ಮರಿ ತಮನ್ನಾ ಭಾಟಿಯಾ! 'ಆಜ್ ಕೀ ರಾತ್' ಹಾಡಿಗೆ ನಟಿಯನ್ನು ಮೀರಿಸಿ ಕುಣಿದ ಬಾಲಕನ ವಿಡಿಯೋ ವೈರಲ್!
ತಮನ್ನಾ ಭಾಟಿಯಾರ ಸ್ತ್ರೀ-2 ಚಿತ್ರದ ಆಜ್ ಕೀ ರಾತ್... ಹಾಡಿಗೆ ಸೊಂಟ ಬಳುಕಿಸಿದ ಬಾಲಕನ ವಿಡಿಯೋ ವೈರಲ್
ಸ್ತ್ರೀ-2 ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾರ ಆಜ್ ಕೀ ರಾತ್... ಹಾಡು ಸಕತ್ ಹಿಟ್ ಆಗಿರುವುದು ಗೊತ್ತೇ ಇದೆ. ಬಹುತೇಕ ಮಂದಿ, ಅದರಲ್ಲಿಯೂ ಕಿರುತೆರೆ ಕಲಾವಿದರು ಕೂಡ ಈ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಹಲವರು ರೀಲ್ಸ್ ಮಾಡಿದ್ದಾರೆ. 'ಕಾವಲಾ' ಚಿತ್ರದ ದೊಡ್ಡ ಯಶಸ್ಸಿನ ನಂತರ, ಸ್ತ್ರೀ 2 ಪಾತ್ರ ಭಯ ಹುಟ್ಟಿಸಿತ್ತು ಎನ್ನುತ್ತಲೇ ಇದ್ದ ತಮನ್ನಾ, ಸ್ತ್ರೀ-2 ಅನ್ನೂ ಹಿಟ್ ಮಾಡಿದ್ದಾರೆ. ಇದೀಗ ಪುಟ್ಟ ಬಾಲಕನೊಬ್ಬ ಅದೇ ಹಾಡಿಗೆ ರೀಲ್ಸ್ ಮಾಡಿದ್ದಾನೆ. ನೆಟ್ಟಿಗರು ಉಫ್ ಎನ್ನುವ ರೀತಿಯಲ್ಲಿ ಈ ಬಾಲಕ ಸೊಂಟ ಕುಣಿಸಿದ್ದಾರೆ.
ಕಚೇರಿಯೊಂದರಲ್ಲಿ ಬಾಲಕ ಟೇಬಲ್ ಮೇಲೆ ನಿಂತು ಆಜ್ ಕೀ ರಾತ್ ಹಾಡಿಗೆ ಡಾನ್ಸ್ ಮಾಡುವುದನ್ನು ನೋಡಬಹುದು. ಅಲ್ಲಿದ್ದ ಕಚೇರಿ ಸಿಬ್ಬಂದಿ, ಆತನಿಗೆ ಸಪೋರ್ಟ್ ಮಾಡುತ್ತಲೇ ಹುರಿದುಂಬಿಸುತ್ತಿದ್ದಾರೆ. ಅದನ್ನು ನೋಡಿ ಬಾಲಕ ಮತ್ತಷ್ಟು ಕುಣಿದು ಕುಪ್ಪಳಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಲೇ ಬಾಲಕನ ಈ ನೃತ್ಯಕ್ಕೆ ಥಹರೇವಾರಿ ಕಮೆಂಟ್ಸ್ ಕಮೆಂಟ್ಸ್ ಸುರಿಮಳೆಯಾಗಿದೆ. ಮರಿ ತಮನ್ನಾ ಭಾಟಿಯಾ ಎಂದು ಹಲವರು ಹೇಳುತ್ತಿದ್ದಾರೆ. ಇವನ ಡಾನ್ಸ್ಗೆ ಎಲ್ಲರೂ ಮನ ಸೋತಿದ್ದಾರೆ.
ತಮನ್ನಾ ಜೊತೆ ಸಕತ್ ಮಜಾ ಬರತ್ತೆ ಎನ್ನುತ್ತಲೇ ಸಂಬಂಧದ ಗುಟ್ಟು ರಟ್ಟು ಮಾಡಿದ ವಿಜಯ್ ವರ್ಮಾ...
ಇನ್ನು ನಟಿ ತಮನ್ನಾ ಕುರಿತು ಹೇಳುವುದಾದರೆ, ನಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ವಿಜಯ್ ವರ್ಮಾ ಅವರು ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಡೇಟಿಂಗ್ ಮಾಡಿದ ಮಾತ್ರಕ್ಕೆ ನಟ ನಟಿಯರು ಅವರನ್ನೇ ಮದ್ವೆಯಾಗುತ್ತಾರೆಂದೇನೂ ಇಲ್ಲ. ಆದರೆ ಈ ಜೋಡಿ ಮಾತ್ರ ವಿವಾಹ ಬಂಧನಕ್ಕೆ ಶೀಘ್ರದಲ್ಲಿಯೇ ಒಳಗಾಗಲಿದೆ ಎನ್ನುವ ಸುದ್ದಿ ಮೊದಲಿನಿಂದಲೂ ಇದೆ. ವಿಜಯ್ ವರ್ಮಾ ಅವರಿಗೂ 38 ವರ್ಷ ವಯಸ್ಸಾಗಿದ್ದು, ಇಬ್ಬರಿಗೂ ಇದಾಗಲೇ ಮದುವೆಯ ವಯಸ್ಸು ಮೀರಿರುವ ಕಾರಣ, ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 1989ರಲ್ಲಿ ಹುಟ್ಟಿರೋ ನಟಿಗೆ ಈಗ 34 ವರ್ಷ ವಯಸ್ಸು. ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದರೂ ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ನಟಿಯ ಮನೆಯಲ್ಲಿ ಸಕತ್ ಒತ್ತಡ ಬರುತ್ತಿದೆ ಎಂದು ವರದಿಯಾಗಿದೆ. ವಯಸ್ಸಾಗುತ್ತಿರುವ ಕಾರಣ ಹಾಗೂ ಇದಾಗಲೇ ಹಲವಾರು ಬಾಲಿವುಡ್ ನಟಿಯರು ಮದುವೆ, ಮಕ್ಕಳು ಎಂದೆಲ್ಲಾ ಬಿಜಿಯಾಗಿರುವ ತಮ್ಮ ಮಗಳಿನ್ನೂ ಮದುವೆಯಾಗಿಲ್ಲ ಎನ್ನುವ ಚಿಂತೆ ತಮನ್ನಾ ಪಾಲಕರಿಗೆ ಕಾಡುತ್ತಿದೆಯಂತೆ. ಇದಕ್ಕಾಗಿಯೇ ನಟಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿದೆ.
ಕೊನೆಗೆ, ತಮನ್ನಾ ಕುರಿತು ಓಪನ್ ಆಗಿ ಮಾತನಾಡಿರುವ ವಿಜಯ್ ವರ್ಮಾ, "ನಾನು 2005 ರಲ್ಲಿ ಹೈದರಾಬಾದ್ ತೊರೆದು ಮುಂಬೈಗೆ ಬಂದಿದ್ದೆ. ಮತ್ತು ಅದೇ ವರ್ಷ ಅವಳು ಮುಂಬೈನಿಂದ ಹೈದರಾಬಾದ್‌ಗೆ ಬಂದಳು. ಅವಳು ಹೈದರಾಬಾದ್‌ನಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಂಡ ಮುಂಬೈ ಹುಡುಗಿ ಮತ್ತು ನಾನು ಹೈದರಾಬಾದ್‌ನಲ್ಲಿ ಸ್ಥಾಪಿತಗೊಂಡಿರುವ ಹುಡುಗ. ಅವಳು ನಿರರ್ಗಳವಾಗಿ ತಮಿಳು ಮತ್ತು ತೆಲುಗು ಮಾತನಾಡುತ್ತಾಳೆ, ಆದ್ದರಿಂದ ನಮ್ಮ ಸಂಬಂಧವು ತುಂಬಾ ಆಸಕ್ತಿದಾಯಕವಾಗಿದೆ ಎಂದಿದ್ದಾರೆ ವಿಜಯ್ ವರ್ಮಾ. ತಮ್ಮ ಸಂಬಂಧದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಅವರು, "ನಮ್ಮ ಸಂಬಂಧವು ಲಸ್ಟ್ ಸ್ಟೋರಿಗಳ ನಂತರ ಪ್ರಾರಂಭವಾಯಿತು, ಮೊದಲು, ನಾವು ಸಹ ನಟರಾಗಿ, ತುಂಬಾ ಚಿತ್ರಗಳಲ್ಲಿ ನಟಿಸಿದ್ದೇವೆ, ಭೇಟಿಯಾಗಿದ್ದೆವು. ಆದರೆ ಲಸ್ಟ್ ಸ್ಟೋರೀಸ್ -2 ಬಳಿಕ ಪ್ರೀತಿ ಗಾಢವಾಯಿತು. ತಮನ್ನಾ ಜೊತೆ ನನಗೆ ತುಂಬಾ ಮಜಾ ಬರುತ್ತದೆ. ಆಕೆಯ ಜೊತೆ ಇರುವುದು ರೋಚಕ ಎಂದಿದ್ದಾರೆ ನಟ.
ಸೆಕ್ಸ್ ಸೀನ್ಗಳಿಗೆ ಮೂಡ್ ಕ್ರಿಯೇಟ್ ಮಾಡ್ತಾರೆ, ಭಾವನೆ ತಡೆಯಲು ಆಗಲ್ಲ.. ಆಗ... ವಿಜಯ್ ವರ್ಮಾ ಓಪನ್ ಮಾತು