Asianet Suvarna News Asianet Suvarna News

ಹಾರ್ಮೋನ್ ಬದಲಾವಣೆ, PCODಯಿಂದ ಬಳಲುತ್ತಿರುವ ನಟಿ ವಿದ್ಯಾ ಬಾಲನ್; ತೂಕ ಹೆಚ್ಚಾಗಿದೆ ಎಂದು ನೊಂದುಕೊಂಡ ನಟಿ!

ಇದ್ದಕ್ಕಿದ್ದಂತೆ ತೂಕ ಹೆಚ್ಚಿಸಿಕೊಂಡು ಇಳಿಸಿಕೊಂಡ ವಿದ್ಯಾ ಬಾಲನ್. ಹಾರ್ನೋನ್‌ ಬದಲಾವಣೆಗಳಿ ಮೊದಲ ಕಾರಣ ಮಾನಸಿನ ನೆಮ್ಮದಿ ಎಂದು ಹೇಳಿದ ನಟಿ....

Vidya Balan talks about Hormonal changes and pcod effect on her weight gain vcs
Author
First Published Jul 11, 2023, 3:57 PM IST | Last Updated Jul 11, 2023, 4:32 PM IST

ಬಾಲಿವುಡ್‌ ಸ್ಟಾರ್ ನಟಿ, ಹ್ಯಾಟ್ರಿಕ್ ಅವಾರ್ಡ್‌ ವಿನ್ನರ್ ವಿದ್ಯಾ ಬಾಲನ್ ನಟನೆಯಲ್ಲಿ ಸೈ ಎನಿಸಿಕೊಂಡರೂ ಆಗಾಗ ನಿಂದನೆ ಒಳಗಾಗುತ್ತಾರೆ. ಎಷ್ಟೇ ಬ್ಯೂಟಿಫುಲ್ ಆಗಿದ್ದರೂ ದಪ್ಪ ಡುಮ್ಮಿ ಅಂಟಿ ಅನ್ನೋ ಪದಗಳನ್ನು ಆಗಾಗ ಕೇಳುತ್ತಿರಬೇಕು ಆದರೆ ಕೆಲವರಿಗೆ ಮಾತ್ರ ಗೊತ್ತು ಇದು ಹೆಣ್ಣು ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಎಷ್ಟಿರುತ್ತದೆ ಎಂದು. ಹಾರ್ಮೋನ್ ಬದಲಾವಣೆ ಮತ್ತು ಪಿಸಿಒಡಿ ಬಗ್ಗೆ ವಿದ್ಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

'ನನಗೆ ಹಲವು ವರ್ಷಗಳಿಂದ ಹಾಮೂನ್‌ ಸಮಸ್ಯೆಗಳಿದೆ ಅದರಲ್ಲಿ PCOD ಕೂಡ ಒಂದು. ಕಳೆದ 12 ವರ್ಷಗಳಿಂದ ಹೀಲರ್‌ಗಳ ಜೊತೆ ಕೆಲಸ ಮಾಡುತ್ತಿರುವೆ ಆದರೂ ಯಾವ ನೇರ ಉತ್ತರವಿಲ್ಲ. ಪಿಸಿಒಡಿ,ಪಿಸಿಒಎಸ್‌ ಅಥವಾ ಹಾಮೋನಲ್ ಸಮಸ್ಯೆ ಬರುವುದು ಫೆಮಿನೆನ್‌ ಡೀಪ್‌ ರಿಜೆಕ್ಷನ್‌ನಿಂದ. ನನಗೆ ಸದಾ ಹುಡುಗನಾಗಿ ಹುಟ್ಟಬೇಕು ಅನಿಸುತ್ತಿತ್ತು ನನ್ನ ತಾಯಿಗೆ ಗಂಡು ಮಗು ಬೇಕಿತ್ತು ಎಂದು ಹೇಳುತ್ತಿದ್ದರು ಈ ಕಾರಣ ಮನಸ್ಸಿನಲ್ಲಿ ನಾನು ಹುಡುಗರಷ್ಟು ಸ್ಟ್ರಾಂಗ್ ಅನಿಸುತ್ತಿತ್ತು. ಈ ಹಾರ್ಮೂನ್ ಬದಲಾವಣೆ ಆಗುವುದು ನಮ್ಮ ಮನಸ್ಸಿನಲ್ಲಿ ಆಗುವ ಬದಲಾವಣೆಗಳಿಂದ. ಸದಾ ಹುಡುಗರಿಗೆ ಕಾಂಪಿಟೇಷನ್‌ ಕೊಟ್ಟ ಹುಡುಗಿ ನಾನಾಗಿದ್ದ ಕಾರಣ ನನ್ನಲ್ಲಿದ್ದ ಹೆಣ್ಣುತನವನ್ನು ಎಂಜಾಯ್ ಮಾಡಲಿಲ್ಲ ಹೀಗಾಗಿ ಹಾರ್ಮೂನ್ ಬದಲಾಗಲು ಶುರುವಾಗಿತ್ತು. ಒಂದೆರಡು ಸಲ ಅಲ್ಲ ನನಗೆ ಹಾಮೋನ್‌ ಬದಲಾವಣೆ ಹಿಸ್ಟರ್ ಇದೆ ಹೀಗಾಗಿ ತೂಕ ಇಳಿಸಿಕೊಳ್ಳುವುದು ಸುಲಭದ ಮಾತಲ್ಲ. ನನಗೆ ವರ್ಕೌಟ್ ಮಾಡುವುದು ತುಂಬಾನೇ ಇಷ್ಟ ಎಂದು ಹೇಳಿದಾಗ ಯಾರೂ ನಂಬುವುದಿಲ್ಲ ದಿನ ವರ್ಕೌಟ್ ಮಾಡುತ್ತಿದ್ದರೂ ನೀವು ವರ್ಕೌಟ್ ಮಾಡುತ್ತಿಲ್ಲ ಅದಿಕ್ಕೆ ತೂಕ ಇಳಿದಿಲ್ಲ ಎಂದು ಗೇಲಿ ಮಾಡುತ್ತಿದ್ದರು. ಈಗ ಜನರು ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಆದರೆ ಆಗ ಜನರು ಜಡ್ಜ್‌ ಮಾಡಿದಾಗ ಮನಸ್ಸಿನ ಮೇಲೆ ಪರಿಣಾಮ ಬೀರಿ ಹಾರ್ಮೊನ್ ಬದಲಾಗಿ ಪಿಸಿಒಡಿ ಆಗುತ್ತದೆ. ನಾವು ನಮ್ಮ ದೇಹ ಮತ್ತು ಅದರ ಆರೋಗ್ಯ ಹೇಗೆ ನೋಡುತ್ತೀವಿ ಮತ್ತು ಜನರು ನಮ್ಮ ದೇಹ ನೋಡು ರೀತಿಯಲ್ಲಿ ತುಂಬಾ ಬದಲಾವಣೆಗಳಿದೆ' ಎಂದು ದಿ ರಣವೀರ್ ಶೋನಲ್ಲಿ ಮಾತನಾಡಿದ್ದಾರೆ. 

ಪ್ರತಿ ತಿಂಗಳು ನನ್ನ ಹೊಟ್ಟೆ ಹುಡುಕ್ಬೇಡಿ; ಪ್ರೆಗ್ನೆಂಟ್ ಎಂದವರ ವಿರುದ್ಧ ವಿದ್ಯಾ ಬಾಲನ್ ಕಿಡಿ

'ಡರ್ಟಿ ಪಿಕ್ಚರ್ ಸಿನಿಮಾ ಮತ್ತು ಕಹಾನಿ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ 5 ಹಿಟ್ ಸಿನಿಮಾಗಳನ್ನು ನೀಡಿದೆ ನನಗೆ ಫಿಮೇಲ್ ಹೀರೋ- ಖಾನ್‌ ಎಂದು ಕಿರಿಟ ಕೊಟ್ಟರು. ಇದಾದ ಮೇಲೆ ಗನ್‌ಚಕ್ಕರ್ ಅನ್ನೋ ಸಿನಿಮಾ ಮಾಡಿದೆ ಚೆನ್ನಾಗಿ ಓಡಲಿಲ್ಲ. 5 ಸೂಪರ್ ಹಿಟ್ ಸಿನಿಮಾಗಳ ನಂತರ ನನ್ನ ಮೊದಲ ಫ್ಲಾಟ್‌ ಇದು. ಡರ್ಟಿ ಪಿಕ್ಚರ್ ಸಿನಿಮಾ ನಂತರ ನನ್ನ ದೇಹ ತೂಕ ಹೆಚ್ಚಾಯ್ತು ಸಿನಿಮಾ ಫ್ಲಾಪ್ ಆಗಲು ಕಾರಣ ನನ್ನ ತೂಕ ಅಂದುಕೊಂಡೆ. ಇದಕ್ಕೆ ಯಾವ ಲಾಜಿಕ್‌ ಕೂಡ ಇಲ್ಲ ಆದರೆ ನನ್ನ ಮನಸ್ಸಿನಲ್ಲಿ ಈ ರೀತಿ ತುಂಬಿಕೊಂಡಿತ್ತು. ಡರ್ಟಿ ಪಿಕ್ಚರ್‌ ಸಿನಿಮಾ ವೇಳೆ ನಾನು ನಾನಾಗಿದ್ದೆ ಅಗ ನನ್ನ ಪತಿ ಭೇಟಿ ಮಾಡಿದ ನನ್ನ ಜೀವನ ಚೆನ್ನಾಗಿತ್ತು ಆದರೆ ಸಿನಿಮಾ ಸೋತ ನಂತರ ನನ್ನ ದೇಹವನ್ನು ದೂರುತ್ತಿದ್ದೆ' ಎಂದು ವಿದ್ಯಾ ಹೇಳಿದ್ದಾರೆ. 

ಹೋಟೆಲ್​ ಎದುರು ಭಿಕ್ಷೆ ಬೇಡಿದ್ದ ದಿನ ನೆನೆದ ವಿದ್ಯಾ ಬಾಲನ್​!

'ನಾನು ಸದಾ ಪಾಸಿಟಿವ್ ಆಗಿರುವ ವ್ಯಕ್ತಿ ಆದರೆ ಕಳೆದ 10 ವರ್ಷದಲ್ಲಿ ಆದ ಮಾನಸಿಕ ಯೋಚನೆಗಳಿಂದ ದೇಹದಲ್ಲಿ ಏರುಪೇರು ಖಂಡಿತ್ತು. ನಾನು ಪಬ್ಲಿಕ್ ಫಿಗರ್ ಆಗಿ ಈಗಲೂ ಒಂದೊಂದು ದಿನ ಹೊರ ಹೋಗಲು ಮನಸ್ಸು ಬರುವುದಿಲ್ಲ. ಜನರು ಕಾಮೆಂಟ್ ಮಾಡಿದಾಗ ನನ್ನ ದೇಹದ ಬಗ್ಗೆ ಕಾನ್ಫಿಡೆಂಟ್ ಆಗಿರುವೆ ಎಂದು ತೋರಿಸಿಕೊಳ್ಳುತ್ತಿದ್ದೆ' ಎಂದಿದ್ದಾರೆ ವಿದ್ಯಾ. 

Latest Videos
Follow Us:
Download App:
  • android
  • ios