Asianet Suvarna News Asianet Suvarna News
breaking news image

ತಮನ್ನಾ ಜೊತೆ ಸಕತ್​ ಮಜಾ ಬರತ್ತೆ ಎನ್ನುತ್ತಲೇ ಸಂಬಂಧದ ಗುಟ್ಟು ರಟ್ಟು ಮಾಡಿದ ವಿಜಯ್​ ವರ್ಮಾ...

ತಮನ್ನಾ ಜೊತೆ ಸಕತ್​ ಮಜಾ ಬರತ್ತೆ ಎನ್ನುತ್ತಲೇ ಸಂಬಂಧದ ಗುಟ್ಟು ರಟ್ಟು ಮಾಡಿದ ವಿಜಯ್​ ವರ್ಮಾ ಹೇಳಿದ್ದೇನು?
 

vijay varma spoke openly about his relationship with tamannaah said i enjoy being with her suc
Author
First Published Jul 11, 2024, 4:22 PM IST

 ನಟಿ ತಮನ್ನಾ ಭಾಟಿಯಾ (Tamannaah Bhatia) ಹಾಗೂ ವಿಜಯ್ ವರ್ಮಾ ಅವರು  ಪ್ರೀತಿಸುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಡೇಟಿಂಗ್​ ಮಾಡಿದ ಮಾತ್ರಕ್ಕೆ ನಟ ನಟಿಯರು ಅವರನ್ನೇ ಮದ್ವೆಯಾಗುತ್ತಾರೆಂದೇನೂ ಇಲ್ಲ. ಆದರೆ ಈ ಜೋಡಿ ಮಾತ್ರ ವಿವಾಹ ಬಂಧನಕ್ಕೆ ಶೀಘ್ರದಲ್ಲಿಯೇ ಒಳಗಾಗಲಿದೆ ಎನ್ನುವ ಸುದ್ದಿ ಮೊದಲಿನಿಂದಲೂ ಇದೆ. ವಿಜಯ್​ ವರ್ಮಾ ಅವರಿಗೂ 38 ವರ್ಷ ವಯಸ್ಸಾಗಿದ್ದು, ಇಬ್ಬರಿಗೂ ಇದಾಗಲೇ ಮದುವೆಯ ವಯಸ್ಸು ಮೀರಿರುವ ಕಾರಣ, ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 1989ರಲ್ಲಿ ಹುಟ್ಟಿರೋ ನಟಿಗೆ ಈಗ 34 ವರ್ಷ ವಯಸ್ಸು.  ನಟ ವಿಜಯ್ ವರ್ಮಾ ಜೊತೆ ಡೇಟಿಂಗ್​ ಮಾಡುತ್ತಿದ್ದರೂ ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ನಟಿಯ ಮನೆಯಲ್ಲಿ ಸಕತ್​ ಒತ್ತಡ ಬರುತ್ತಿದೆ ಎಂದು ವರದಿಯಾಗಿದೆ. ವಯಸ್ಸಾಗುತ್ತಿರುವ ಕಾರಣ ಹಾಗೂ ಇದಾಗಲೇ ಹಲವಾರು ಬಾಲಿವುಡ್​ ನಟಿಯರು ಮದುವೆ, ಮಕ್ಕಳು ಎಂದೆಲ್ಲಾ ಬಿಜಿಯಾಗಿರುವ ತಮ್ಮ ಮಗಳಿನ್ನೂ ಮದುವೆಯಾಗಿಲ್ಲ ಎನ್ನುವ ಚಿಂತೆ ತಮನ್ನಾ ಪಾಲಕರಿಗೆ ಕಾಡುತ್ತಿದೆಯಂತೆ. ಇದಕ್ಕಾಗಿಯೇ ನಟಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು.

ಕೊನೆಗೂ ಇಬ್ಬರೂ  ಕಳೆದ ಜೂನ್‌ನಲ್ಲಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದರು.  2023ರ ಹೊಸ ವರ್ಷಾಚರಣೆ ವೇಳೆ ಈ ಜೋಡಿ  'ಲಿಪ್ ಲಾಕ್' ಮಾಡಿಕೊಂಡು ಸುದ್ದಿಯಾಗಿತ್ತು.  'ಲಸ್ಟ್ ಸ್ಟೋರೀಸ್' ಚಿತ್ರದ ಬಳಿಕ ತಮನ್ನಾ ವಿಜಯ್ ಇನ್ನಷ್ಟು ಹತ್ತಿರವಾಗಿದ್ದಾರೆ. ಅದಾದ ಮೇಲೆ ಇವರಿಗೆ ಹೋದಲ್ಲಿ ಬಂದಲ್ಲಿ ಮದ್ವೆ ಸುದ್ದಿಯನ್ನೇ ಕೇಳಲಾಗಿತ್ತು.  'ಜಾನೇ ಜಾನ್' ಚಿತ್ರದಲ್ಲಿ ಕರೀನಾ ವಿಜಯ್ ಒಟ್ಟಿಗೇ ಕೆಲಸ ಮಾಡಿದ್ದಾರೆ. ಆ ವೇಳೆ ಕರೀನಾ ಕಪೂರ್ ತಮ್ಮ ಇಡೀ ಫ್ಯಾಮಿಲಿ ಜತೆ ಬಂದಿದ್ದರು. ಆಗ ವಿಜಯ್​ ಅವರು,  ತಮಗೂ ಮಕ್ಕಳು ಬೇಕು, ಫ್ಯಾಮಿಲಿ ಮಾಡಿಕೊಳ್ಳಬೇಕು ಎಂದು ಮಾತನಾಡಿದ್ದರು. ಆಗ ಕರೀನಾ 'ನೀವು ಸರಿಯಾದ ರೂಟ್‌ನಲ್ಲಿ ಇದ್ದೀರಿ ಎನಿಸುತ್ತಿದೆ. ನೀವು ನನ್ನಿಂದ ಪ್ರೇರಣೆ ಪಡೆದಿರುವುದು ಒಳ್ಳೆಯದು. ಆದಷ್ಟು ಬೇಗ ನಿಮ್ಮ ಆಸೆ ಕೈಗೂಡಲಿ' ಎಂದಿದ್ದರು. ಒಟ್ಟಿನಲ್ಲಿ ಈ ಜೋಡಿ ಯಾವಾಗ ಹಸೆ ಮಣೆ ಏರುವುದು ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದು, ಇದೀಗ ತಮ್ಮ ಸಂಬಂಧದ ಕುರಿತು ವಿಜಯ್​ ವರ್ಮಾ ಓಪನ್​ ಆಗಿ ಮಾತನಾಡಿದ್ದಾರೆ. 

ಸೆಕ್ಸ್​ ಸೀನ್​ಗಳಿಗೆ ಮೂಡ್​ ಕ್ರಿಯೇಟ್​ ಮಾಡ್ತಾರೆ, ಭಾವನೆ ತಡೆಯಲು ಆಗಲ್ಲ.. ಆಗ... ವಿಜಯ್‌ ವರ್ಮಾ ಓಪನ್ ಮಾತು

  ತಮನ್ನಾ ಕುರಿತು ಓಪನ್​ ಆಗಿ ಮಾತನಾಡಿರುವ ವಿಜಯ್ ವರ್ಮಾ, "ನಾನು 2005 ರಲ್ಲಿ ಹೈದರಾಬಾದ್ ತೊರೆದು ಮುಂಬೈಗೆ ಬಂದಿದ್ದೆ.  ಮತ್ತು ಅದೇ ವರ್ಷ ಅವಳು ಮುಂಬೈನಿಂದ  ಹೈದರಾಬಾದ್‌ಗೆ ಬಂದಳು. ಅವಳು ಹೈದರಾಬಾದ್‌ನಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಂಡ ಮುಂಬೈ ಹುಡುಗಿ ಮತ್ತು ನಾನು ಹೈದರಾಬಾದ್​ನಲ್ಲಿ ಸ್ಥಾಪಿತಗೊಂಡಿರುವ  ಹುಡುಗ. ಅವಳು ನಿರರ್ಗಳವಾಗಿ ತಮಿಳು ಮತ್ತು ತೆಲುಗು ಮಾತನಾಡುತ್ತಾಳೆ, ಆದ್ದರಿಂದ ನಮ್ಮ ಸಂಬಂಧವು ತುಂಬಾ ಆಸಕ್ತಿದಾಯಕವಾಗಿದೆ ಎಂದಿದ್ದಾರೆ ವಿಜಯ್​ ವರ್ಮಾ. ತಮ್ಮ ಸಂಬಂಧದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಅವರು,  "ನಮ್ಮ ಸಂಬಂಧವು ಲಸ್ಟ್ ಸ್ಟೋರಿಗಳ ನಂತರ ಪ್ರಾರಂಭವಾಯಿತು, ಮೊದಲು, ನಾವು ಸಹ ನಟರಾಗಿ, ತುಂಬಾ ಚಿತ್ರಗಳಲ್ಲಿ ನಟಿಸಿದ್ದೇವೆ,  ಭೇಟಿಯಾಗಿದ್ದೆವು. ಆದರೆ ಲಸ್ಟ್​ ಸ್ಟೋರೀಸ್​ -2 ಬಳಿಕ ಪ್ರೀತಿ ಗಾಢವಾಯಿತು. ತಮನ್ನಾ ಜೊತೆ ನನಗೆ ತುಂಬಾ ಮಜಾ ಬರುತ್ತದೆ. ಆಕೆಯ ಜೊತೆ ಇರುವುದು ರೋಚಕ ಎಂದಿದ್ದಾರೆ ನಟ. 
 
 ಈ ಹಿಂದೆ ವಿಜಯ್​ ವರ್ಮಾ ಅವರಿಗೆ ನೀವು ತಮನ್ನಾರನ್ನು ಮದ್ವೆಯಾಗುವುದು ಹೌದಾ? ಯಾವಾಗ? ಎಂಬೆಲ್ಲಾ ಪ್ರಶ್ನೆ ಎದುರಾಗಿತ್ತು. ಆಗ ವಿಜಯ್​ ವರ್ಮಾ ಅವರು, ಈ ಪ್ರಶ್ನೆಗೆ ಖುದ್ದು ನನ್ನ ತಾಯಿಗೇ ಉತ್ತರ ನೀಡಿಲ್ಲ, ಅವರೂ ಪ್ರಶ್ನೆಗೆ ಉತ್ತರ ಸಿಗುವುದಕ್ಕಾಗಿ ಕಾಯುತ್ತಿದ್ದಾರೆ ಎಂದು ತಮಾಷೆ ಮಾಡುವ ಮೂಲಕ ಕೊನೆಗೂ ಪ್ರಶ್ನೆಗೆ ಉತ್ತರವನ್ನೇ ಕೊಟ್ಟಿರಲಿಲ್ಲ.  ಇಷ್ಟೇ ಅಲ್ಲದೇ, ಅವರನ್ನು ಈ ಬಗ್ಗೆ ಪಾಪರಾಜಿಗಳು ಮತ್ತಷ್ಟು ಒತ್ತಾಯಿಸಿದಾಗ ನಟ,  ನಾನು ಮದುವೆಯಾಗುವುದು ಯಾವ ಹುಡುಗಿಗೂ ಇಷ್ಟವಿಲ್ಲ ಏನು ಮಾಡುವುದು ಎಂದು ತಮಾಷೆಗೆ ಹಾರಿಕೆ ಉತ್ತರ ಕೊಟ್ಟರು. ಇದಕ್ಕೆ ಉತ್ತರ ನನ್ನ ಅಮ್ಮಂಗೂ ಗೊತ್ತಿಲ್ಲ, ಯಾರಿಗೂ ಗೊತ್ತಿಲ್ಲ ಎನ್ನುತ್ತಲೇ ಕೊನೆಗೂ ಉತ್ತರಿಸಿದೇ ತಪ್ಪಿಸಿಕೊಂಡಿದ್ದರು. ಈಗ ಮದುವೆಯ ಬಗ್ಗೆ ಹೇಳದಿದ್ದರೂ ರಿಲೇಷನ್​ ಕುರಿತು ಹೇಳಿದ್ದಾರೆ. 

Bad Newz: ಆಲಿಯಾ ಪತಿ ಬಳಿಕ, ಕತ್ರೀನಾ ಪತಿ ಜೊತೆ ಮತ್ತೆ ಬೆತ್ತಲಾದ ತೃಪ್ತಿ ಡಿಮ್ರಿ- ಅಬ್ಬಾ ಈ ಪರಿ ಸಂಭಾವನೆನಾ?
 

Latest Videos
Follow Us:
Download App:
  • android
  • ios