Asianet Suvarna News Asianet Suvarna News

Vijay Deverakonda; ಚಿತ್ರಮಂದಿರಗಳಲ್ಲಿ ಹೀನಾಯ ಸೋತ 'ಲೈಗರ್' OTTಗೆ ಎಂಟ್ರಿ

ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಚಿತ್ರಮಂದಿರದ ಬಳಿಕ ಅನೇಕ ದಿನಗಳ ನಂತರ ಒಟಿಟಿಯಲ್ಲಿ ಬರ್ತಿದೆ. ಚಿತ್ರಮಂದಿರಗಳಲ್ಲಿ ಸೋತ ಲೈಗರ್ ಸಿನಿಮಾ ಒಟಿಟಿಯಲ್ಲಾದರೂ ಅಭಿಮಾನಿಗಳ ಮನ ಗೆಲ್ಲುತ್ತಾ ಎನ್ನುವ ಕುತೂಹಲ ಚಿತ್ರತಂಡಕ್ಕಿದೆ. 
 

Vijay Deverakonda Liger is now streaming on OTT sgk
Author
First Published Sep 22, 2022, 2:24 PM IST

ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಬಂದ ಲೈಗರ್ ಸಿನಿಮಾ ಹೀನಾಯ ಸೋಲು ಕಂಡಿದೆ. ಭಾರಿ ನಿರೀಕ್ಷೆ ಮತ್ತು ಕುತೂಹಲದಿಂದ ತೆರೆಗೆಬಂದ ಲೈಗರ್ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲಿಯೂ ಲೈಗರ್ ಚಿತ್ರ ಮಕಾಡೆ ಮಲಗಿದೆ. ಪ್ರೇಕ್ಷಕರಿರಲಿ ದೊಡ್ಡ ಪರದೆ ಮೇಲೆ ಸಿನಿಮಾ ನೋಡಿ ಸ್ವತಃ ವಿಜಯ್ ದೇವರಕೊಂಡ ಅವರಿಗೆ ಬೇಸರಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಲೈಗರ್ ಹೀನಾಯ ಸೋಲಿನ ಬಳಿಕ ತನ್ನ ಸಂಭಾವನೆಯನ್ನು ಸಹ ವಿಜಯ್ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ. ಆಗಸ್ಟ್ 25ರಂದು ತೆರೆಗೆ ಬಂದ ಲೈಗರ್ ಸಿನಿಮಾ ಅಭಿಮಾನಿಗಳನ್ನು ಭಾರಿ ನಿರಾಸೆ ಮೂಡಿಸಿದೆ. ಇದೀಗ ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳ ಬಳಿಕ ಒಟಿಟಿಯಲ್ಲಿ ಬರ್ತಿದೆ. ಚಿತ್ರಮಂದಿರಗಳಲ್ಲಿ ಸೋತ ಲೈಗರ್ ಸಿನಿಮಾ ಒಟಿಟಿಯಲ್ಲಾದರೂ ಅಭಿಮಾನಿಗಳ ಮನ ಗೆಲ್ಲುತ್ತಾ ಎನ್ನುವ ಕುತೂಹಲ ಚಿತ್ರತಂಡಕ್ಕಿದೆ. 

ಅಂದಹಾಗೆ ಲೈಗರ್ ಸಿನಿಮಾ ಒಟಿಟಿಗಳ ದೈತ್ಯ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಂದಹಾಗೆ ಲೈಗರ್ ಸಿನಿಮಾ ಇಂದಿನಿಂದ ಅಂದರೆ ಸೆಪ್ಟಂಬರ್ 22ರಿಂದ ಸ್ಟ್ರೀಮಿಂಗ್ ಪ್ರಾರಂಭಿಸಿದೆ. ಒಟಿಟಿಯಲ್ಲಿ ಲೈಗರ್ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಸಿಗಲಿದೆ, ಒಟಿಟಿ ಪ್ರೇಕ್ಷಕರು ಲೈಗರ್ ಸಿನಿಮಾ ಇಷ್ಟಪಡುತ್ತಾರಾ ಎಂದು ಕಾದುನೋಡಬೇಕು.  ಅಂದಹಾಗೆ ಲೈಗರ್ ಸಿನಿಮಾ ರಿಲೀಸ್ ಆದ ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿತ್ತು. ಆದರೆ ನಂತರ ಲೈಗರ್ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಮೊದಲ ದಿನ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿತ್ತು. 125 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾದ ಲೈಗರ್ ಸಿನಿಮಾ ಅರ್ಧದಷ್ಟು ಕಲೆಕ್ಷನ್ ಮಾಡಿಲ್ಲ ಎನ್ನಲಾಗಿದೆ. 

ಲೈಗರ್ ಹೀನಾಯ ಸೋಲು; ಮುಂಬೈ ಮನೆ ಖಾಲಿ ಮಾಡಿದ ನಿರ್ದೇಶಕ ಪುರಿ ಜಗನ್ನಾಥ್

ಲೈಗರ್ ಸಿನಿಮಾಗಾಗಿ ವಿಜಯ್ ದೇವರಕೊಂಡ ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡಿದ್ದರು. ಚಿತ್ರಕ್ಕಾಗಿ ವರ್ಕೌಟ್ ಮಾಡಿದ್ದರು. ಆದರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ. ಪುರಿ ಜಗನ್ನಾಥ್ ಸಾರಥ್ಯದಲ್ಲಿ ಲೈಗರ್ ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಸೋಲಿನ ಬಳಿಕ ಪುರಿ ಜಗನ್ನಾಥ್ ಮುಂಬೈನಲ್ಲಿ ಮನೆ ಖಾಲಿಮಾಡಿಕೊಂಡು ಹೈದರಾಬಾದ್ ಬಂದಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಬಾಡಿಗೆ ಕಟ್ಟಲು ಸಾಧ್ಯವಾಗದೆ ವಾಪಾಸ್ ಆಗಿದ್ದಾರ ಎನ್ನುವ ಸುದ್ದಿ ವೈರಲ್ ಆಗಿತ್ತು.

200 ಕೋಟಿ ಕಮ್ಮಿ ಆಯ್ತು, ಇನ್ನು ಜಾಸ್ತಿ ಗಳಿಸುತ್ತೆ; 'ಲೈಗರ್' ಬಗ್ಗೆ ದೇವರಕೊಂಡ ಮಾಡಿದ್ದ ಹಳೆಯ ಟ್ವೀಟ್ ವೈರಲ್

ಲೈಗರ್ ನಲ್ಲಿ ನಾಯಕಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ ಜೊತೆ ನಟಿಸಿದ್ದು, ಸೌತ್ ಸಿನಿಮಾರಂಗದಲ್ಲಿ ಮಿಂಚಿದರು. ಆದರೆ ಅನನ್ಯಾಗೆ ಹೇಳಿಕೊಳ್ಳುಷ್ಟು ಸಕ್ಸಸ್ ಸಿಕ್ಕಿಲ್ಲ. ಇನ್ನು ಖ್ಯಾತ ನಟಿ ರಮ್ಯಾ ಕೃಷ್ಣ ಕೂಡ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ರಮ್ಯಾ ನಟಿಸಿದ್ದರು. ಇದೀಗ ಒಟಿಟಿಗೆ ಬಂದಿರುವ ಲೈಗರ್ ಪ್ರೇಕ್ಷಕರ ಮನ ಗೆಲ್ಲುತ್ತಾ ಕಾದುನೋಡಬೇಕು.  

Follow Us:
Download App:
  • android
  • ios