ಲೈಗರ್ ಹೀನಾಯ ಸೋಲು; ಮುಂಬೈ ಮನೆ ಖಾಲಿ ಮಾಡಿದ ನಿರ್ದೇಶಕ ಪುರಿ ಜಗನ್ನಾಥ್
ರ್ದೇಶಕ ಪುರಿ ಜಗನ್ನಾಥ್ ಮುಂಬೈ ನಿವಾಸ ತೊರೆದಿದ್ದಾರೆ ಎನ್ನಲಾಗಿದೆ. ಲೈಗರ್ ಸಿನಿಮಾ ಸೋಲುತ್ತಿದ್ದಂತೆ ಪುರಿ ಜಗನ್ನಾಥ್ ಮೊದಲು ತೆಗೆದುಕೊಂಡ ನಿರ್ಧಾರ ಮುಂಬೈ ಮನೆ ಖಾಲಿ ಮಾಡಿರುವುದು.
ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಬಂದ ಲೈಗರ್ ಸಿನಿಮಾ ಹೀನಾಯ ಸೋಲು ಕಂಡಿದೆ. ಭಾರಿ ನಿರೀಕ್ಷೆ ಮತ್ತು ಕುತೂಹಲದಿಂದ ತೆರೆಗೆಬಂದ ಲೈಗರ್ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲಿಯೂ ಲೈಗರ್ ಚಿತ್ರ ಮಕಾಡೆ ಮಲಗಿದೆ. ದೊಡ್ಡ ಪರದೆ ಮೇಲೆ ಸಿನಿಮಾ ನೋಡಿ ವಿಜಯ್ ದೇವರಕೊಂಡ ಅವರಿಗೆ ಬೇಸರವಾಗಿದೆ ಎನ್ನಲಾಗಿದೆ. ಅಲ್ಲದೆ ತನ್ನ ಸಂಭಾವನೆಯನ್ನು ಸಹ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ. ಇದೀಗ ನಿರ್ದೇಶಕ ಪುರಿ ಜಗನ್ನಾಥ್ ಮುಂಬೈ ನಿವಾಸ ತೊರೆದಿದ್ದಾರೆ ಎನ್ನಲಾಗಿದೆ. ಲೈಗರ್ ಸಿನಿಮಾ ಸೋಲುತ್ತಿದ್ದಂತೆ ಪುರಿ ಜಗನ್ನಾಥ್ ಮೊದಲು ತೆಗೆದುಕೊಂಡ ನಿರ್ಧಾರ ಮುಂಬೈ ಮನೆ ಖಾಲಿ ಮಾಡಿರುವುದು ಎನ್ನಲಾಗಿದೆ.
ಲೈಗರ್ ಸಿನಿಮಾ ಪ್ರಾರಂಭವಾದಾಗ ಪುರಿ ಜಗನ್ನಾಥ್ ಮುಂಬೈನಲ್ಲಿ ಮನೆ ಖರೀದಿ ಮಾಡಿದ್ದರು. ಲೈಗರ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುವ ಕನಸು ಕಂಡಿದ್ದರು. ಹಿಂದಿ ಮತ್ತು ತೆಲುಗು ಎರಡೂ ಭಾಷೆಯಲ್ಲಿ ತಯಾರಾಗಿದ್ದ ಲೈಗರ್‌ಗೆ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಹಿಟ್ ಆಗಲಿದೆ ಅಂದುಕೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಆದ ಬಳಿಕ ಲೆಕ್ಕಾಚಾರ ಎಲ್ಲಾ ಉಲ್ಟಪಲ್ಟವಾಗಿದೆ. ಹೀನಾಯ ಸೋತ ಬಳಿಕ ಇದೀಗ ಪುರಿ ಜಗನ್ನಾಥ್ ಮುಂಬೈ ತೊರೆಯುವ ನಿರ್ಧಾರ ಮಾಡಿದ್ದಾರೆ. ಪುರಿ ಜನ್ನಾಥ್ ಮುಂಬೈನಲ್ಲಿ 4ಬಿಎಚ್‌ಕೆ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದರು. ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದರು ಎನ್ನಲಾಗಿದೆ. ತೀರ ದುಬಾರಿಯಾದ ಕಾರಣ ಮನೆ ಖಾಲಿ ಮಾಡುವ ನಿರ್ಧಾರ ಮಾಡಿದ್ದಾರೆ. ಇದೀಗ ದುಬಾರಿ ಅಪಾರ್ಟ್ಮೆಂಟ್ ತೊರೆದು ಸೌತ್ ಕಡೆ ಪಯಣ ಬೆಳೆಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಬಾಕ್ಸಾಫಿಸ್‌ನಲ್ಲಿ ಮುಗ್ಗರಿಸಿದ ಲೈಗೆರ್; ದೇವರಕೊಂಡ-ಅನನ್ಯಾ ಪಡೆದ ಸಂಭಾವನೆ ಎಷ್ಟು?
ಅಂದಹಾಗೆ ಲೈಗರ್ ಸಿನಿಮಾ ಹೀನಾಯ ಸೋತರು ದೊಡ್ಡ ಮಟ್ಟದ ಹಣ ಕಳೆದುಕೊಂಡಿಲ್ಲ ಎನ್ನಲಾಗಿದೆ. ಆಗಲೇ ಸ್ಯಾಟಲೈಟ್ ಮತ್ತು ಡಿಜಿಟಲ್ ರೈಟ್ಸ್ ನಿಂದ ಸಿನಿಮಾಗೆ ಕಮಾಯಿ ಆಗಿದೆ. ಹಾಗಾಗಿ ದೊಡ್ಡ ಮಟ್ಟದ ಲಾಸ್ ಆಗಿಲ್ಲ ಎನ್ನಲಾಗಿದೆ. ಸದ್ಯ ಮುಂಬೈ ಮನೆ ತೊರೆದು ಹೈದರಾಬಾದ್ ಜುಬಿಲಿ ಹಿಲ್ಸ್ ನಲ್ಲಿರುವ ಕೇವ್ ನಿವಾಸಕ್ಕೆ ಪಾವಾಸ್ ಆಗಿದ್ದಾರೆ. ಮುಂದಿನ ಸಿನಿಮಾಗಳ ಕಡೆ ಗಮನ ಹರಿಸಿದ್ದು ಸದ್ಯ ಜನಗಣಮನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲೂ ಕೂಡ ವಿಜಯ್ ದೇವರಕೊಂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
200 ಕೋಟಿ ಕಮ್ಮಿ ಆಯ್ತು, ಇನ್ನು ಜಾಸ್ತಿ ಗಳಿಸುತ್ತೆ; 'ಲೈಗರ್' ಬಗ್ಗೆ ದೇವರಕೊಂಡ ಮಾಡಿದ್ದ ಹಳೆಯ ಟ್ವೀಟ್ ವೈರಲ್
ಲೈಗರ್ ಸೋಲಿನಿಂದ ಜನಗಣಮನ ಸಿನಿಮಾ ಮೇಲು ಪರಿಣಾಮ ಬೀರುವ ಸಾಧ್ಯತೆ ಇದೆ. ಲೈಗರ್ ಸೋಲಿನಿಂದ ಕಂಗಾಲಾಗಿರುವ ವಿತರಕರು ನಷ್ಟವನ್ನು ಬರಿಸುವಂತೆ ಬಿಂದೆ ಬಿದ್ದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯ ಲೈಗರ್ ಸೋಲಿನ ಹಣೆಹೊತ್ತು ಪುರಿ ಜನ್ನಾಥ್ ಜನಗಣಮನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಹೇಗೆ ಮೂಡಿಬರಲಿದೆ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ. ವಿಜಯ್ ದೇವರಕೊಂಡ ದೊಡ್ಡ ಹಿಟ್ ಗಾಗಿ ಕಾಯುತ್ತಿದ್ದಾರೆ. ಹಾಗಾಗಿ ಜನಗಣಮನ ಸಿನಿಮಾ ಮೇಲೆ ವಿಜಯ್ ನಿರೀಕ್ಷೆ ದುಪ್ಪಟ್ಟಾಗಿದೆ.