ಹೊಸ ಬ್ಯುಸಿನೆಸ್ ಆರಂಭಿಸಿದ ಸಲ್ಮಾನ್ ಖಾನ್: 19 ಅಂತಸ್ತಿನ ಹೋಟೆಲ್ ನಿರ್ಮಾಣ
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹೊಸ ಬ್ಯುಸಿನೆಸ್ ಆರಂಭಿಸಿದ್ದಾರೆ. ಹೋಟೆಲ್ ಉದ್ಯಮದತ್ತ ಮುಖ ಮಾಡಿದ ಸಲ್ಮಾನ್ ಖಾನ್ 19 ಅಂತಸ್ತಿನ ಹೋಟೆಲ್ ನಿರ್ಮಾಣ ಮಾಡುತ್ತಿದ್ದಾರೆ.
ಅನೇಕ ಸ್ಟಾರ್ ಕಲಾವಿದರು ಸಿನಿಮಾ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲೂ ತೊಡಗಿಕೊಂಡಿರುತ್ತಾರೆ. ನಟನೆ, ನಿರ್ಮಾಣ ಜೊತೆಗೆ ಹೊಸ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುತ್ತಾರೆ. ಇದೀಗ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹೊಸ ಬ್ಯುಸಿನೆಸ್ ನತ್ತ ಮುಖ ಮಾಡಿದ್ದಾರೆ. ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯ ಗೆಲುವು ದಾಖಲಿಸುತ್ತಿಲ್ಲ. ಈ ನಡುವೆ ಸಲ್ಮಾನ್ ಖಾನ್ ಹೊಸ ಬ್ಯುಸಿನೆಸ್ ಪ್ರಾರಂಭಿರುವುದು ಅಚ್ಚರಿ ಮೂಡಿಸಿದೆ. ಅಂದಹಾಗೆ ಸಲ್ಮಾನ್ ಖಾನ್ ಪ್ರಾರಂಭ ಮಾಡಿರುವುದು ಹೋಟೆಲ್ ಬ್ಯುಸಿನೆಸ್.
ಸಲ್ಮಾನ್ ಖಾನ್ ಹೋಟೆಲ್ ಬ್ಯುಸಿನೆಸ್‌ಗೆ ಈಗಾಗಲೇ 19 ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದೆ. ಮುಂಬೈನ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾಗಿರುವ ಬಾಂದ್ರಾದಲ್ಲಿ ಹೋಟೆಲ್ ಕಟ್ಟಡ ನಿರ್ಮಾಣವಾಗುತ್ತಿದೆ. ಸಮುದ್ರ ತೀರಕ್ಕೆ ಮುಖ ಮಾಡಿ ನಿಂತಿರುವ ಬೃಹತ್ ಕಟ್ಟಡ ತಲೆ ಎತ್ತಿ ನಿಂತಿದೆ. ಒಂದು ವರ್ಷದ ಹಿಂದೆಯೇ ಹೋಟೆಲ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಕಟ್ಟಡ ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾ ಖಾನ್ ಹೆಸರಿನಲ್ಲಿದೆ.
ಸಲ್ಮಾನ್ ತಂಗಿ ಮನೆಯಲ್ಲಿದ್ದ ವಜ್ರದ ನೆಕ್ಲೆಸ್ ಮಾಯ! ಕಳ್ಳನ ಮುಖ ಸಿಸಿಟಿವಿಯಲ್ಲಿ ನೋಡಿ ಶಾಕ್
ಸದ್ಯ ನಿರ್ಮಾಣವಾಗುತ್ತಿರುವ ಕಟ್ಟದಲ್ಲ ಮೊದಲು ಮತ್ತು ಎರಡನೇ ಫ್ಲೋರ್‌ನಲ್ಲಿ ಕೆಫೆ ಮತ್ತು ರೆಸ್ಟೋರೆಂಟ್ ಮಾಡಲಾಗುತ್ತಿದ್ದು 3ನೇ ಫ್ಲೋರ್‌ನಲ್ಲಿ ಜಿಮ್ ಇರಲಿದೆಯಂತೆ. ಸ್ವಿಮ್ಮಿಂಗ್ ಪೂಲ್, ಸರ್ವೀಸ್ ಫ್ಲೋರ್, ಕನ್ವೆನ್ಷನ್ ಸೆಂಟರ್ ಸೇರಿದಂತೆ ಸಂಪೂರ್ಣ ಕಟ್ಟಡ ಹೋಟೆಲ್‌ಗೆ ಬಳಕೆಯಾಗುತ್ತಿದೆ. ಸದ್ಯದಲ್ಲೇ ಈ ಕಟ್ಟಡ ನಿರ್ಮಾಣ ಕೆಲಸ ಸಂಪೂರ್ಣವಾಗಲಿದ್ದು ಹೋಟೆಲ್ ಪ್ರಾರಂಭವಾಗಲಿದೆ.
ಸಲ್ಮಾನ್ ಖಾನ್‌ನನ್ನು ಹಾಡಿ ಹೊಗಳಿದ ಸುಧಾ ಮೂರ್ತಿ; 'ವಾವ್' ಎಂದ ಕಪಿಲ್ ಶರ್ಮಾ
ಸಲ್ಮಾನ್ ಖಾನ್ ಸಿನಿಮಾಗಳು
ಸಲ್ಮಾನ್ ಖಾನ್ ಸದ್ಯ ಟೈಗರ್ 3 ಸಿನಿಮಾದಲ್ಲಿ ನಟಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಕೊನೆಯದಾಗಿ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ನಿರೀಕ್ಷೆಯ ಗೆಲುವು ದಾಖಲಿಸಲು ವಿಫಲವಾಗಿದೆ. ಸಲ್ಮಾನ್ ಖಾನ್ ಜೊತೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ಟೈಗರ್ 3 ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಈ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.