ಶಾರೂಖ್ ಮುಂದೆ ಸೌಥ್ ಸ್ಟಾರ್‌ ನಟನನ್ನ ಹೊಗಳಿ ಆ ಸ್ವ್ಯಾಗ್ ಮಾಡೋಕೆ ಆಗ್ತಿಲ್ಲೆಂದ ವಿಕ್ಕಿ ಕೌಶಲ್!

ಪ್ರಶಸ್ತಿ ಸಮಾರಂಭವೊಂದರಲ್ಲಿ ವಿಕ್ಕಿ ಕೌಶಲ್,  ಅವರ ಸ್ವ್ಯಾಗ್ ಅನ್ನು ಅನುಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಶಾರೂಖ್ ಖಾನ್ ಸಮ್ಮುಖದಲ್ಲಿ ಈ ಹೇಳಿಕೆ ನೀಡಿರುವುದು ಗಮನಾರ್ಹ. ಕಾಲ ಬದಲಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

Vicky Kaushal praise allu arjun in front Shah Rukh khan mrq

ಮುಂಬೈ: ಇಂದು ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್‌ಗೆ ಟಕ್ಕರ್ ಕೊಡುತ್ತಿರೋದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಕನ್ನಡದ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್, ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾಗಳು ಪ್ಯಾನ್‌ ಇಂಡಿಯಾದಲ್ಲಿ ಸದ್ದು ಮಾಡಿವೆ. ಹಾಗೆಯೇ ತೆಲುಗಿನ ಪುಷ್ಪಾ, ಆರ್‌ಆರ್‌ಆರ್‌ ಸಹ ದೊಡ್ಡ ಯಶಸ್ಸು ಕಂಡ ಪ್ಯಾನ್ ಇಂಡಿಯಾ ಸಿನಿಮಗಳು. ಈ ರೇಸ್‌ನಲ್ಲಿ ತಮಿಳು ಮತ್ತು ಮಲಯಾಳಂ ಸಿನಿಮಾಗಳೇನು ಹಿಂದೆ ಬಿದ್ದಿಲ್ಲ. 

ಒಂದು ಕಾಲದಲ್ಲಿ ಸೌಥ್ ಇಂಡಸ್ಟ್ರಿಯ ಸಿನಿಮಾಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದ ಬಾಲಿವುಡ್ ಮಂದಿ ಇದೀಗ ಇಲ್ಲಿ ಸಿನಿಮಾಗಳ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಕೆಜಿಎಫ್ ಚಾಪ್ಟರ್-1ರ ಜೊತೆ ರಿಲೀಸ್ ಆಗಿದ್ದ ಶಾರೂಖ್ ಖಾನ್ ಅಭಿನಯದ ಝೀರೋ ಸಿನಿಮ ಮಕಾಡೆ ಮಲಗಿತ್ತು. ಈ ಸೋಲಿನಿಂದ ಹೊರಬರಲು ಶಾರೂಖ್‌ಗೆ ಎರಡ್ಮೂರು ವರ್ಷ ಬೇಕಾಯ್ತು. ಇದೇ ಶಾರೂಖ್ ಖಾನ್ ಕಾರ್ಯಕ್ರಮವೊಂದರಲ್ಲಿ ನಟ ರಾಮ್‌ ಚರಣ್ ಅವರನ್ನು ಇಡ್ಲಿ ಎಂದು ಕರೆದು ಟಾಲಿವುಡ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಇದೇ ಶಾರೂಖ್ ಖಾನ್ ಮುಂದೆ ಟಾಲಿವುಡ್ ಅಂಗಳದ ಸ್ಟೈಲಿಶ್ ಸ್ಟಾರ್ ಒಬ್ಬರನ್ನೊಬ್ಬರನ್ನು ನಟ ವಿಕ್ಕಿ ಕೌಶಲ್ ಗುಣಗಾನ ಮಾಡಿದ್ದಾರೆ. 

ಪ್ರಶಸ್ತಿ ಸಮಾರಂಭದಲ್ಲಿನ ವಿಡಿಯೋ ತುಣುಕವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಾರೂಖ್ ಖಾನ್ ಮತ್ತು ವಿಕ್ಕಿ ಕೌಶಲ್ ನಿರೂಪಣೆ ಮಾಡುತ್ತಿರೋದನ್ನು ಗಮನಿಸಬಹುದು. ಈ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್‌ ಅವರನ್ನು ವಿಕ್ಕಿ ಕೌಶಲ್ ಹೊಗಳುತ್ತಾರೆ.  

ಇದನ್ನೂ ಓದಿ: ಕನ್ನಡದ ಸೂಪರ್ ಹಿಟ್ ಸಿನಿಮಾದ ಈ ನಟಿ ಆಲಿಯಾ, ದೀಪಿಕಾಗಿಂತಲೂ ಶ್ರೀಮಂತೆ: 4 ಸಾವಿರ ಕೋಟಿಗೂ ಅಧಿಕ ಸಂಪತ್ತು

ಪುಷ್ಪಾ ಸಿನಿಮಾದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಪುಷ್ಪಾ ಅಲ್ಲ ಫೈರ್ ಡೈಲಾಗ್ ಚರ್ಚೆಗೆ ಬರುತ್ತದೆ. ಇದೇ ಚಿತ್ರದಲ್ಲಿ ಅಲ್ಲು ಅರ್ಜುನ್, ಗಡ್ಡದ ಕೆಳಗೆ ಕೈ ತರೋ ರೀತಿ ಮಾಡಲು ನನ್ನಿಂದ ಆಗುತ್ತಿಲ್ಲ. ಎರಡ್ಮೂರು ಬಾರಿ ಪ್ರಯತ್ನಿಸಿದ್ರೂ ನನ್ನಿಂದ ಆ ಸ್ವ್ಯಾಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿಕ್ಕಿ ಕೌಶಲ್ ಹೇಳುತ್ತಾರೆ. ಈ ವಿಡಿಯೋ ನೋಡಿದ ಅಲ್ಲು ಅಭಿಮಾನಿಗಳು, ಕಾಲ ಬದಲಾಗಿದೆ ಎಂಬುದಕ್ಕೆ ಇದುವೇ ಉದಾಹರಣೆ ಎಂದು ಕಮೆಂಟ್ ಮಾಡಿದ್ದಾರೆ. 

2021ರಲ್ಲಿ ಬಿಡುಗಡೆಯಾದ ಪ್ಯಾನ್ ಇಂಡಿಯಾ ಕಲ್ಪನೆಯ ಪುಷ್ಪ-ದಿ ರೈಸ್ ಸಿನಿಮಾ ದೊಡ್ಡಮಟ್ಟದ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗದೀಶ್ ಪ್ರತಾಪ್, ಬಂಡಾರಿ, ಸುನಿಲ್, ಡಾಲಿ ಧನಂಜಯ್, ಅಜಯ್ ಘೋಷ್ ಸೇರಿದಂತೆ ಬಹುತಾರಾಗಣವನ್ನು ಚಿತ್ರತಂಡ ಒಳಗೊಂಡಿತ್ತು. 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಪುಷ್ಪ-ದಿ ರೈಸ್' ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. 

ಇದನ್ನೂ ಓದಿ: ಡಾಲಿ ಧನಂಜಯ್-ಧನ್ಯತಾ ನಿಶ್ಚಿತಾರ್ಥವನ್ನು ಫೋಟೋಗಳಲ್ಲಿ ನೋಡಿ

Latest Videos
Follow Us:
Download App:
  • android
  • ios