Oscar 2023; ಅಕಾಡೆಮಿ ಸಮಾರಂಭದಲ್ಲಿ ಭಾರತದ ಈ ಖ್ಯಾತ ಗಾಯಕರಿಂದ 'ನಾಟು ನಾಟು...' ಪ್ರದರ್ಶನ
ಆಸ್ಕರ್ 2023 ವೇದಿಕೆಯಲ್ಲಿ ಆರ್ ಆರ್ ಆರ್ ಸಿನಿಮಾ ನಾಟು ನಾಟು ಹಾಡನ್ನು ಭಾರತದ ಖ್ಯಾತ ಗಾಯಕರಾದ ಕಾಲ ಭೈರವ ಮತ್ತು ರಾಹುಲ್ ಹಾಡುತ್ತಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಆರ್ ಆರ್ ಆರ್ ಇದೀಗ ಆಸ್ಕರ್‌ನ ಅಂತಿಮ ರೇಸ್‌ನಲ್ಲಿದೆ. ಆಸ್ಕರ್ ಗಾಗಿ ಆರ್ ಆರ್ ಆರ್ ತಂಡ ಮಾತ್ರವಲ್ಲದೇ ಇಡೀ ಭಾರತ ಎದುರು ನೋಡುತ್ತಿದೆ. ಅಂದಹಾಗೆ ಬಹುನಿರೀಕ್ಷೆ ಆಸ್ಕರ್ ಅವಾರ್ಡ್ ಸಮಾರಂಭ ಮಾರ್ಚ್ 12ರಂದು ಲಾಸ್ ಏಂಜಲೀಸ್ ನಲ್ಲಿ ನಡೆಯಲಿದೆ. ವಿಶೇಷ ಪ್ರದರ್ಶನ ಮಾರ್ಚ್ 1 ರಿಂದ ಥಿಯೇಟರ್‌ನಲ್ಲಿ ಪ್ರಾರಂಭವಾಗಲಿದೆ. ವಿಶೇಷ ಪ್ರದರ್ಶನದಲ್ಲಿ ಎಸ್‌ಎಸ್ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತು ನಟ ರಾಮ್ ಚರಣ್ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಈಗಾಗಲೇ ಆರ್ ಆರ್ ಆರ್ ತಂಡದಿಂದ ರಾಜಮೌಳಿ ಮತ್ತು ರಾಮ್ ಚರಣ್ ಅಮೆರಿಕಾದಲ್ಲಿದ್ದು ಅನೇಕ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಅಮೆರಿಕಾ ವಾಹಿನಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ಆರ್ ಆರ್ ಆರ್ ತಂಡ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ಸ್‌ನಲ್ಲಿ (HCA) ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ’ಪ್ರಶಸ್ತಿ ಸೇರಿದಂತೆ ಒಟ್ಟು 4 ಪ್ರಶಸ್ತಿಗೆದ್ದುಕೊಂಡಿತ್ತು. ಇದೀಗ ಆರ್ ಆರ್ ಆರ್ ತಂಡದ ಗಮನವೇನಿದ್ರು ಆಸ್ಕರ್ ಕಡೆ.
ರಿಹಾನ್ನಾ, ಲೇಡಿ ಗಾಗಾ ಸೇರಿ 4 ಹಾಡುಗಳ ಜೊತೆ ನಾಟು..ನಾಟು..ಸ್ಪರ್ಧೆ; ಆಸ್ಕರ್ ರೇಸ್‌ನಲ್ಲಿವೆ 2 ಸಾಕ್ಷ್ಯಚಿತ್ರ
ಈ ನಡುವೆ ಅಕಾಡೆಮಿ ಅವಾರ್ಡ್ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬಹಿರಂಗ ಪಡಿಸಿದೆ. ಈ ಬಾರಿಯ ಆಸ್ಕರ್ ವೇದಿಕೆಯಲ್ಲಿ ಭಾರತದ ಇಬ್ಬರೂ ಖ್ಯಾತ ಗಾಯಕರು ಆರ್ ಆರ್ ಆರ್ ತಂಡದ ವರ್ಲ್ಡ್ ಫೇಮಸ್ ನಾಟು ನಾಟು..ಹಾಡಿಗೆ ಧ್ವನಿಯಾಗಲಿದ್ದಾರೆ. ಆ ಖ್ಯಾತ ಗಾಯಕರು ಮಾತ್ಯರು ಅಲ್ಲ, ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ. ಈ ಇಬ್ಬರೂ ಗಾಯಕರು ಆಸ್ಕರ್ ನಲ್ಲಿ ಪರ್ಫಾರ್ಮ್ ಮಾಡಲಿದ್ದಾರೆ ಎಂದು ಅಕಾಡೆಮಿ ಅವಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಈ ಇಬ್ಬರೂ ಗಾಯಕರಾದ ರಾಹುಲ್ ಮತ್ತು ಕಾಲ ಭೈರವ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ಪ್ರದರ್ಶನ ನೀಡಲಿದ್ದಾರೆ.
RRR: ಇನ್ನೂ ನಿಂತಿಲ್ಲ ಪ್ರಶಸ್ತಿಗಳ ಬೇಟೆ; ಆಸ್ಕರ್‌ಗೂ ಮೊದಲೇ ರಾಜಮೌಳಿ ಚಿತ್ರಕ್ಕೆ ಮತ್ತೊಂದು ಅವಾರ್ಡ್
ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಆಸ್ಕರ್ ನಲ್ಲಿ ಸ್ಪರ್ಧೆಗೆ ಇಳಿದಿದೆ. ನಾಟು ನಾಟು...ಇತರ 4 ನಾಮನಿರ್ದೇಶಿತ ಹಾಡುಗಳ ಜೊತೆ ಸ್ಪರ್ಧಿಸುತ್ತಿದೆ. ಟೆಲ್ ಇಟ್ ಲೈಕ್ ಎ ವುಮನ್ ಸಿನಿಮಾ ಹಾಡು, ಲೇಡಿ ಗಾಗಾ ಅವರ ಹೋಲ್ಡ್ ಮೈ ಹ್ಯಾಂಡ್, ರಿಹಾನಾ ಅವರ ಲಿಫ್ಟ್ ಮಿ ಅಪ್ ಮತ್ತು ದಿಸ್ ಈಸ್ ಎ ಲೈಫ್ ಹಾಡುಗಳ ಜೊತೆ ಪೈಪೋಟಿ ಮಾಡಬೇಕಿದೆ. ಈ ಎಲ್ಲಾ ಹಾಡುಗಳನ್ನು ಹಿಂದಿಕ್ಕಿ ನಾಟು ನಾಟು... ಆಸ್ಕರ್ ಎತ್ತಿ ಹಿಡಿಯುತ್ತಾ ಎಂದು ಇಡೀ ಭಾರತದ ಕಾರತದಿಂದ ಕಾಯುತ್ತಿದ್ದೆ.