Asianet Suvarna News Asianet Suvarna News

ಸಲ್ಮಾನ್ ಖಾನ್‌ಗೆ ಶೇಕ್‌ಹ್ಯಾಂಡ್ ಮಾಡಲು ಹೋದ ವಿಕ್ಕಿ ಕೌಶಲ್‌ನ ನೂಕಿದ ಬಾಡಿಗಾರ್ಡ್: ಅಭಿಮಾನಿಗಳ ಆಕ್ರೋಶ

ಸಲ್ಮಾನ್ ಖಾನ್‌ಗೆ ಶೇಕ್‌ಹ್ಯಾಂಡ್ ಮಾಡಲು ಹೋದ ವಿಕ್ಕಿ ಕೌಶಲ್‌ ಅನ್ನು ಬಾಡಿಗಾರ್ಡ್ ದೂರಕ್ಕೆ ನೂಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಆಕ್ರೋಶ ಹೊರಹಾಕುತ್ತಿದ್ದಾರೆ. 

Vicky Kaushal Pushed Away By security Team While He Tries To Shake Hands With Salman Khan sgk
Author
First Published May 26, 2023, 10:44 AM IST

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನೋಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಇತ್ತೀಚೆಗಷ್ಟೆ ಐಫಾ 2023 ಸಮಾರಂಭಕ್ಕೆ ಭಾಗಿಯಾಗಿದ್ದ ಸಲ್ಮಾನ್ ಖಾನ್ ಎಂಟ್ರಿ ಕೊಡುತ್ತಿದ್ದಂತೆ ಅನೇಕರು ಸುತ್ತಿವರೆದರು. ಅದೇ ಗುಂಪಿನಲ್ಲಿ ಬಾಲಿವುಡ್‌ನ ಮತ್ತೋರ್ವ ಸ್ಟಾರ್ ವಿಕ್ಕಿ ಕೌಶಲ್ ಕೂಡ ಇದ್ದರು. ಸಲ್ಮಾನ್ ಖಾನ್ ಅವರನ್ನು ನೋಡಿದ ವಿಕ್ಕಿ ಕೌಶಲ್ ಶೇಕ್‌ಹ್ಯಾಂಡ್ ಮಾಡಿ ಮಾತನಾಡಿಸಲು ಮುಂದಾದರು. ಆದರೆ ಸಲ್ಮಾನ್ ಖಾನ್ ಬಾಡಿಗಾರ್ಡ್ ವಿಕ್ಕಿ ಕೌಶಲ್ ಅವರನ್ನು ತಳ್ಳಿ ದೂರಕ್ಕೆ ನೂಕಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಎಂದೇ ಗುರುತಿಸಿಕೊಂಡಿದ್ದ ಕತ್ರಿನಾ ಕೈಫ್ ಅವರ ಪತಿಯನ್ನು ನಡೆಸಿಕೊಂಡ ರೀತಿ ನೋಡಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇಷ್ಟೆಲ್ಲ ಅವಮಾನ ಮಾಡಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ವಿಕ್ಕಿ ಕೌಶಲ್ ಕಂಡರೆ ಸಲ್ಮಾನ್ ಖಾನ್ ಆಗಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡಿ ಬಳಿಕ ರಣಬೀರ್ ಕಪೂರ್ ಜೊತೆ ಹೋದಳು ಆದರೆ ಬಳಿಕ ವಿಕ್ಕಿ ಕೌಶಲ್‌ನ ಮದುವೆಯಾದರು. ಇದು ಸಲ್ಮಾನ್ ಖಾನ್‌ಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.   

ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಎಂಟ್ರಿ ಕೊಡುತ್ತಾರೆ. ಆಗ ವಿಕ್ಕಿ ಕೌಶಲ್ ಸೆಲ್ಫಿ ನೀಡುತ್ತಿರುತ್ತಾರೆ. ಸಲ್ಮಾನ್ ಖಾನ್ ಜೊತೆ ದೊಡ್ಡ ಗುಂಪು ಬಂದಿದ್ದು ವಿಕ್ಕಿ ಕೌಶಲ್ ಪಕ್ಕಕ್ಕೆ ಸರಿಯುತ್ತಾರೆ. ಬಳಿಕ ಸಲ್ಮಾನ್ ಖಾನ್ ಅವರನ್ನು ಮಾತನಾಡಿಸಲು ಮುಂದಾಗುತ್ತಾರೆ. ಅಷ್ಟೊತ್ತಿಗೆ ಸಲ್ಮಾನ್ ಬಾಡಿಗಾರ್ಡ್ ವಿಕ್ಕಿ ಕೌಶಲ್ ಅವರನ್ನು ಪಕ್ಕಕ್ಕೆ ಸರಿಸಿ ಸಲ್ಮಾನ್ ಖಾನ್‌ಗೆ ಮುಂದೆ ಹೋಗಲು ದಾರಿ ಮಾಡಿಕೊಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೊಸ ಬ್ಯುಸಿನೆಸ್‌ ಆರಂಭಿಸಿದ ಸಲ್ಮಾನ್ ಖಾನ್: 19 ಅಂತಸ್ತಿನ ಹೋಟೆಲ್ ನಿರ್ಮಾಣ

IIFA ಅವಾರ್ಡ್ಸ್ 2023 ಅಬುಧಾಬಿಯಲ್ಲಿ ಗುರುವಾರ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇನ್ನೂ ಸಲ್ಮಾನ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಟೈಗರ್ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, ಕಳೆಕ ರಾತ್ರಿ ಟೈಗರ್ 3 ಶೂಟಿಂಗ್‌ನಲ್ಲಿದೆ. ಸದ್ಯ ಚಿತ್ರೀಕರಣ ಮುಗಿದಿದೆ. ನೀವು ದೀಪಾಳಿಯಂದು ಟೈಗರ್ ಸಿನಿಮಾ ನೋಡುತ್ತೀರಿ. ತುಂಬಾ ಹ್ಯಕ್ಟಿಕ್ ಚಿತ್ರೀಕರಣವಾಗಿತ್ತು ಆದರೂ ಚೆನ್ನಾಗಿತ್ತು' ಎಂದು ಹೇಳಿದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ-ವಿಕ್ಕಿ ಜೋಡಿ? ಮೌನ ಮುರಿದ ಸ್ಟಾರ್ ನಟಿ

ಸಲ್ಮಾನ್ ಖಾನ್ ಕೊನೆಯದಾಗಿ ಕಿಸಿ ಕಾ ಬಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಖಾನ್ ನಟಿಸಿದ್ದರು. ಸದ್ಯ ಟೈಗರ್-3ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. 
 

Follow Us:
Download App:
  • android
  • ios