ನಟಿ ವಿದ್ಯಾ ಬಾಲನ್​ ಅವರು ಒಮ್ಮೆ ತಾವು ಫೈವ್​ಸ್ಟಾರ್​ ಹೋಟೆಲ್​ ಎದುರು ಭಿಕ್ಷೆ ಬೇಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 

ಇತ್ತೀಚಿನವರೆಗೂ ಭಾರಿ ಸಂಪ್ರದಾಯಸ್ಥ ನಟಿ ಎನಿಸಿಕೊಂಡಿದ್ದ ನಟಿ ವಿದ್ಯಾ ಬಾಲನ್ (Vidya Balan) ಅವರು, ದಿ ಡರ್ಟಿ ಪಿಕ್ಚರ್​ನಲ್ಲಿ ಎಲ್ಲರ ಹುಬ್ಬೇರಿಸುವ ರೀತಿಯಲ್ಲಿ ಬೋಲ್ಡ್​ ಆಗಿ ನಟಿಸಿದವರು. ಕುತೂಹಲದ ಸಂಗತಿ ಎಂದರೆ ಇದೇ ಚಿತ್ರ ನಟಿಯನ್ನು ಇನ್ನೊಂದು ಹೆಜ್ಜೆ ಮೇಲಕ್ಕೆ ಏರಿಸಿತ್ತು. ಇದಾದ ಬಳಿಕ ವಿದ್ಯಾ ಬಾಲನ್ ಅರೆಬೆತ್ತಲೆ ಫೋಟೋಶೂಟ್​ ಮಾಡಿಸಿಕೊಂಡು ತಲ್ಲಣ ಸೃಷ್ಟಿಸಿದ್ದರು. ಇದು ಇಂಟರ್​ನೆಟ್​ನಲ್ಲಿ ಸಾಕಷ್ಟು ವೈರಲ್ ಆಗಿತ್ತು. ನ್ಯೂಸ್ ಪೇಪರ್ ನಿಂದ ಖಾಸಗಿ ಅಂಗ ಮುಚ್ಚಿಕೊಂಡು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು ನಟಿ. ಸದಾ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಿದ್ದ ವಿದ್ಯಾ ಬಾಲನ್ ಅವರನ್ನು ಈ ರೀತಿ ನೋಡಿ ಫ್ಯಾನ್ಸ್​ ಬೆಚ್ಚಿಬಿದ್ದದ್ದೂ ಇದೆ. ತಾವು ಕೇವಲ ಸಂಪ್ರದಾಯಸ್ಥ ಪಾತ್ರಗಳಿಗೆ ಮಾತ್ರವಲ್ಲದೇ ಹಾಟ್​ ಆಗಿ ಕಾಣಿಸಿಕೊಳ್ಳುವಲ್ಲಿಯೂ ಸಿದ್ಧರು ಎಂದು ಸಾಬೀತು ಮಾಡಿರೋ ನಟಿ ವಿದ್ಯಾ ಬಾಲನ್​, ಈಗ ಸದ್ಯ ಕ್ರೈಂ ಥ್ರಿಲ್ಲರ್ ಸಿನಿಮಾ 'ನೀಯತ್' (Neeyat) ನಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ಸಂದರ್ಭದಲ್ಲಿ ಅವರು ಸಂದರ್ಶನವೊಂದನ್ನು ನೀಡಿದ್ದು, ಅದರಲ್ಲಿ ತಮ್ಮ ಹಳೆಯ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲಿ ಅವರು ತಾವು ಭಿಕ್ಷೆ ಬೇಡಿದ್ದ ಕುರಿತು ವಿವರಿಸಿದ್ದಾರೆ. ಹೌದು! ಹಿಂದೊಮ್ಮೆ ವಿದ್ಯಾ ಬಾಲನ್​ ಹೋಟೆಲ್​ ಎದುರು ಭಿಕ್ಷೆ ಬೇಡಿದ್ದರಂತೆ. ಈ ಕುರಿತು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆ ಸಂದರ್ಭಧಲ್ಲಿ ನಾನು ಇಂಡಿಯಾ ಮ್ಯೂಸಿಕ್ ಗ್ರೂಪ್ (IMG Group) ಗಾಗಿ ಕೆಲಸ ಮಾಡುತ್ತಿದ್ದೆ. ಪ್ರತಿ ವರ್ಷ ಶಾಸ್ತ್ರೀಯ ಸಂಗೀತ ಕಛೇರಿ, ಭಾರತೀಯ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಆಯೋಜಿಸುತ್ತಿದ್ದರು. ಅದೊಮ್ಮೆ 3 ದಿನಗಳ ಕಾಲ ಡೇ ಅಂಡ್ ನೈಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ನಾನು ಭಿಕ್ಷೆ ಬೇಡುವ ಸ್ಥಿತಿ ಎದುರಾಯಿತು ಎಂದಿದ್ದಾರೆ.

Viral Video: ಸಂದರ್ಶನದ ನೇರಪ್ರಸಾರದಲ್ಲಿಯೇ ಆ್ಯಂಕರ್ ಎದ್ರು ಶರ್ಟ್​ ಬಿಚ್ಚೋದಾ ಈ ನಟ?

ಅಷ್ಟಕ್ಕೂ ಆಗಿದ್ದೇನೆಂದರೆ, ವಿದ್ಯಾ ಬಾಲನ್​ ಅವರು ಸಂಘಟನಾ ಸಮಿತಿಯ ಭಾಗವಾಗಿದ್ದರು. ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸಮಿತಿಯ ಸದಸ್ಯರೆಲ್ಲಾ ಕಾರ್ಯಕ್ರಮವನ್ನು ಆಯೋಜಿಸಲು ಸಹಾಯ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆ ದಿನ ಕಾರ್ಯಕ್ರಮ ಮುಗಿದ ಬಳಿಕ ನಾರಿಮನ್ ಪಾಯಿಂಟ್​ ಬಳಿ ಇರುವ ಹೋಟೆಲ್​ ಎದುರು ವಿದ್ಯಾ ಬಾಲನ್​ ಭಿಕ್ಷೆ ಬೇಡಿದ್ದರಂತೆ. ಅಷ್ಟಕ್ಕೂ ಆಗಿದ್ದೇನೆಂದರೆ, ಇದು ವಿದ್ಯಾ ಬಾಲನ್​ ಅವರ ಸ್ನೇಹಿತೆಯೊಬ್ಬರು ಚಾಲೆಂಜ್​ ಹಾಕಿದ್ದದರಂತೆ. ಈ ಕುರಿತು ನಟಿ ಹೇಳಿದ್ದೇನೆಂದರೆ, ಆ ಸಂದರ್ಭದಲ್ಲಿ ಚಾಲೆಂಜ್​ ಮಾಡುವುದು ನಮ್ಮ ಸ್ನೇಹಿತ ವರ್ಗಕ್ಕೆ ಸಕತ್​ ಖುಷಿ ತರುತ್ತಿತ್ತು. ಅದರಂತೆಯೇ ನನ್ನ ಸ್ನೇಹಿತೆ ಒಬ್ಬಳು ಚಾಲೆಂಜ್ ಹಾಕಿದ್ದಳು. ಆ ಚಾಲೆಂಜ್​ ಪ್ರಕಾರ, ಮಧ್ಯರಾತ್ರಿ ಓಬೆರಾಯ್-ದಿ ಪಾಮ್ಸ್ ಕಾಫಿ ಶಾಪ್​ನ ಮುಂದೆ ಭಿಕ್ಷೆ ಬೇಡಬೇಕಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿ ಭಿಕ್ಷೆ ಬೇಡಲು ಹೋಗಿದ್ದೆ ಎಂದು ನಟಿ ಹೇಳಿದ್ದಾರೆ.

ಮಧ್ಯರಾತ್ರಿ ಕಾಫಿ ಶಾಪ್ (Coffee Shop) ಬಾಗಿಲು ತಟ್ಟಲು ಶುರು ಮಾಡಿದೆ. ಅಲ್ಲಿದ್ದವರಿಗೆ ಯಾರಿಗೂ ನಾನು ನಟಿ ಎಂದು ತಿಳಿಯಲಿಲ್ಲ. ಬಾಗಿಲು ತಟ್ಟಿ ತಟ್ಟಿ ಕಿರಿಕಿರಿ ಮಾಡಿದೆ. ಅಲ್ಲಿದ್ದವರಿಗೆ ಕಿರಿಕಿರಿಯಾಗತೊಡಗಿತು. ನನಗೆ ಮುಜುಗರ ಆಗುತ್ತಲೇ ಇದ್ದರೂ ಚಾಲೆಂಜ್​ ಗೆಲ್ಲಬೇಕಿತ್ತು. ನಂತರ ನಾನು ಒಂದೇ ಸಮನೆ ಬಾಗಿಲು ತಟ್ಟುತ್ತ, ದಯವಿಟ್ಟು, ನನಗೆ ಹಸಿವಾಗಿದೆ. ನಿನ್ನೆಯಿಂದ ನಾನು ಏನನ್ನೂ ತಿಂದಿಲ್ಲ. ತಿನ್ನಲು ಏನಾದರೂ ಕೊಡು ಎಂದು ಕೇಳುತ್ತಲೇ ಇದ್ದೆ ಎಂದು ವಿದ್ಯಾ ಬಾಲನ್​ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಮತಾಂತರದ ವಿರುದ್ಧ ಹೋರಾಡಿದ ಅದಾ ಶರ್ಮಾ ಕನ್ವರ್ಟ್​? ವೈರಲ್ ಫೋಟೋ ಸತ್ಯಾಸತ್ಯತೆ ಏನು?​

ಇವರ ನಟನೆ ನೋಡಿ ಎಲ್ಲರೂ ಬೆರಗಾದರಂತೆ. ಮುಜುಗರವಾದರೂ ತಾವು ಚಾಲೆಂಜ್​ ಗೆದ್ದ ಖುಷಿಯಲ್ಲಿದ್ದರು ನಟಿ. ಇನ್ನು ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ವಿದ್ಯಾ ನೀಯತ್ ಚಿತ್ರದಲ್ಲಿ ಬಿಜಿ ಇದ್ದಾರೆ. ಅದನ್ನು ಅನು ಮೆನನ್ ನಿರ್ದೇಶಿಸಿದ್ದಾರೆ. ವಿದ್ಯಾ ಜೊತೆಗೆ ರಾಮ್ ಕಪೂರ್, ರಾಹುಲ್ ಬೋಸ್, ನೀರಜ್ ಕಬಿ, ಶಹಾನಾ ಗೋಸ್ವಾಮಿ, ಅಮೃತಾ ಪುರಿ (Amuta Puri), ದೀಪನ್ನಿತಾ ಶರ್ಮಾ ಮತ್ತು ನಿಕ್ಕಿ ವಾಲಿಯಾ ಕೂಡ ನಟಿಸಿದ್ದಾರೆ.