Asianet Suvarna News Asianet Suvarna News

ಸಲ್ಮಾನ್ ಆಗಿದ್ರೆ ಖಾಸಗಿ ಜೆಟ್‌ನಲ್ಲಿ ಕರ್ಕೊಂಡು ಹೋಗ್ತಿದ್ರು; ಕತ್ರಿನಾ ಕೈಫ್ ಸಖತ್ ಟ್ರೋಲ್

ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸಖತ್ ಟ್ರೋಲ್ ಆಗಿದ್ದಾರೆ. 

Vicky Kaushal and Katrina Kaif gets trolled for traveling Economy Class sgk
Author
First Published Dec 24, 2022, 9:33 AM IST

ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿ ಕ್ಯೂಟ್ ಜೋಡಿಗಳಲ್ಲಿ ಒಂದು. ಇವರು ಮದುವೆಯಾಗಿ ಒಂದು ವರ್ಷ ಕಳೆಯಿತು. ಸಂತೋಷದ ಜೀವನ ನಡೆಸುತ್ತಿರುವ ಕತ್ರಿನಾ ಮತ್ತು ವಿಕ್ಕಿ ಸದಾ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಗಾಗ ಕ್ಯಾಮರಾ ಮುಂದೆ ಹಾಜರಾಗುವ ಈ ಸ್ಟಾರ್ ಕಪಲ್ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಇಬ್ಬರೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್ ಅಂತ ಓಡಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಷ್ಟೆಯಲ್ಲ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದರು. ವಿಕ್ಕಿ ಮತ್ತು ಕತ್ರಿನಾ ದಂಪತಿ ಎಕಾನಮಿ ಕ್ಲಾಸ್‌‌ನಲ್ಲಿ ಪ್ರಯಾಣಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಕನ್ನಡಕ ಹಾಕಿ, ಕ್ಯಾಪ್ ಧರಿಸಿದ್ದ ಕತ್ರಿನಾ ಮೊಬೈಲ್ ನೋಡುತ್ತಾ ಕುಳಿತಿದ್ದರು. ಪಕ್ಕದಲ್ಲಿ ವಿಕ್ಕಿ ಕೌಶಲ್ ಕೂಡ ಇದ್ದರು. ಇಬ್ಬರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸ್ಟಾರ್ ದಂಪತಿಯ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಾಮೆಂಟ್ ಹರಿದು ಬರುತ್ತಿವೆ. ಅಭಿಮಾನಿಗಳು ಕತ್ರಿನಾ ಮತ್ತು ವಿಕ್ಕಿ ಸರಳತೆಯನ್ನು ಮೆಚ್ಚಿಕೊಂಡರೆ ಇನ್ನು ಕೆಲವರು ಕತ್ರಿನಾ ಕಾಲೆಳೆದಿದ್ದಾರೆ.

ಕತ್ರಿನಾಳನ್ನು ಮದುವೆಯಾಗ್ತೀನಿ ಎಂದಾಗ ತಂದೆ-ತಾಯಿ ರಿಯಾಕ್ಷನ್ ಹೇಗಿತ್ತು ಎಂದು ರಿವೀಲ್ ಮಾಡಿದ ವಿಕ್ಕಿ ಕೌಶಲ್

ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ, 'ಸಲ್ಮಾನ್ ಖಾನ್ ಜೊತೆ ಇದ್ದಿದ್ರೆ ಖಾಸಗಿ ಜೆಟ್‌ನಲ್ಲಿ ಕರ್ಕೊಂಡು ಹೋಗ್ತಿದ್ರು' ಎಂದು ಹೇಳಿದ್ದಾರೆ. ಕತ್ರಿನಾ ಮತ್ತು ಸಲ್ಮಾನ್ ಖಾನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಕಳೆದ ಕೆಲವು ವರ್ಷಗಳ ಹಿಂದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನೆಟ್ಟಿಗನೊಬ್ಬ ಹಳೆ ಘಟನೆಯನ್ನು ಮತ್ತೆ ನೆನಪಿಸಿ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿ, 'ಸ್ಟಾರ್‌ಗಳಿಗೆ ಗೊತ್ತಿಲ್ಲದೆ ವಿಡಿಯೋ ಮಾಡುವುದು ತಪ್ಪು' ಎಂದು ವಿಡಿಯೋ ಮಾಡಿದವರನ್ನು ತರಾಟೆ ತೆಗೆದುಕೊಂಡರು. ಇನ್ನು ಅನೇಕರು ಕತ್ರಿನಾ ಮತ್ತು ವಿಕ್ಕಿ ಜೋಡಿಗೆ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸರಳತೆಗೆ ಫಿದಾ ಆಗಿದ್ದಾರೆ.

ವಿಕ್ಕಿ ಕೌಶಲ್‌ ಜೊತೆ ಮದುವೆಯಾದ ಮೇಲೆ ಇನ್ನೂ ಹೆಚ್ಚು ಫೇಮಸ್‌ ಆದ ಕತ್ರಿನಾ ಕೈಫ್‌!

ವಿಕ್ಕಿ ಮತ್ತು ಕತ್ರಿನಾ ಕೈಫ್ ಕಳೆದ ವರ್ಷ ಡಿಸೆಂಬರ್ 9 ರಂದು ದಾಂಪತ್ಯಕ್ಕೆ ಕಾಲಿಟ್ಟರು. ರಾಜಸ್ಥಾನದಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮತ್ತು ಚಿತ್ರರಂಗದ ಕೆಲವು ಗಣ್ಯರು ಹಾಜರಾಗಿದ್ದರು. ಸದ್ಯ ಇಬ್ಬರೂ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಕೌಶಲ್ ಕೊನೆಯದಾಗಿ ಗೋವಿಂದ ಮೇರಾ ನಾಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದು. ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು ಭೂಮಿ ಪಡ್ನೇಕರ್ ಜೊತೆ ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 16ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆಗಿದೆ. ಸದ್ಯ ಎರಡು ಸಿನಿಮಾಗಳಲ್ಲಿ ವಿಕ್ಕಿ ಕೌಶಲ್ ಬ್ಯುಸಿಯಾಗಿದ್ದಾರೆ. ಕತ್ರಿನಾ ಕೈಫ್ ಕೊನೆಯದಾಗಿ ಫೋನ್ ಭೂತ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಸದ್ಯ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಟೈಗರ್-3 ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ.   

Follow Us:
Download App:
  • android
  • ios