ಕಾಸ್ಟಿಂಗ್ ಕೌಚ್, ಲೈಂಗಿಕ ದೌರ್ಜನ್ಯದ ಅನುಭವ ಹೇಳುವ ನಟಿಯರಿಗೆ ವಿದ್ಯಾ ಬಾಲನ್ ತಿರುಗೇಟು! ಭಾರಿ ಚರ್ಚೆ
ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್, ಲೈಂಗಿಕ ದೌರ್ಜನ್ಯದ ಅನುಭವ ಹೇಳುವ ನಟಿಯರಿಗೆ ವಿದ್ಯಾ ಬಾಲನ್ ತಿರುಗೇಟು ನೀಡಿದ್ದೇನು?
ಕಾಸ್ಟಿಂಗ್ ಕೌಚ್ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್ ಕೌಚ್ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಬೇಕು, ಟಾಪ್ ಸ್ಥಾನ ಪಡೆಯಬೇಕು, ಇಂಡಸ್ಟ್ರಿಯಲ್ಲಿ ಬೇರೂರಬೇಕು ಎಂದರೆ ಕೆಲವು ನಟರು, ನಿರ್ದೇಶಕರು, ನಿರ್ಮಾಪಕರು... ಹೀಗೆ ಎಲ್ಲರ ಜೊತೆ ಮಲಗುವುದು ಅನಿವಾರ್ಯ ಎನ್ನುವ ಅರ್ಥದಲ್ಲಿಯೇ ಬಹುತೇಕ ಎಲ್ಲಾ ನಟಿಯರೂ ಹೇಳಿಕೊಂಡಿದ್ದಾರೆ. ಇದೀಗ ಮಾಲಿವುಡ್ನಲ್ಲಿಯೂ ಕಾಸ್ಟಿಂಗ್ ಕೌಚ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಲವಾರು ನಟಿಯರು ತಮ್ಮ ಅನುಭವವನ್ನು ಹೇಮಾ ಸಮಿತಿ ಮುಂದೆ ತೆರೆದಿಟ್ಟಿದ್ದಾರೆ.
ಇದರ ನಡುವೆಯೇ, ನಟಿ ವಿದ್ಯಾ ಬಾಲನ್ ಸಿನಿಮಾದಲ್ಲಿ ಲೈಂಗಿಕ ದೌರ್ಜನ್ಯ, ಕಾಸ್ಟಿಂಗ್ ಕೌಚ್ ಎನ್ನುವವರಿಗೆ ತಿರುಗೇಟು ನೀಡುವಂಥ ಹೇಳಿಕೆ ನೀಡಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅನುಪಮ್ ಖೇರ್ ಅವರ ಷೋನಲ್ಲಿ ಅತಿಥಿಯಾಗಿ ಆಗಮಿಸಿದ್ದ ವಿದ್ಯಾ ಬಾಲನ್ ಅವರು ಕಾಸ್ಟಿಂಗ್ ಕೌಚ್ ಕುರಿತು ಕೇಳಿದ ಪ್ರಶ್ನೆಗೆ ಕುತೂಹಲದ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೊದಲಿಗೆ ಅನುಪಮ್ ಖೇರ್ ಅವರು ತಮ್ಮ ಇಷ್ಟು ದಶಕಗಳ ಸಿನಿಮಾ ಜೀವನದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವ ವಿಷಯವನ್ನೇ ಕೇಳಿರಲಿಲ್ಲ ಎಂದಾಗ ವಿದ್ಯಾ ಬಾಲನ್, ಇದು ನಿಜ ಎನ್ನುವ ಮೂಲಕ ಈ ರೀತಿ ಆರೋಪಿಸುವ ನಟಿಯರಿಗೆ ಟಾಂಗ್ ಕೊಟ್ಟಿದ್ದಾರೆ. ಜನರು ಹೇಗೆ ನಿಮ್ಮನ್ನು ಟ್ರೀಟ್ ಮಾಡಬೇಕು ಎಂದು ಬಯಸುತ್ತಿರೋ, ಅವರೂ ಮಾಡೋದು ಹಾಗೆಯೇ... ಎನ್ನುವ ಮೂಲಕ ನೀವು ಸರಿಯಿದ್ರೆ ಯಾರೂ ನಿಮ್ಮನ್ನು ಆ ರೀತಿ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ನನ್ನ ಸೈಜ್ 41, ಇಲ್ಲೇ ಕೊಡ್ಲಾ ಅಥವಾ ಅಲ್ಲಿಗೆ ಬರ್ತಿಯಾ? ನಿರ್ಮಾಪಕನಿಗೆ ಹೀಗೆ ಹೇಳಿದ್ರಂತೆ ಖುಷ್ಬೂ!
ಈ ಹಿಂದೆ ಕೂಡ ಕೆಲವರು ಇದೇ ಮಾತನ್ನು ಹೇಳಿದ್ದರು. ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಯಾವ ಮಟ್ಟಿಗಾದರೂ ಹೋಗಲು ಕೆಲವರು ಸಿದ್ಧರಿರುತ್ತಾರೆ. ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ ಉಳಿದವರು. ಇದು ಕೇವಲ ಸಿನಿಮಾಗಷ್ಟೇ ಅಲ್ಲದೇ, ಎಲ್ಲಾ ಕ್ಷೇತ್ರಗಳಿಗೂ ಅನ್ವಯ. ಸೂಕ್ತ ಅರ್ಹತೆ ಇಲ್ಲದೇ ಬಡ್ತಿ ಪಡೆದುಕೊಳ್ಳಲು, ಜೀವನದಲ್ಲಿ ಸುಲಭದಲ್ಲಿ ಮೇಲೆ ಹೋಗಲು, ಶ್ರಮ ಪಡದೇ ಹೆಸರು ಮಾಡಲು ಇಂಥ ಹೆಣ್ಣುಮಕ್ಕಳು ಯಾವುದೇ ಕೆಲಸಕ್ಕೂ ಸೈ ಎಂದು ಮುಂದೆ ಬಂದಾಗ, ಅದನ್ನು ದುರುಪಯೋಗ ಪಡಿಸಿಕೊಳ್ಳುವ ವರ್ಗವೂ ದೊಡ್ಡದೇ ಇರುತ್ತದೆ ಎಂದಿದ್ದಾರೆ. ಇದೀಗ ಅದೇ ಅರ್ಥದಲ್ಲಿ ವಿದ್ಯಾ ಬಾಲನ್ ಕೂಡ ಮಾತನಾಡಿದ್ದಾರೆ. ನಿಮ್ಮ ವರ್ತನೆ ಹೇಗೆ ಇರುತ್ತದೆಯೋ, ಅದೇ ರೀತಿ ಅವರೂ ಟ್ರೀಟ್ ಮಾಡುತ್ತಾರೆ ಎಂದಿದ್ದಾರೆ! ಎಲ್ಲಾ ಕಡೆಗಳಲ್ಲಿಯೂ ಕಾಸ್ಟಿಂಗ್ ಕೌಚ್ ಇರುವುದು ಸಾಮಾನ್ಯ. ನಾವು ಯಾವ ರೀತಿ ನಡ್ಕೋತೀವಿ ಅದರ ಮೇಲೆ ನಮ್ಮನ್ನ ಇಂಡಸ್ಟ್ರಿ ಟ್ರೀಟ್ ಮಾಡುತ್ತದೆ. ಅವಕಾಶ ಸಿಗುತ್ತದೆ ಎಂದು ನಾವು ಮಲಗಿದರೆ ಏನೂ ಮಾಡಲು ಆಗುವುದಿಲ್ಲ ಎನ್ನುತ್ತಲೇ ಇದನ್ನೇ ದೊಡ್ಡದಾಗಿ ಬಿಂಬಿಸಿ ಚಿತ್ರರಂಗದ ಹೆಸರನ್ನು ಹಾಳು ಮಾಡುವುದು ಸರಿಯಲ್ಲ ಎಂದು ಈ ಹಿಂದೆ ನಟಿ ಲಕ್ಷ್ಮೀ ರೈ ಕೂಡ ಹೇಳಿದ್ದರು.
ಈ ಹಿಂದೆ ವಿದ್ಯಾ ಅವರು ತಮಗಾಗಿದ್ದ ಕಹಿ ಅನುಭವವನ್ನು ಹೇಳುತ್ತಲೇ, ನಟಿಯರು ರೆಡಿ ಇಲ್ಲದಿದ್ದರೆ ಯಾರೂ ಏನೂ ಮಾಡುವುದಿಲ್ಲ ಎಂದು ಉದಾಹರಣೆ ಕೊಟ್ಟಿದ್ದರು. 'ನಾನು ಸಹಿ ಹಾಕಿದ್ದ ಸಿನಿಮಾವೊಂದರ ಚಿತ್ರೀಕರಣ ಸಲುವಾಗಿ ನಿರ್ದೇಶಕರ ಜೊತೆ ಮೀಟಿಂಗ್ ಇತ್ತು. ನಾನು ಜಾಹೀರಾತು ಚಿತ್ರೀಕರಣಕ್ಕಾಗಿ ಚೆನ್ನೈಗೆ ಹೋಗಿದ್ದೆ. ನಾನು ನಿರ್ದೇಶಕನ್ನು ಭೇಟಿಯಾದೆ. ನನ್ನ ರೂಮಿಗೆ ಹೋಗಿ ಮಾತಾಡೋಣ ಎಂದು ಹೇಳಿದರು. ನನಗೆ ಅರ್ಥವಾಗಿಲ್ಲ. ನಾನು ಒಬ್ಬಳೆ ಇದ್ದೆ ಎನ್ನುವುದು. ಆದರೆ ನಾನು ಬುದ್ಧಿವಂತಿಕೆಯಿಂದ ನಡೆದುಕೊಂಡೆ. ನಾನು ಅವರ ಕೋಣೆಗೆ ಹೋದಾಗ ಬಾಗಿಲನ್ನು ತೆರೆದಿಟ್ಟು ಒಳಗೆ ಹೋದೆ. ಅದು ಅವರಿಗೆ ಗೊತ್ತಾಯಿತು. ಇದು ಕಾಸ್ಟಿಂಗ್ ಕೌಚ್ ಅನುಭವ ಎಂದು ನಾನು ನಂಬಲ್ಲ. ಯಾಕೆಂದರೆ ಯಾವುದೇ ಪ್ರಸ್ತಾಪ ಮಾಡಿಲ್ಲ' ಎಂದಿದ್ದರು. ಅವಕಾಶಕ್ಕಾಗಿ ಮುಂದೆ ಹೋಗುವವರ ಬಗ್ಗೆ ನಾನು ಹೇಳಲ್ಲ ಎಂದೂ ಹೇಳಿದ್ದರು ನಟಿ.
ನಟ ಸಿದ್ದಿಕಿ ಮಗಳೇ ಎಂದು ರೇಪ್ ಮಾಡ್ದ, 'ವೀರ ಕನ್ನಡಿಗ' ನಟ ರಿಯಾಜ್ ಖಾನ್ ಫೋನ್ನಲ್ಲೇ... ನಟಿಯ ಕರಾಳ ಅನುಭವ...