MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ತಮನ್ನಾ ಭಾಟಿಯಾ ಜೊತೆ ಸಂಬಂಧದ ನಂತರದ ಲೈಮ್‌ಲೈಟ್‌ ಕಂಫರ್ಟಬಲ್‌ ಅಲ್ಲ: ವಿಜಯ್ ವರ್ಮಾ

ತಮನ್ನಾ ಭಾಟಿಯಾ ಜೊತೆ ಸಂಬಂಧದ ನಂತರದ ಲೈಮ್‌ಲೈಟ್‌ ಕಂಫರ್ಟಬಲ್‌ ಅಲ್ಲ: ವಿಜಯ್ ವರ್ಮಾ

ದಹಾದ್, ಲಸ್ಟ್ ಸ್ಟೋರೀಸ್ 2 ಮತ್ತು ಕಾಲ್‌ಕೂಟ್‌ನಲ್ಲಿ ಅಭಿಮಾನಿಗಳು ಮತ್ತು ಪ್ರೇಕ್ಷಕರಿಂದ ಪ್ರಶಂಸೆ ಗಳಿಸಿದ ನಟ ವಿಜಯ್‌ ವರ್ಮಾ  ಪ್ರಸ್ತುತ ತಮ್ಮ ಕೆರಿಯರ್‌ನ ಯಶಸ್ಸನ್ನು  ಆನಂದಿಸುತ್ತಿದ್ದಾರೆ. ಅದರ ಜೊತೆಗೆ  ವಿಜಯ್‌ ವರ್ಮಾ ( Vijay Varma) ಅವರ ಪರ್ಸನಲ್‌ ಲೈಪ್‌ ಸಹ ಸಖತ್‌ ಸದ್ದು ಮಾಡುತ್ತಿದೆ. ಇತ್ತೀಚಿಗೆ ವಿಜಯ್ ವರ್ಮಾ, ಗೆಳತಿ ತಮನ್ನಾ ಭಾಟಿಯಾ (Tamannaah Bhatia) ಅವರೊಂದಿಗಿನ ಸಂಬಂಧದ ಬಗ್ಗೆ  ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮನ್ನಾಜೊತೆಯ ಸಂಬಂಧದ ನಂತರದ ಲೈಮ್‌ಲೈಟ್‌ ಹೇಗೆ ಅವರ ಜೀವನದಲ್ಲಿ ಬದಲಾವಣೆ ತಂದಿದೆ ಹಾಗೂ ಅದು ಆರಾಮದಾಯಕವಲ್ಲ ಎಂದು ಹೇಳಿದ್ದಾರೆ.

2 Min read
Suvarna News
Published : Aug 20 2023, 05:32 PM IST
Share this Photo Gallery
  • FB
  • TW
  • Linkdin
  • Whatsapp
110
Image: Instagram

Image: Instagram

ಇಂದು, ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ಜೋಡಿಗಳಲ್ಲಿ ಒಬ್ಬರು, ಆಗಾಗ ಜೊತೆಗೆ ಕಾಣಿಸಿಕೊಳ್ಳುವ ಈ ಜೋಡಿ ಪ್ರಸ್ತುತ ನ್ಯೂಸ್‌ನಲ್ಲಿದ್ದಾರೆ.

210

ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ತಮ್ಮ ಸಂಬಂಧವನ್ನು ಘೋಷಿಸಿದಾಗಿನಿಂದ, ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಲವ್ ಬರ್ಡ್ಸ್ ಅನ್ನು ಹೆಚ್ಚು ಬೇಡಿಕೆಯಿರುವ ಜೋಡಿಗಳಲ್ಲಿ ಒಬ್ಬರು ಎಂದು ಲೇಬಲ್ ಮಾಡಲಾಗಿದೆ.

310

ಪ್ರಮುಖ ಭಾರತೀಯ ಮನರಂಜನಾ ಪೋರ್ಟಲ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ವಿಜಯ್‌  ಅವರ ಅಭಿಮಾನಿಗಳು ತಮ್ಮ ವೈಯಕ್ತಿಕ ಜೀವನದ ಅತೀವ ಆಸಕ್ತಿಯನ್ನು ತೋರಿಸುವುದರ ಬಗ್ಗೆ ಮತ್ತು ಇತ್ತೀಚಿನ ಬದಲಾವಣೆಗಳ ಕುರಿತು ಮಾತನಾಡಿದ್ದಾರೆ.

410

ಗೆಳತಿ ತಮನ್ನಾ ಭಾಟಿಯಾ  ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತ  ಈ ಲೈಮ್‌ಲೈಟ್‌ ವಿಶೇಷವಾಗಿ ಕಂಫರ್ಟಬಲ್‌ ಅಲ್ಲ  ಮತ್ತು ನಾನು ಒಗ್ಗಿಕೊಳ್ಳಲು ಪ್ರಯತ್ನಿಸುತ್ತದ್ದೇನೆ  ಎಂದು ' ವಿಜಯ್ ಹೇಳಿದ್ದಾರೆ.

510
Tamannaah Bhatia, Vijay Varma

Tamannaah Bhatia, Vijay Varma

'ಮೊದಲನೆಯದಾಗಿ, ನಾವು ಹೆಚ್ಚು ಬೇಡಿಕೆಯಿರುವ ದಂಪತಿಗಳಲ್ಲಿ ಒಬ್ಬರು ಎಂಬುದು ನನಗೆ ದೊಡ್ಡ ಸುದ್ದಿ. ಇದು ತುಂಬಾ ಹಂಬಲ್‌  ಮತ್ತು ತುಂಬಾ ಒಳ್ಳೆಯದು, ಆದರೆ  ಇದು ಮೊದಲ ಬಾರಿಗೆ ಸಂಭವಿಸಿದಾಗ ನನಗೆ ಅಭ್ಯಾಸವಿರಲಿಲ್ಲ.  ನಾನು ಸ್ವಂತವಾಗಿ ತಿರುಗಾಡುವುದು ತುಂಬಾ ಅಭ್ಯಾಸವಾಗಿತ್ತು. ನಾವು ಒಟ್ಟಿಗೆ ಹೋಗುತ್ತೇವೆ ಮತ್ತು ನಾವು ಹೆಚ್ಚಿನ ಗಮನವನ್ನು ಸೆಳೆಯುತ್ತೇವೆ. ನಾನು ವಿಶೇಷವಾಗಿ ಕಂಫರ್ಟಬಲ್‌ ಅಲ್ಲ. ಆದರೆ ನಾನು ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ'  ಎಂದು ವಿಜಯ್‌ ಹೇಳಿದ್ದಾರೆ.

610

ತಮನ್ನಾ ಈ ವರ್ಷದ ಆರಂಭದಲ್ಲಿ ವಿಜಯ್ ಅವರೊಂದಿಗಿನ ಸಂಬಂಧವನ್ನು ದೃಢಪಡಿಸಿದರು,  ಅವರು ಆಗಾಗ್ಗೆ  ಒಟ್ಟಿಗೆ ಕಾಣಿಸಿಕೊಂಡರು, ಇದು ಸಂಬಂಧದ ವದಂತಿಗಳಿಗೆ ಕಾರಣವಾಯಿತು.

710

ಲಸ್ಟ್ ಸ್ಟೋರೀಸ್ 2 ನಲ್ಲಿ ಒಟ್ಟಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗ ಇವರ ನಡುವೆ ಪ್ರೀತಿ  ಪ್ರಾರಂಭವಾಯಿತು ಎಂದು ಅವರು ಬಹಿರಂಗಪಡಿಸಿದ್ದಾರೆ. ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಅವರು ಚುಂಬಿಸುತ್ತಿರುವ ವೀಡಿಯೊ ಜನವರಿಯಲ್ಲಿ ಕಾಣಿಸಿಕೊಂಡಿತ್ತು.


 
 

810

ವಿಜಯ್ ಮತ್ತು ತಮನ್ನಾ ಲಸ್ಟ್ ಸ್ಟೋರೀಸ್ 2 ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು, ಇದರಲ್ಲಿ ಅವರ  ಪ್ರಣಯ ಮತ್ತು ನಿಕಟ ದೃಶ್ಯಗಳು ಪ್ರೇಕ್ಷಕರನ್ನು ಸಂಪೂರ್ಣವಾಗಿ ಪ್ರಭಾವಿತಗೊಳಿಸಿದವು. ಈ ಸೀರಿಸ್‌ಗಾಗಿ ತಮನ್ನಾ ಕೂಡ ತನ್ನ ನೋ-ಕಿಸ್ ಆನ್-ಸ್ಕ್ರೀನ್ ನೀತಿಯನ್ನು ಮುರಿದರು.

910

ವಿಜಯ್ ಅವರು ಇತ್ತೀಚೆಗೆ ಕಾಲ್‌ಕೂಟದಲ್ಲಿ ಕಾಣಿಸಿಕೊಂಡರು. JioCinema ನಲ್ಲಿ ಸ್ಟ್ರೀಮ್ ಆಗುತ್ತಿರುವ ವೆಬ್ ಸರಣಿಯಲ್ಲಿ ಶ್ವೇತಾ ತ್ರಿಪಾಠಿ ಶರ್ಮಾ, ಯಶಪಾಲ್ ಶರ್ಮಾ, ಗೋಪಾಲ್ ದತ್ ಮತ್ತು ಸೀಮಾ ಬಿಸ್ವಾಸ್ ಕೂಡ ಕಾಣಿಸಿಕೊಂಡಿದ್ದಾರೆ. ಸುಮಿತ್ ಸಕ್ಸೇನಾ ನಿರ್ದೇಶನದ ಈ ಸರಣಿಯಲ್ಲಿ ವಿಜಯ್ ಅವರು ಬಹಳ ಸಮಯದ ನಂತರ ಸಕಾರಾತ್ಮಕ ಪಾತ್ರವನ್ನು ಹೊಂದಿದ್ದಾರೆ.

 

1010

ಮುಂದಿನ ದಿನಗಳಲ್ಲಿ ವಿಜಯ್ ಅವರ ಥ್ರಿಲ್ಲರ್ ಬಿಡುಗಡೆಗೆ ಅಣಿಯಾಗಿದೆ. ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ, ಇದು ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ಪುಸ್ತಕವನ್ನು ಆಧರಿಸಿದೆ ಮತ್ತು ಜೈದೀಪ್ ಅಹ್ಲಾವತ್ ಮತ್ತು ಕರೀನಾ ಕಪೂರ್ ಖಾನ್ ಅವರನ್ನು ಸಹ ಒಳಗೊಂಡಿದೆ. ಇದರ ಜೊತೆಗೆ ಹೋಮಿ ಅದ್ಜಾನಿಯಾ ಅವರ ಮರ್ಡರ್ ಮುಬಾರಕ್ ಚಿತ್ರದಲ್ಲಿ ವಿಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 

About the Author

SN
Suvarna News
ಬಾಲಿವುಡ್
ದಂಪತಿಗಳು
ಸಂಬಂಧಗಳು
ತಮನ್ನಾ ಭಾಟಿಯಾ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved