200 ಕೋಟಿ ಕಮ್ಮಿ ಆಯ್ತು, ಇನ್ನು ಜಾಸ್ತಿ ಗಳಿಸುತ್ತೆ; 'ಲೈಗರ್' ಬಗ್ಗೆ ದೇವರಕೊಂಡ ಮಾಡಿದ್ದ ಹಳೆಯ ಟ್ವೀಟ್ ವೈರಲ್
ಲೈಗರ್ ಸಿನಿಮಾ ರಿಲೀಸ್ ಬೆನ್ನಲ್ಲೇ ವಿಜಯ್ ದೇವರಕೊಂಡ ಅವರ ಹಳೆಯ ಟ್ವೀಟ್ ವೈರಲ್ ಆಗಿದೆ. 200 ಕೋಟಿ ಕಡಿಮೆ ಚಿತ್ರಮಂದಿರದಲ್ಲಿ ಜಾಸ್ತಿ ಕಲೆಕ್ಷನ್ ಮಾಡಲಿದೆ ಎಂದು ವಿಜಯ್ ದೇವರಕೊಂಡ ಹೇಳಿದ್ದರು.
ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಲೈಗರ್ ಸಿನಿಮಾ ಆಗಸ್ಟ್ 25ರಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಜಯ್ ದೇವರಕೊಂಡ ಸಿನಿಮಾ ಬಿಡುಗಡೆಯಾಗಿದೆ. ಕಳೆದ ಒಂದು ತಿಂಗಳಿಂದ ಭರ್ಜರಿ ಪ್ರಮೋಷನ್ ಮಾಡಿದ್ದ ವಿಜಯ್ ದೇವರಕೊಂಡ ಭಾರತದ ಅನೇಕ ರಾಜ್ಯಗಳಿಗೆ ಭೇಟಿ ನೀಡಿದ್ದರು. ಬಾಲಿವುಡ್ ಮತ್ತು ಸೌತ್ ಎಲ್ಲಾ ಕಡೆಯಲ್ಲೂ ಅಭಿಮಾನಿಗಳು ದೇವರಕೊಂಡ ಅವರನ್ನು ಅದ್ದೂರಿ ಸ್ವಾಗತ ಮಾಡಿದರು. ಕೊನೆಗೂ ಬಹುನಿರೀಕ್ಷೆಯ ಸಿನಿಮಾ ರಿಲೀಸ್ ಆಗಿದೆ. ಆದರೆ ಲೈಗರ್ ನಿರೀಕ್ಷೆಯ ಮಟ್ಟಮುಟ್ಟುವಲ್ಲಿ ವಿಫಲವಾಗಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕರಿಗೆ ಭಾರಿ ನಿರಾಸೆ ಮೂಡಿಸಿದೆ.
ಲೈಗರ್ ಸಿನಿಮಾ ಮೊದಲ ದಿನ 20 ರಿಂದ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರಬಹುದು ಎನ್ನಲಾಗಿದೆ. ಈ ನಡುವೆ ವಿಜಯ್ ದೇವರಕೊಂಡ ಮಾಡಿದ್ದ ಹಳೆಯ ಟ್ವೀಟ್ ವೈರಲ್ ಆಗಿದೆ. 2021 ರಲ್ಲಿ ಲೈಗರ್ ಸಿನಿಮಾ OTT ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಆಗಲಿದೆ. ಒಟಿಟಿಗೆ ಎಂಟ್ರಿ ಕೊಡಲು ದೊಡ್ಡ ಮೊತ್ತದ ಆಫರ್ ನೀಡಲಾಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ಸ್ಯಾಟಲೈಟ್ ರೈಟ್ಸ್ 200 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನುವ ಪೋಸ್ಟ್ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆ ಪೋಸ್ಟ್ ವಿಜಯ್ ದೇವರಕೊಂಡ ಅವರ ಗಮನ ಸೆಳೆದಿತ್ತು. ಈ ಮೊತ್ತ ತುಂಬಾ ಕಡಿಮೆಯಾಯಿತು ಎಂದು ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದರು. 'ಇದು ತುಂಬಾ ಕಡಿಮೆ. ಚಿತ್ರಮಂದಿರದಲ್ಲಿ ನನ್ನ ಸಿನಿಮಾ ಇನ್ನು ಜಾಸ್ತಿ ಕಲೆಕ್ಷನ್ ಮಾಡಲಿದೆ' ಎಂದು ವಿಜಯ್ ಟ್ವೀಟ್ ಮಾಡಿದ್ದರು. ಒಂದು ವರ್ಷದ ಹಿಂದೆ ವಿಜಯ್ ಮಾಡಿದ್ದ ಟ್ವೀಟ್ ಈಗ ವೈರಲ್ ಆಗಿದೆ. ಅಭಿಮಾನಿಗಳು ಈ ಪೋಸ್ಟ್ ಶೇರ್ ಮಾಡಿ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ; ಇಲ್ಲಿವೆ ಫೋಟೋಗಳು
ವಿಜಯ್ ದೇವರಕೊಂಡ ಅರನ್ನು ಟ್ರೋಲ್ ಮಾಡಲಾಗುತ್ತಿದೆ. ಈ ವಿಶ್ವಾಸದ ಅರ್ಧದಷ್ಟಾದರೂ ಕಲೆಕ್ಷನ್ ಮಾಡಬೇಕು ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಇದರಲ್ಲಿ ಸ್ವಲ್ಪ ಲಾಭವನ್ನು ವಿತರಿಕರಿಗೆ ಕೊಡಿ, ಅವರಿಗೂ ಲಾಸ್ ಆಗಿರುತ್ತದೆ ಎಂದು ಹೇಳುತ್ತಿದ್ದಾರೆ.
ವಿಜಯ್ ದೇವರಕೊಂಡ ಮನೆಯಲ್ಲಿ ಅನನ್ಯಾ ಪಾಂಡೆ; ವಿಶೇಷ ಪೂಜೆಯಲ್ಲಿ ಲೈಗರ್ ನಟಿ ಭಾಗಿ
ಲೈಗರ್ ಸಿನಿಮಾ ಬಗ್ಗೆ
ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ಮಿಂಚಿದ್ದಾರೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುರಿ ಜಗನ್ನಾಥ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ ಮತ್ತು ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಿದೆ.