆ ಬಂದ ಸಿನಿಮಾ ನೋಡಿ ಪ್ರೇಕ್ಷಕರು ಸಾಮಾಜಿಕ ಜಾಲತಾಣದ ಮೂಲಕ ವಿಮರ್ಶೆ ತಿಳಿಸುತ್ತಿದ್ದಾರೆ.
The Kerala Story: ಮಸೀದಿಯಲ್ಲಿ ಹಿಂದೂ ವಿವಾಹ ವಿಡಿಯೋ ಶೇರ್ ಮಾಡಿದ A.R. Rahman
ಈಗಾಗಲೇ ಕೇರಳ ಸ್ಟೋರಿ ಸಿನಿಮಾಗೆ ಮಧ್ಯ ಪ್ರದೇಶದಲ್ಲಿ ತೆರಿಗೆ ಫ್ರೀ ಗೊಳಿಸಲಾಗಿದೆ. ಈ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಮಧ್ಯ ಪ್ರದೇಶದ ಕೆಲವು ಹಿಂದುಪರ ಸಂಘಟನೆಗಳು, ಬಿಜೆಪಿ ತಮ್ಮದೇ ಸಿಎಂ ಅವರನ್ನು ಒತ್ತಾಯಿಸಿತ್ತು. ಇದೀಗ ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ವಿಡಿಯೋ ಒಂದನ್ನು ಪ್ರಕಟಿಸಿದ್ದು, ದಿ ಕೇರಳ ಸ್ಟೋರಿ ಸಿನಿಮಾವನ್ನು ಹೊಗಳಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.