Asianet Suvarna News Asianet Suvarna News

ನನ್ನ ಸೈಜ್​ 41, ಇಲ್ಲೇ ಕೊಡ್ಲಾ ಅಥವಾ ಅಲ್ಲಿಗೆ ಬರ್ತಿಯಾ? ನಿರ್ಮಾಪಕನಿಗೆ ಹೀಗೆ ಹೇಳಿದ್ರಂತೆ ಖುಷ್ಬೂ!

ಮಾಲಿವುಡ್​ ಇಂಡಸ್ಟ್ರಿಯಲ್ಲಿನ ಲೈಂಗಿಕ ದೌರ್ಜನ್ಯದ ಕರಾಳ ಕಥೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ನಡುವೆಯೇ ಬಹುಭಾಷಾ ನಟಿ ಖುಷ್ಬೂ ಸುಂದರನ್​ ತಮಗಾದ ಅನುಭವ ತೆರೆದಿಟ್ಟಿದ್ದಾರೆ.
 

I wear 41 do you want me to hit you here or Khushbu about casting couch experience against producer suc
Author
First Published Aug 30, 2024, 2:33 PM IST | Last Updated Aug 30, 2024, 2:33 PM IST

 80-90ರ ದಶಕದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಖುಷ್ಬೂ ಸುಂದರ್. ಕನ್ನಡಿಗರು ಇವರನ್ನು ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವುದು  ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಜೊತೆ ನಟಿಸಿದ ಸಿನಿಮಾಗಳ ಮೂಲಕ. ಈ ಜೋಡಿಯ ರಣಧೀರ, ಅಂಜದ ಗಂಡು ಮತ್ತು ಯುಗ ಪುರುಷ ಚಿತ್ರಗಳಲ್ಲಿ ರವಿಚಂದ್ರನ್-ಖುಷ್ಬೂ ಜೋಡಿ ಕೆಲಸ ಮಾಡಿತ್ತು. ರವಿಚಂದ್ರನ್ ನಿರ್ದೇಶನದ ಶಾಂತಿ ಕ್ರಾಂತಿ ಚಿತ್ರ ಸಕತ್​ ಹಿಟ್​ ಆಗಿತ್ತು. ಈಗ ಪುನಃ ಈ ಜೋಡಿ  ಥ್ರಿಲ್ಲರ್ ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ, ಈ ಸಿನಿಮಾವನ್ನು  ಗುರುರಾಜ್ ಕುಲಕರ್ಣಿ ನಿರ್ದೇಶಕ ಮಾಡಲಿದ್ದಾರೆ ಎನ್ನಲಾಗಿದೆ.  ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿಯೂ  ಖುಷ್ಬೂ ಸುಂದರ್ ಸಾಕಷ್ಟು ಹೆಸರು ಮಾಡುತ್ತಿದ್ದು ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಇದೀಗ ನಟಿ ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ಸಂಗತಿ ಎಂದರೆ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ. ಕಾಸ್ಟಿಂಗ್​ ಕೌಚ್​, ಲೈಂಗಿಕ ದೌರ್ಜನ್ಯದ ಕುರಿತು ಇದಾಗಲೇ ಹಲವು ನಟಿಯರು ಸಮಿತಿಯ ಮುಂದೆ ಮಾಡಿರುವ ಕರಾಳ ಘಟನೆಗಳು ಬೆಳಕಿಗೆ ಬರುತ್ತಿವೆ. ಇದಾಗಲೇ ಕೆಲವರು ತಲೆದಂಡ ಕೂಡ ತೆತ್ತಿದ್ದಾರೆ. ಇಂಥದ್ದೇ ಒಂದು ವಿಷಯವನ್ನು, ತಮಗಾಗಿರುವ ಭಯಾನಕ ಅನುಭವವನ್ನು ತೆರೆದಿಟ್ಟಿದ್ದಾರೆ ನಟಿ ಖುಷ್ಬೂ. 2017 ರ ನಟಿ ಮೇಲಿನ ಹಲ್ಲೆ ಪ್ರಕರಣದ ನಂತರ ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ರಚಿಸಲಾಯಿತು ಮತ್ತು ಅದರ ವರದಿಯನ್ನು ಕಳೆದ ವಾರ ಸಾರ್ವಜನಿಕಗೊಳಿಸಲಾಗಿದೆ. 235 ಪುಟಗಳ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರಿಗೆ ಕಿರುಕುಳ ಮತ್ತು ಶೋಷಣೆಯ ನಿದರ್ಶನಗಳನ್ನು ಉಲ್ಲೇಖಿಸುತ್ತದೆ. ಇದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, "ನಿಂದನೆ, ಲೈಂಗಿಕ ಅನುಕೂಲಕ್ಕಾಗಿ ನಟಿಯರನ್ನು ಬಳಸಿಕೊಳ್ಳುವುದು,  ಮಹಿಳೆಯರು ತಮ್ಮ ಹಿಡಿತವನ್ನು ಸಾಧಿಸಲು ಅಥವಾ ತಮ್ಮ ವೃತ್ತಿಜೀವನವನ್ನು ವೇಗಗೊಳಿಸಲು ರಾಜಿ ಮಾಡಿಕೊಳ್ಳಬೇಕೆಂದು ನಿರೀಕ್ಷಿಸುವುದು ಪ್ರತಿಯೊಂದು ಕ್ಷೇತ್ರದಲ್ಲೂ ಅಸ್ತಿತ್ವದಲ್ಲಿದೆ. ಮಹಿಳೆರಷ್ಟೇ ಅಲ್ಲದೇ, ಪುರುಷರೂ ಇದನ್ನು ಎದುರಿಸುತ್ತಿದ್ದಾರೆ ಎಂದು ನಟಿ ಹೇಳಿದ್ದಾರೆ.  

ನಟ ಸಿದ್ದಿಕಿ ಮಗಳೇ ಎಂದು ರೇಪ್​ ಮಾಡ್ದ, 'ವೀರ ಕನ್ನಡಿಗ' ನಟ ರಿಯಾಜ್‌ ಖಾನ್‌ ಫೋನ್​ನಲ್ಲೇ... ನಟಿಯ ಕರಾಳ ಅನುಭವ...
 

 ನನಗೂ ಈ ಅನುಭವವಾಗಿದೆ. ಇದನ್ನು ನಾನು ಮೊದಲೇ ಮಾತನಾಡಬೇಕಿತ್ತು.  ನನ್ನ ವೃತ್ತಿಜೀವನವನ್ನು ನಿರ್ಮಿಸಲು ನಾನು ರಾಜಿಯಾಗಲೇ ಇಲ್ಲ. ಆದರೆ ನಾನು ಬಿದ್ದರೆ ನನ್ನನ್ನು ಹಿಡಿದಿಡಲು ನನಗೆ ಬಲವಾದ ತೋಳುಗಳನ್ನು ಒದಗಿಸಬೇಕಾಗಿದ್ದ ವ್ಯಕ್ತಿ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.  ತಮ್ಮ 8 ನೇ ವಯಸ್ಸಿನಲ್ಲಿ ತನ್ನ ತಂದೆಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಅವರು ಹೇಳಿದ್ದಾರೆ. ಇಷ್ಟೇ ಅಲ್ಲದೇ, ನನಗೆ ಸಿನಿಮಾದಲ್ಲಿ ಯಾವುದೇ ಗಾಡ್​ ಫಾದರ್​ ಇರಲಿಲ್ಲ. ನನ್ನನ್ನು ನಿರ್ಮಾಪಕರೊಬ್ಬರು ಸಂಪರ್ಕಿಸಿದರು. ಸಿನಿಮಾದಲ್ಲಿ ಚಾನ್ಸ್​ ಕೊಡುವುದಾಗಿ ಹೇಳಿದರು. ನನ್ನ ಹಿಂದೆ ಮುಂದೆ ಯಾರೂ ಇಲ್ಲದ ಕಾರಣ, ಅವರ ಒತ್ತಡಕ್ಕೆ ಮಣಿಯುತ್ತೇನೆ ಎಂದು ಭಾವಿಸಿರಬೇಕು ಎನ್ನುವ ಮೂಲಕ ಅಂದು ನಡೆದ ಘಟನೆಯನ್ನು ನಟಿ ಹೇಳಿದ್ದಾರೆ. 

"ನಾನು ತೆಲುಗು ಚಿತ್ರದ ಶೂಟಿಂಗ್‌ನಲ್ಲಿದ್ದಾಗ ನಿರ್ಮಾಪಕರೊಬ್ಬರು ನನ್ನ ಮೇಕಪ್ ರೂಮ್‌ಗೆ ಕಾಲಿಟ್ಟರು. ಅವರ ಹಾವಭಾವದಿಂದಲೇ ಅವರು ಏನು ಬಯಸುತ್ತಿದ್ದಾರೆ ಎನ್ನುವುದು ತಿಳಿದು ಹೋಯಿತು. ತೀರಾ ಅಶ್ಲೀಲವಾಗಿ ನಡೆದುಕೊಂಡರು. ಕೂಡಲೇ ನಾನು  ನನ್ನ ಚಪ್ಪಲಿಗಳನ್ನು ತೆಗೆದು ನನ್ನ ಚಪ್ಪಲಿಯ ಸೈಜ್​ 41. ಅದನ್ನು ಇಲ್ಲಿಯೇ ಬಳಸಲಾ ಅಥವಾ ನೀವಿದ್ದಲ್ಲಿಗೆ ಬಂದು ನಾನೇ ಪ್ರಯೋಗ ಮಾಡ್ಲಾ ಎಂದು ಕೇಳಿದೆ. ಇದನ್ನು ಕೇಳುತ್ತಿದ್ದಂತೆಯೇ ಅವರು ಶಾಕ್​ನಿಂದ ಅವಮಾನವಾಗಿ ಅಲ್ಲಿಂದ ಹೋದರು ಎಂದು ನಟಿ ಹೇಳಿದ್ದಾರೆ. 

ರೂಮಿಗೆ ಬಂದು ಮೊದಲು ಬಳೆ ಮುಟ್ಟಿದ, ಆಮೇಲೆ... ನಟನ ಹೆಸರು ಬಹಿರಂಗಗೊಳಿಸಿದ ನಟಿ ಶ್ರೀಲೇಖಾ ಮಿತ್ರಾ

Latest Videos
Follow Us:
Download App:
  • android
  • ios