Asianet Suvarna News Asianet Suvarna News

ನಟಿಯರು ಹೆಂಡ್ತಿ ಆಗೋದು ಬೇಡವೇ ಬೇಡ; ತಮನ್ನಾ ನೋಡಿ ವಿಜಯ್ ಮನಸ್ಸು ಬದಲಾಯಿಸಿದ್ದು ಯಾಕೆ?

ಲಸ್ಟ್‌ ಸ್ಟೋರಿಸ್‌ 2 ವೆಬ್‌ ಸೀರಿಸ್‌ನಿಂದ ವಿಜಯ್ -ತಮನ್ನಾ ಲವಿ ಡವಿ. ವಿಜಯ್ ಸಂದರ್ಶನ ಸಖತ್ ವೈರಲ್.....
 

Vijay Varma reveals never wanted to date actress but Tamannaah Bhatia change life perspective vcs
Author
First Published Aug 28, 2023, 2:48 PM IST

ಸುಜಯ್ ಘೋಶ್ ನಿರ್ದೇಶನದ ಲಸ್ಟ್‌ ಸ್ಟೋರಿಸ್ 2 ವೆಸ್ ಸೀರಿಸ್‌ನಲ್ಲಿ ನಟಿಸಿರುವ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಹಲವು ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಈ ಡಿಫರೆಂಟ್‌ ಕಪಲ್‌ಗಳ ಎಲ್ಲೇ ಹೋದರು ನೆಟ್ಟಿಗರ ಗಮನ ಸೆಳೆಯುತ್ತಾರೆ. ತಮನ್ನಾ ಮತ್ತು ವಿಜಯ್ ಆಗಾಗ ಒಬ್ಬರ ಕೆಲಸದ ಬಗ್ಗೆ ಮತ್ತೊಬ್ಬರು ಮಾತನಾಡಿ ಹೆಮ್ಮೆಯಿಂದ ಖುಷಿ ವ್ಯಕ್ತ ಪಡಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಬಹಿರಂಗವಾಗಿ ಫ್ಲರ್ಟ್ ಮಾಡುತ್ತಾರೆ. ಆದರೆ ಕೆಲವು ದಿನಗಳಿಂದ ವೈರಲ್ ಅಗುತ್ತಿರು ವಿಡಿಯೋದಲ್ಲಿ ವಿಜಯ್ ವರ್ಮಾ ಎಂದೂ ನಟಿಯರನ್ನು ಡೇಟಿಂಗ್ ಮಾಡಬಾರದು ಅಂದುಕೊಂಡಿದ್ದರಂತೆ. 

ತಮನ್ನಾ ಭಾಟಿಯಾ ಜೊತೆ ಸಂಬಂಧದ ನಂತರದ ಲೈಮ್‌ಲೈಟ್‌ ಕಂಫರ್ಟಬಲ್‌ ಅಲ್ಲ: ವಿಜಯ್ ವರ್ಮಾ

'ವೃತ್ತಿ ಜೀವನ ಆರಂಭಿಸಿದಾಗ ನಾನು ಚಿತ್ರರಂಗದಲ್ಲಿರುವ ಯಾರೊಟ್ಟಿಗೂ ಸಂಬಂಧ ಕಟ್ಟಿಕೊಳ್ಳಬಾರದು ಅದರಲ್ಲೂ ಪ್ರೀತಿಯಲ್ಲಿ ಬೀಳಬಾರದು ಅಂದಿಕೊಂಡಿದ್ದೆ. ಕಾರಣ ನಾನು ಆರಂಭದಲ್ಲಿ ಚಿತ್ರರಂಗದ ವಿರುದ್ಧವಾಗಿದ್ದೆ ತುಂಬಾ ಕೋಪ ಇತ್ತು. ಆದರೆ ತಮನ್ನಾ ಮತ್ತು ನಾನು ಮೊದಲು ನೋಡಿದಾಗ ಖುಷಿಯಾಗುತ್ತಿತ್ತು ಆಗ ಜೀವನದಲ್ಲಿ ಸಂಗಾತಿ ಪ್ರಮುಖ್ಯತೆ ಅರ್ಥವಾಗುತ್ತಿತ್ತು.. ನಮ್ಮ ಗೇಮ್ ನಮ್ಮ ಕೆಲಸ ನಮ್ಮ ಬ್ಯುಸಿನೆಸ್‌ ಅರ್ಥ ಮಾಡಿಕೊಳ್ಳುವುದು ಬಹಳ ಕಡಿಮೆ ಮಂದಿ ಅದರಲ್ಲೂ ಆರ್ಟಿಸ್ಟ್‌ನ ಅರ್ಥ ಮಾಡಿಕೊಳ್ಳುವುದು ಅವರ ಕ್ರಿಯೇಟಿವಿ ಗುರುತಿಸುವುದು ಮತ್ತು ಜೀವನದ ಲಾಜಿಸ್ಟಿಕ್‌, ಹಣಕಾಸಿವ ವ್ಯವಹಾರ ..ಸಿನಿಮಾ ಮಾಡುವು ...ಹೀಗೆ ಪ್ರತಿಯೊಂದನ್ನು ಅರ್ಥ ಮಾಡಿಕೊಳ್ಳುವವರು ಸಿಗುವುದಿಲ್ಲ' ಎಂದು ವಿಜಯ್ ವರ್ಮಾ ಫಿಲ್ಮಂ ಕಂಪ್ಯಾನಿಯನ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಜೈಲರ್ ಯಶಸ್ಸಿನ ಬೆನ್ನಲೆ ಮುಂಬೈ ರಸ್ತೆಯಲ್ಲಿ ತಮನ್ನಾ; ಚಪ್ಪಲಿ ಬೆಲೆ ಕೇಳಿ ನೆಟ್ಟಿಗರು ಶಾಕ್!

ತಮನ್ನಾ ತಮ್ಮ ಜೀವನಕ್ಕೆ ಎಂಟ್ರಿ ಕೊಟ್ಟ ಕ್ಷಣದಿಂದ ಜೀವನ ನೋಡುವ ದೃಷ್ಟಿ ಬದಲಾಗಿದೆ ಎಂದು ವಿಜಯ್ ವರ್ಮಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 'ಚಿತ್ರರಂಗದಲ್ಲಿ ಆಕೆಗಿರುವ ಅನುಭವ ಆಕೆಯ ಶ್ರಮ ಮತ್ತು ಒಳ್ಳೆ ಸೆನ್ಸ್‌ ನನಗೆ ತುಂಬಾ ಸಹಾಯ ಮಾಡಿದೆ. ಅದೆಷ್ಟೋ ವಿಚಾರಗಳಿಗೆ ಅರ್ಥ ಕಲ್ಪಿಸಿಕೊಡುತ್ತಾಳೆ. ಕೆಲುವೊಮ್ಮೆ ನಾನು ನರಳುತ್ತಿರುವೆ ಆಗ ಆಕೆ ದಿನ ಬದಲಾಯಿಸುತ್ತಾಳೆ. ಸಂದರ್ಶನದಲ್ಲಿ ಏನೇ ಹೇಳಲ್ಲಿ ಏನೇ ಮಾತುಕಥೆ ಮಾಡಲಿ ಆಕೆ ಅದಕ್ಕೊಂದು ಅರ್ಥ ನೀಡುತ್ತಾರೆ. ಹೀಗಾಗಿ ತಮನ್ನ ಬಂದ ಮೇಲೆ ಜೀವನ ಬದಲಾಗಿದೆ' ಎಂದು ವಿಜಯ್ ವರ್ಮಾ ಹೇಳಿದ್ದಾರೆ. 

Follow Us:
Download App:
  • android
  • ios