Asianet Suvarna News Asianet Suvarna News

ನೀವ್ ಯಾವಾಗ ಬದಲಾಗ್ತೀರಾ? ವಿರಾಟ್ ಕೊಹ್ಲಿ ಟೆಂಪಲ್ ರನ್‌ಗೆ ಪ್ರತಿಕ್ರಿಯಿಸಿದ ಅಗ್ನಿಹೋತ್ರಿಗೆ ನೆಟ್ಟಿಗರ ಪ್ರಶ್ನೆ

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ನಿರ್ದೇಶಕ ವಿವೇಕ್ ಆಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ಜನ ಬದಲಾಗಿದ್ದಾರೆ ಎಂದು ಹೇಳಿದ್ದಾರೆ. 

Vivek Agnihotri says people change as Virat Kohli and Anushka Sharma visit Ujjain temple sgk
Author
First Published Mar 5, 2023, 12:19 PM IST

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ. ಇತ್ತೀಚೆಗೆ ಕೊಹ್ಲಿ ದಂಪತಿ ಹೆಚ್ಚಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ರಿಷಿಕೇಶ, ವೃಂದಾವನ ಅಂತ ಓಡಾಡುತ್ತಿರುವ ಸ್ಟಾರ್ ಜೋಡಿ ಇದೀಗ ಮಧ್ಯಪ್ರದೇಶದ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಬ್ಬರೂ ದೇವಸ್ಥಾನದ ವಿಶೇಷ ಪೂಜೆಯಲ್ಲಿ ಭಾಗಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿರಾಟ್ ಮತ್ತು ಅನುಷ್ಕಾ ದಂಪತಿ ದೇವಸ್ಥಾನ ಸುತ್ತಿರುವ ಬೆನ್ನಲ್ಲೇ ನೆಟ್ಟಿರು ಕೊಹ್ಲಿ ಕಾಲೆಳೆಯುತ್ತಿದ್ದಾರೆ. ಕಾಶ್ಮೀರಾ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಪ್ರತಿಕ್ರಿಯೆ ನೀಡಿ 'ಜನರು ಬದಲಾಗುತ್ತಾರೆ' ಎಂದು ಹೇಳಿದ್ದಾರೆ.

ಅಷ್ಟಕ್ಕೂ ವಿರಾಟ್ ಕೊಹ್ಲಿ ಕಾಲೆಳೆಯಲು ಕಾರಣ ಅವರು ಈ ಹಿಂದೆ ನೀಡಿದ್ದ ಹೇಳಿಕೆ. ಪೂಜೆಗೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ, 'ನಾನು ಪೂಜೆ-ಗೀಜೆ ಮಾಡುವ ವ್ಯಕ್ತಿಯಂತೆ ಕಾಣುತ್ತೀನಾ' ಎಂದು ಹೇಳಿದ್ದರು. ಆ ಹೇಳಿಕೆಯನ್ನು ವೈರಲ್ ಮಾಡಿ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡುತ್ತಿದ್ದಾರೆ.  
 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರಾಟ್ ಮತ್ತು ಅನುಷ್ಕಾ ದಂಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡುತ್ತಿರುವ ವಿಡಿಯೋ ಶೇರ್ ಮಾಡಿ, ಯಂಗ್ ವಿರಾಟ್ ಕೊಹ್ಲಿ ನಾನು ಪೂಜೆ ಮಾಡುವ ವ್ಯಕ್ತಿ ಹಾಗೆ ಕಾಣಿಸುತ್ತೀನಾ ಎಂದು ಜೋಕ್ ಮಾಡಿದಾಗ ಬಹಳಷ್ಟು ಮಂದಿ ಟ್ರೋಲ್ ಮಾಡಿರುವುದು ನನಗೆ ಇನ್ನೂ ನೆನಪಿದೆ. ಜನರು ಬದಲಾಗುತ್ತಾರೆ. ಇದು ದೊಡ್ಡ ವಿಷಯ. ಏಕೆಂದರೆ ಎನ್ನುವುದು ಸಾರ್ಥಕ ಬದುಕಿನ ಇನ್ನೊಂದು ಹೆಸರು'  ಎಂದು ಹೇಳಿದ್ದಾರೆ.  

ಕಾಶ್ಮೀರ್ ಫೈಲ್ಸ್ ನಿರ್ದೇಶಕ ಪ್ರತಿಕ್ರಿಯೆ ನೀಡುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಅಗ್ನಿಹೋತ್ರಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, ಹಾಗಾದ್ರೆ ನೀವು ಯಾವಾಗ ಬದಲಾಗುತ್ತೀರಿ' ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಅಗ್ನಿಹೋತ್ರಿ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ದೇವಸ್ಥಾನದ ಬಾಗಿಲ ಬುಡದಲ್ಲಿ ಕುಳಿತ ಅನುಷ್ಕಾ-ವಿರಾಟ್ ದಂಪತಿ; ವಿಡಿಯೋ ವೈರಲ್

ಉಜ್ಜಯನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿರಾಟ್ ದಂಪತಿ 

ಉಜ್ಜಯನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅನುಷ್ಕಾ ಮತ್ತು ವಿರಾಟ್ ವಿಶೇಷ ಪೂಜೆ ಸಲ್ಲಿಸಿದರು. ಅನುಷ್ಕಾ ಶರ್ಮಾ ಪಿಂಕ್ ಬಣ್ಣದ ಸೀರೆ ಧರಿಸಿದ್ದಾರೆ. ವಿರಾಟ್ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಇಬ್ಬರೂ ಮುಂದೆ ಕುಳಿತ್ತಿದ್ದರೆ ಹಿಂದೆ ಉಳಿದ ಭಕ್ತಾದಿಗಳು ಕುಳಿತ್ತಿದ್ದರು. ಇತ್ತೀಚೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಡುವೆ ಮೂರನೇ ಟೆಸ್ಟ್ ಮ್ಯಾಚ್ ಇಂದೋರ್​ನಲ್ಲಿ ನಡೆಯಿತು. ಇಂದೋರ್ ಹಾಗೂ ಉಜ್ಜಯಿನಿ ಇರೋದು ಮಧ್ಯಪ್ರದೇಶದಲ್ಲಿ. ಹೀಗಾಗಿ, ಕೊಹ್ಲಿ ಅವರು ಅನುಷ್ಕಾ ಜೊತೆ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. 

ನಾನು ಪೂಜೆ-ಗೀಜೆ ಮಾಡುವ ವ್ಯಕ್ತಿಯಂತೆ ಕಾಣ್ತೀನಾ? ವಿರಾಟ್ ಕೊಹ್ಲಿ ನೀಡಿದ್ದ ಈ ಹಿಂದಿನ ಹೇಳಿಕೆ ಈಗ ವೈರಲ್‌..!

ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಅನುಷ್ಕಾ, ನಾವು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ. ಮಹಾಕಾಳೇಶ್ವರ ದೇವಸ್ಥಾನದಲ್ಲಿ ಉತ್ತಮ ದರ್ಶನ ಆಯಿತು' ಎಂದು ಅನುಷ್ಕಾ ಶರ್ಮಾ ಹೇಳಿದರು.

Follow Us:
Download App:
  • android
  • ios