Asianet Suvarna News

ಸರ್ಕಾರು ವಾರಿ ಪಾಟು' ಚಿತ್ರದ ಬಾಲಿವುಡ್‌ ನಟಿ ಎಂಟ್ರಿ; ಮಹೇಶ್ ಬಾಬು ಏನಂತ್ತಾರೆ?

ಮಹೇಶ್ ಬಾಬು ಚಿತ್ರಕ್ಕೆ ಎಂಟ್ರಿಕೊಟ್ಟ ನಟಿ ವಿದ್ಯಾ ಬಾಲನ್. ತಂಗಿ ಪಾತ್ರದಲ್ಲಿ ಕಾಣಿಸಿಕೊಂಡರೆ ನಿಮಗೆ ಓಕೆ ನಾ?
 

vidya balan to play key role in Mahesh babu sarkaru vaari paata film vcs
Author
Bangalore, First Published Sep 20, 2020, 11:53 AM IST
  • Facebook
  • Twitter
  • Whatsapp

ಇತ್ತೀಚಿಗೆ ಶಕುಂತಲಾ ದೇವಿ ಬಯೋಪಿಕ್‌ನಲ್ಲಿ ಅಭಿನಯಿಸಿದ ವಿದ್ಯಾ ಬಾಲನ್‌ರ ಮುಂದಿನ ಚಿತ್ರ ಯಾವುದು ಎಂದು ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಬಿಗ್ ಸರ್ಪ್ರೈಸ್. ಕೆಲ ಮೂಲಕಗಳ ಪ್ರಕಾರ ಇದು ಕನ್ಫರ್ಮ್‌ ನ್ಯೂಸ್‌ ಎಂದೂ ಹೇಳಬಹುದು.

ತನ್ನ ಮೊದಲ ಸಿನಿಮಾ ಸೆಟ್‌ನ ಫೋಟೋ ಶೇರ್ ಮಾಡಿದ ನಟಿ ವಿದ್ಯಾ ಬಾಲನ್..!

ಇದೇ ಮೊದಲ ಬಾರಿಗೆ ಮಹೇಶ್ ಬಾಬು ಹಾಗೂ ವಿದ್ಯಾ ಬಾಲನ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು. ಇಬ್ಬರು ರೋಮ್ಯಾನ್ಸ್ ಮಾಡಲಿದ್ದಾರಾ? ಅಥವಾ ಖಡಕ್ ಅಧಿಕಾರಿಗಳ ಪಾತ್ರವೇ ಎಂದು ಗೊಂದಲದಲ್ಲಿದ ಫ್ಯಾನ್ಸ್‌ ಉತ್ತರ ಸಿಕ್ಕಿದೆ. 

ಸಹೋದರಿ ವಿದ್ಯಾ:

ಹೌದು! ವಿದ್ಯಾ ಬಾಲನ್ ಚಿತ್ರದಲ್ಲಿ ಮಹೇಶ್‌ ಬಾಬುಗೆ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಮೊದಲ ಬಾರಿ ಟಾಲಿವುಡ್‌ ಸ್ಟಾರ್‌ ನಟನಿಗೆ ವಿದ್ಯಾ ಸಹೋದರಿಯಾಗಿ ಕಾಣಿಸಿಕೊಳ್ಳುತ್ತಿದ್ದು ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಾಪ್‌ ನಟಿಯಾಗಿ ಸಹೋದರಿಯಾಗಿರುವುದು ನಿಮಗೆ ಓಕೆ ನಾ? ಎಂದು ಪ್ರಶ್ನಿಸಿದ್ದಾರೆ. ಈ ವಿಚಾರದ ಬಗ್ಗೆ ವಿದ್ಯಾ ಪ್ರತಿಕ್ರಿಯೆ ನೀಡಿಲ್ಲ.

ಮಹೇಶ್ ಬಾಬು ಪತ್ನಿ ನಮ್ರತಾ‌ಗೆ 'ಮೀನ್‌' ಎಂದ ಮಲೈಕಾ!

ಇನ್ನು ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ  ಕೀರ್ತಿ ಸುರೇಶ್‌ ನಾಯಕಿಯಾಗಿ ಮಿಂಚಲಿದ್ದಾರೆ. ವಿಲನ್ ಪಾತ್ರವನ್ನು ಕನ್ನಡ ನಟ ಕಿಚ್ಚ ಸುದೀಪ್‌ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು ಆದರೆ ಇನ್ನಿತರ ಚಿತ್ರಗಳ ಜೊತೆ ದಿನಾಂಕ ಕ್ಲಾಶ್ ಆಗುವ ಕಾರಣ ಅನಿಲ್ ಕಪೂರ್ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಕೊರೋನಾ ಇದ್ದ ಕಾರಣ ಸಿನಿಮಾ ಕಥೆ ಹಾಗೂ ಪಾತ್ರ ಆಯ್ಕೆಯಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ದಸರಾರ ಹಬ್ಬ ಪ್ರಯುಕ್ತ ಚಿತ್ರೀಕರಣ ಪ್ರಾರಂಭಿಸುತ್ತಿದ್ದಾರೆ.

"

Follow Us:
Download App:
  • android
  • ios