Oscar 2023; ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ದೀಪಿಕಾ ನಿರೂಪಕಿ; 'ಅಚ್ಚೇ ದಿನ್' ಎಂದ ವಿವೇಕ್ ಅಗ್ನಿಹೋತ್ರಿ
Oscar 2023; ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ದೀಪಿಕಾ ನಿರೂಪಕಿಯಾಗಿದ್ದಾರೆ. ವಿವೇಕ್ ಆಗ್ನಿಹೋತ್ರಿ 'ಅಚ್ಚೇ ದಿನ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮಾರ್ಚ್ 12ರಂದು ಲಾಸ್ ಏಂಜಲೀಸ್ ನಲ್ಲಿ ಅಕಾಡೆಮಿ ಅವಾರ್ಡ್ ಸಮಾರಂಭ ನಡೆಯಲಿದೆ. ಇಡೀ ವಿಶ್ವವೇ ಎದುರು ನೋಡುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಭಾರತೀಯರಿಗೂ ವಿಶೇಷವಾಗಿದೆ. ಈ ಬಾರಿ ತೆಲುಗಿನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ಗೆ ನಾಮನಿರ್ದೇಶನ ಗೊಂಡಿದೆ. ಹಾಗಾಗಿ ಈ ಬಾರಿ ಭಾರತಕ್ಕೆ ಒಂದು ಆಸ್ಕರ್ ಪಕ್ಕಾ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಹಾಗಾಗಿ ಈ ಬಾರಿ ತುಂಬಾ ವಿಶೇಷವಾಗಿದೆ. ಈ ನಡುವೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬಹಿರಂಗವಾಗಿದೆ.
ಆಸ್ಕರ್ 2023 ಸಮಾರಂಭಕ್ಕೆ ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ಎಂಟ್ರಿ ಕೊಡುತ್ತಿದ್ದಾರೆ. ಆಸ್ಕರ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ದೀಪಿಕಾ ಕೂಡ ಒಬ್ಬರಾಗಿದ್ದಾರೆ. ಅಷ್ಟಕ್ಕೂ ದೀಪಿಕಾ ಯಾಕೆ ಆಸ್ಕರ್ ವೇದಿಕೆಯಲ್ಲಿ ಅಂತೀರಾ? ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ದೀಪಿಕಾ ನಿರೂಪಕರಲ್ಲಿ ಒಬ್ಬರಾಗಿದ್ದಾರೆ. ಹಾಲಿವುಡ್‌ನ ಖ್ಯಾತ ಕಲಾವಿದರ ಜೊತೆ ಬಾಲಿವುಡ್ ಸ್ಟಾರ್ ಕೂಡ ಒಬ್ಬರಾಗಿರುವುದು ವಿಶೇಷವಾಗಿದೆ. ಡ್ವೇನ್ ಜಾನ್ಸನ್, ಎಮಿಲಿ ಬ್ಲಂಟ್, ಮೈಕೆಲ್ ಬಿ. ಜೋರ್ಡಾನ್ ಸೇರಿದಂತೆ ಇನ್ನು ಅನೇಕರ ಜೊತೆಗೆ ದೀಪಿಕಾ ಕೂಡ ಇರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ.
ದೀಪಿಕಾ ಪಡುಕೋಣೆ ಆಸ್ಕರ್ ನಿರೂಪಣೆಗೆ ಮಾಡುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗುತ್ತಿದ್ದಂತೆ ಬಾಲಿವುಡ್ ನಿರ್ದೇಶಕ ಅಚ್ಚೆ ದಿನ್ ಎಂದು ಹೇಳಿದ್ದಾರೆ. ಕಾಶ್ಮೀರ್ ಫೈಲ್ಸ್ ಜೊತೆಗೆ ಯುಎಸ್ ನಲ್ಲಿ ಪ್ರಯಾಣಿಸುವಾಗ ಅವರ ಪ್ರತಿಕ್ರಿಯೆ ಅದ್ಭುತವಾಗಿತ್ತು. ಆಗ ನಾನು ಹೇಳಿದ್ದೆ ಪ್ರತಿಯೊಬ್ಬರೂ ಭಾರತದಲ್ಲಿ ತಮ್ಮ ಹೆಜ್ಜೆಗುರುತನ್ನು ಹೆಚ್ಚಿಸಲು ಬಯಸುತ್ತಾರೆ. ಭಾರತವು ಈಗ ವಿಶ್ವದ ಅತ್ಯಂತ ಲಾಭದಾಯಕ, ಸುರಕ್ಷಿತ ಮತ್ತು ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ಇದು ಭಾರತೀಯ ಚಿತ್ರರಂಗದ ವರ್ಷ' ಎಂದು ಹೇಳಿದ್ದಾರೆ. ಜೊತೆಗೆ #AchcheDin ಎಂದು ಹೇಳಿದ್ದಾರೆ. ಆಸ್ಕರ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ದೀಪಿಕಾ ಫೋಟೋ ಶೇರ್ ಮಾಡಿ ನಿರೂಪಣೆ ವಿಚಾರ ಅಧಿಕೃತ ಗೊಳಿಸಿದ್ದರು. ಅದಕ್ಕೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿ ಅಚ್ಚೆ ದಿನ್ ಎಂದು ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಈ ಮೊದಲು ದೀಪಿಕಾ ವಿರುದ್ಧ ಅನೇಕ ಬಾರಿ ಹರಿಹಾಯ್ದಿದ್ದರು. ದೀಪಿಕಾ ನಟನೆಯ ಬೇಷರಂ ರಂಗ್ ಹಾಡಿನ ವಿರುದ್ಧ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದರು. ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ದೀಪಿಕಾ ಭಾಗಿಯಾದ ಬಳಿಕ ಮೊದಲ ಬಾರಿಗೆ ದೀಪಿಕಾರನ್ನು ಟೀಕಿದ್ದರು.
Oscar 2023; ಅಕಾಡೆಮಿ ಸಮಾರಂಭದಲ್ಲಿ ಭಾರತದ ಈ ಖ್ಯಾತ ಗಾಯಕರಿಂದ 'ನಾಟು ನಾಟು...' ಪ್ರದರ್ಶನ
ಆಸ್ಕರ್ ಅಂಗಳದಲ್ಲಿ ಆರ್ ಆರ್ ಆರ್
ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ನ ಅಂತಿಮ ರೇಸ್ ನಲ್ಲಿದೆ. ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ನಾಟು ನಾಟು ಸ್ಪರ್ಧಿಸಿದೆ. ಸಮಾರಂಭದ ದಿನ ಆಸ್ಕರ್ ವೇದಿಕೆಯಲ್ಲಿ ಭಾರತದ ಇಬ್ಬರೂ ಖ್ಯಾತ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಆರ್ ಆರ್ ಆರ್ ತಂಡದ ವರ್ಲ್ಡ್ ಫೇಮಸ್ ನಾಟು ನಾಟು..ಹಾಡಿಗೆ ಧ್ವನಿಯಾಗಲಿದ್ದಾರೆ. ಈ ಇಬ್ಬರೂ ಗಾಯಕರಾದ ರಾಹುಲ್ ಮತ್ತು ಕಾಲ ಭೈರವ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿರುವ ಡಾಲ್ಬಿ ಚಿತ್ರಮಂದಿರದಲ್ಲಿ ಪ್ರದರ್ಶನ ನೀಡಲಿದ್ದಾರೆ.
Oscar 2023; ಆಸ್ಕರ್‌ಗಾಗಿ ಬರಿಗಾಲಿನಲ್ಲೇ US ಹಾರಿದ ರಾಮ್ ಚರಣ್, ಜೂ.ಎನ್ ಟಿ ಆರ್ ಹೋಗೋದು ಯಾವಾಗ?
ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಆಸ್ಕರ್ ನಲ್ಲಿ ಸ್ಪರ್ಧೆಗೆ ಇಳಿದಿದೆ. ನಾಟು ನಾಟು...ಇತರ 4 ನಾಮನಿರ್ದೇಶಿತ ಹಾಡುಗಳ ಜೊತೆ ಸ್ಪರ್ಧಿಸುತ್ತಿದೆ. ಟೆಲ್ ಇಟ್ ಲೈಕ್ ಎ ವುಮನ್ ಸಿನಿಮಾ ಹಾಡು, ಲೇಡಿ ಗಾಗಾ ಅವರ ಹೋಲ್ಡ್ ಮೈ ಹ್ಯಾಂಡ್, ರಿಹಾನಾ ಅವರ ಲಿಫ್ಟ್ ಮಿ ಅಪ್ ಮತ್ತು ದಿಸ್ ಈಸ್ ಎ ಲೈಫ್ ಹಾಡುಗಳ ಜೊತೆ ಪೈಪೋಟಿ ಮಾಡಬೇಕಿದೆ. ಈ ಎಲ್ಲಾ ಹಾಡುಗಳನ್ನು ಹಿಂದಿಕ್ಕಿ ನಾಟು ನಾಟು... ಆಸ್ಕರ್ ಎತ್ತಿ ಹಿಡಿಯುತ್ತಾ ಎಂದು ಇಡೀ ಭಾರತದ ಕಾರತದಿಂದ ಕಾಯುತ್ತಿದ್ದೆ.