ಟಾಲಿವುಡ್‌ ನ  ವರ್ಸಟೈಲ್‌ ಹಾಸ್ಯ ನಟ ಎಂದೇ ಗುರುತಿಸಿಕೊಂಡಿರುವ ನರಸಿಂಗ್ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ  ಸಾಕಷ್ಟು ವದಂತಿಗಳನ್ನು ಕೇಳಿ ಮನನೊಂದ ಪತ್ನಿ ಎಲ್ಲಾ ಪ್ರಶ್ನೆಗಳಿಗೆ  ಸ್ಪಷ್ಟನೇ ನೀಡಿದ್ದಾರೆ.

ಕೆಲ ದಿನಗಳಿಂದ ನರಸಿಂಗ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಸತ್ಯವಾದರೂ ಅದರ ಕಾರಣ ಬೇರೆಯಂತೆ . ಕಳೆದ ಗುರುವಾದ ಕಿಡ್ನಿ ಡಯಾಲಿಸಿಸ್  ಮಾಡಿಸಲು ನರಸಿಂಗ್ ಅವರು ಯಶೋಧಾ ಆಸ್ಪತ್ರೆಗೆ ತೆರಳಿದ್ದಾರೆ ಅಲ್ಲಿ ಪರೀಕ್ಷಿಸಿದಾಗ  ಸಕ್ಕರೆ ಅಂಶ ಹಾಗೂ ರಕ್ತದೊತ್ತಡದಲ್ಲಿ ವ್ಯತ್ಯಾಸವಾದ್ದರಿಂದ  ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಂತಾಗಿದೆ. ಈ ಹಿಂದೆಯೂ ಹೀಗೆ ಮೆದುಳಿನಲ್ಲಿ ರಕ್ತ ಬ್ಲಾಕೇಜ್‌ ಆಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಬ್ರಿಟನ್‌ ಪ್ರಧಾನಿ ಬೋರಿಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್!

'ಆಸ್ಪತ್ರೆಗೆ ಬರುವ ತನಕ ಯಾವುದೇ ಸಮಸ್ಯೆ ಇರಲಿಲ್ಲ ಬಂದ ನಂತರ ಅವರು ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದು ಅಂದಿನಿಂದ ಅವರು ಇದೇ ಸ್ಥಿತಿಯಲ್ಲಿ ಇದ್ದಾರೆ.  ಅವರು ಮನೆಯ ಬಾತ್‌ ರೂಮ್‌ನಲ್ಲಿ ಬಿದ್ದು ತೆಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂಬ  ವದಂತಿ ನಂಬಬೇಡಿ. ಅವರ ತಲೆಗೆ ಯಾವುದೇ ಗಾಯವಾಗಿಲ್ಲ. ಮಾಧ್ಯಮಗಳಲ್ಲಿ ತೋರಿಸುತ್ತಿರುವುದು ಸುಳ್ಳು ಸುದ್ದಿ ಅದರಿಂದ ನಮಗೆ ನೋವಾಗಿದೆ ' ಎಂದು ನರಸಿಂಗ್ ಪತ್ನಿ ಮಾತನಾಡಿದ್ದಾರೆ.

ಟಾಲಿವುಡ್‌ನಲ್ಲಿ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಅಭಿನಯಿಸಿದ್ದಾರೆ ಕೆಲವೊಂದು ಸಿನಿಮಾಗಳಲ್ಲಿ ವಿಲನ್‌ ಪಾತ್ರವನ್ನೂ ಹಾಸ್ಯಭರಿತವಾಗಿ ಮಾಡಿದ್ದಾರೆ. ನರಸಿಂಗ್ ಬೇಗ ಗುಣಮುಖರಾಗಲಿ ಎಂದು ಆಶಿಸೋಣ.

ಕೊರೋನಾ ಗೆದ್ದು ಬಂದ ಮಗಳಿಗೆ ಅದ್ಧೂರಿ ಸ್ವಾಗತ, ಆರತಿ ಬೆಳಗಿದ ತಾಯಿ! .