Asianet Suvarna News Asianet Suvarna News

ರೀ-ರಿಲೀಸ್ ಆಗ್ತಿದೆ 'ದಿ ಕಾಶ್ಮೀರ್ ಫೈಲ್ಸ್'; ಮತ್ತೆ ಬಿಡುಗಡೆ ಮಾಡುತ್ತಿರುವ ಕಾರಣ ಬಿಚ್ಚಿಟ್ಟ ಅಗ್ನಿಹೋತ್ರಿ

ವಿವೇಕ್ ಅಗ್ನಿಹೋತ್ರಿ ಅವರ ಸೂಪರ್ ಹಿಟ್ ಕಾಶ್ಮೀರ್ ಫೈಲ್ಸ್ ಸಿನಿಮಾ ರೀ-ರಿಲೀಸ್ ಆಗುತ್ತಿದೆ. 

vivek Agnihotri's The Kashmir Files to re-release in theatres on January 19 sgk
Author
First Published Jan 18, 2023, 5:01 PM IST

ದಿ ಕಾಶ್ಮೀರ್ ಫೈಲ್ಸ್ 2022ರಲ್ಲಿ ಬಾಲಿವುಡ‌ನಲ್ಲಿ ಸೂಪರ್ ಹಿಟ್ ಆದ ಸಿನಿಮಾ. ವಿವೇಕ್ ಆಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಮಾರ್ಚ್ 11ರಂದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದೇಶದಾದ್ಯಂತ ರಿಲೀಸ್ ಆಯಿತು. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿತು. ಈ ಸಿನಿಮಾ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಬಗ್ಗೆ ಇರುವ ಸಿನಿಮಾವಾಗಿದೆ. ನೈಜ ಘಟನೆ ಆಧಾರಿದ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಬಳಿಕ ಪರ-ವಿರೋಧ ಚರ್ಚೆ ಕೂಡ ನಡೆದಿತ್ತು. ಈ ಸಿನಿಮಾ ರಿಲೀಸ್ ಆಗಿದ್ದು ಆಯ್ತು, ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು ಆಯ್ತು. ಈಗ್ಯಾಕೆ ಮತ್ತೆ ಮಾತು ಅಂತಿರಾ? ಯಾಕೆಂದರೆ ಕಾಶ್ಮೀರ್ ಫೈಲ್ಸ್ ಮತ್ತೆ ರಿಲೀಸ್ ಆಗುತ್ತಿದೆ, ಚಿತ್ರಮಂದಿರಕ್ಕೆ ಬರ್ತಿದೆ. 

ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ರೀ-ರಿಲೀಸ್ ಮಾಡುವುದಾಗಿ ಸಿನಿಮಾತಂಡ ಅನೌನ್ಸ್ ಮಾಡಿದೆ. ಈ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಾಮಾಜಿಕ ಜಾಲಾತಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ರೀ-ರಿಲೀಸ್ ಮಾಡುತ್ತಿರುವುದಕ್ಕೂ ಒಂದು ಕಾರಣವಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಘಟನೆಗೆ 33 ವರ್ಷಗಳಾಗುತ್ತಿದೆ. ಅವರಿಗೆ ಗೊರವ ಸಲ್ಲಿಸುವ ಕಾರಣಕ್ಕೆ ಚಿತ್ರವನ್ನು ರೀ ರಿಲೀಸ್ ಮಾಡಲಾಗುತ್ತಿದೆ. ಅಂದಹಾಗೆ ಈ ಸಿನಿಮಾ ಜನವರಿ 19ರಂದು ಬಿಡುಗಡೆಯಾಗುತ್ತಿದ್ದು ಸಿನಿಮಾ ನೋಡದೆ ಇರುವವರು ಮತ್ತೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಆನಂದಿಸ ಬಹುದು. 

ಆಸ್ಕರ್​ ರೇಸ್​ನಲ್ಲಿ ದಿ ಕಾಶ್ಮೀರ್ ಫೈಲ್ಸ್: 'Propaganda' ಎಂದವರಿಗೆ ಕಪಾಳಮೋಕ್ಷ

ಈ ಬಗ್ಗೆ ಕಾಶ್ಮೀರ್ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ವರ್ಷದಲ್ಲಿ ಎರಡು ಬಾರಿ ಸಿನಿಮಾವನ್ನು ರಿಲೀಸ್ ಮಾಡುತ್ತಿರುವುದಾಗಿ ಹೇಳಿದ್ದಾರೆ. 'ಬಹುಶಃ ಒಂದೇ ವರ್ಷದಲ್ಲಿ 2 ಬಾರಿಗೆ ಸಿನಿಮಾ ಬಿಡುಗಡೆಯಾಗುತ್ತಿದೆ. ಕಾಶ್ಮೀರ ಪಂಡಿತರ ಹತ್ಯೆ ಘಟನೆಗೆ 33 ವರ್ಷವಾದ ಕಾರಣ ರಿಲೀಸ್ ಆಗುತ್ತಿದೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಿಲೀಸ್ ಮಾಡಲಾಗುತ್ತಿದೆ. ವೀಕ್ಷಿಸಿ' ಎಂದು ಹೇಳಿದ್ದಾರೆ. ಇನ್ನು ವಿವೇಕ್ ಅಗ್ನಿಹೋತ್ರಿ ಕೂಡ ಅದೇ ಪೋಸ್ಟ್ ಶೇರ್ ಮಾಡಿದ್ದಾರೆ.

ವೈ ಭದ್ರತೆಯಲ್ಲಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಾಕಿಂಗ್; ಹಿಗ್ಗಾಮುಗ್ಗಾ ಟ್ರೋಲ್

ಕಾಶ್ಮೀರ ಫೈಲ್ಸ್, ವಿವೇಕ್ ಅಗ್ನಿಹೋತ್ರಿ ಬರೆದು, ನಿರ್ದೇಶಿಸಿದ ಸಿನಿಮಾ. 1990ರಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ವಲಸೆಯ  ಕಥಾಹಂದರವನ್ನು ಹೊಂದಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಅನುಪಮ್ ಖೇರ್ ಸೇರಿದಂತೆ ಕಾಶ್ಮೀರ್ ಫೈಲ್ಸ್ ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್ ಮತ್ತು ಪಲ್ಲವಿ ಜೋಶಿ ನಟಿಸಿದ್ದಾರೆ. ಇದೀಗ ಮತ್ತೆ ಚಿತ್ರಮಂದಿರಕ್ಕೆ ಬರ್ತಿವ ಕಾಶ್ಮೀರ್ ಫೈಲ್ಸ್ ಮತ್ತೆ ಚಿತ್ರಮಂದಿರಗಳಲ್ಲಿ ಕಮಾಲ್ ಮಾಡುತ್ತಾ ಮುಗಿಬಿದ್ದು ಅಭಿಮಾನಿಗಳು ಸಿನಿಮಾ ನೋಡುತ್ತಾರಾ ಎಂದು ಕಾದುನೋಡಬೇಕು. 
 

Follow Us:
Download App:
  • android
  • ios