ಇಳಯದಳಪತಿ ವಿಜಯ್ ನಟನೆಯ ಬಹುನಿರೀಕ್ಷೆಯ ಬೀಸ್ಟ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಬಂದ ಟ್ರೈಲರ್ ಗೆ ವಿಜಯ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇಳಯದಳಪತಿ ವಿಜಯ್ ನಟನೆಯ ಬಹುನಿರೀಕ್ಷೆಯ ಬೀಸ್ಟ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಬಂದ ಟ್ರೈಲರ್ ಗೆ ವಿಜಯ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಬೀಸ್ಟ್ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ವಿಜಯ್ ವೀರ ರಾಘವನ್ ಎನ್ನುವ ಗೂಡಾಚಾರನ ಪಾತ್ರದಲ್ಲಿ ನಟಿಸಿದ್ದಾರೆ. ಔಟ್ ಅಂಡ್ ಔಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಟ್ರೈಲರ್ ನಲ್ಲಿ ಚೆನ್ನೈ ಮಾಲ್ ಒಂದು ಅಪಹರಣ ಮಾಡಿದ ಭಯೋತ್ಪಾದಕರಿಂದ ಜನರನ್ನು ರಕ್ಷಿಸುತ್ತಿದ್ದಾರೆ. ಈ ಟ್ರೈಲರ್ ನಲ್ಲಿ ವೀರ ರಾಘವನ್ ಅವರನ್ನು ಮೀನರ್, ಲೀನರ್ ಆಂಡ್ ಸ್ಟ್ರಾಂಗರ್ ಎಂದು ವಿವರಿಸಲಾಗಿದೆ.

ಟ್ರೈಲರ್ ನಲ್ಲಿ ಪೂಜಾ ಹೆಗ್ಡೆ ಒಂದು ದೃಶ್ಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ವಿಜಯ್ ಆಕ್ಷನ್ ಕಂಡು ಭಯ ಪಡುವ ದೃಶ್ಯದಲ್ಲಿ ಪೂಜಾ ದರ್ಶನ ನೀಡಿದ್ದಾರೆ. ಅಂದಹಾಗೆ ಬೀಸ್ಟ್ ವಿಜಯ್ ನಟನೆಯ 65ನೇ ಸಿನಿಮಾವಾಗಿದೆ. ಕೊರೊನಾ ಲಾಕ್ ಡೌನ್ ಬಳಿಕ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಬಹುನಿರೀಕ್ಷೆಯ ಬೀಸ್ಟ್ ಏಪ್ರಿಲ್ 13ರಂದು ಬಿಡುಗಡೆಯಾಗುತ್ತಿದೆ. ಕನ್ನಡದ ಮೋಸ್ಟ್ ಎಕ್ಸ್ ಪೆಕ್ಟೆಡ್ ಕೆಜಿಎಫ್-2 ಸಿನಿಮಾ ಬಿಡುಗಡೆಗೂ ಒಂದು ದಿನ ಮೊದಲು ಬೀಸ್ಟ್ ಬಿಡುಗಡೆಯಾಗುತ್ತಿದೆ.

KGF 2 VS Beast: ಕರ್ನಾಟಕದಲ್ಲಿ KGF 2 ಗೆ ಫೈಟ್ ನೀಡೋಕೆ ಬೀಸ್ಟ್ ಮಾಸ್ಟರ್‌ ಪ್ಲ್ಯಾನ್.!

ಸನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಈಗಾಗಲೇ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಇದೇನು ಎಲೆಕ್ಷನ್ ಅಲ್ಲ; ವಿಜಯ್ 'ಬೀಸ್ಟ್' ಸಿನಿಮಾ ಪೈಪೋಟಿ ಬಗ್ಗೆ ಯಶ್ ಪ್ರತಿಕ್ರಿಯೆ

ಇನ್ನು ವಿಜಯ್ ಕೊನೆಯದಾಗಿ ಮಾಸ್ಟರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದರು. ಕಳೆದ ವರ್ಷ ಬಂದ ಈ ಸಿನಿಮಾಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಾತ್ರವಾಗಿತ್ತು. ಬೀಸ್ಟ ಬಳಿಕ ವಿಜಯ್ ವಂಶಿ ಪಡಿಪಲ್ಲಿ ನಿರ್ದೇಶನದ ದಿಲ್ ರಾಜು ನಿರ್ಮಾಣದ ಇನ್ನು ಹೆಸರಿಡದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೀಸ್ಟ್ ಸಿನಿಮಾ ಬಿಡುಗಡೆಯಾದ ಬಳಿಕ ಹೊಸ ಸಿನಿಮಾದ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ.

YouTube video player