ಹಿರಿಯ ಬಾಲಿವುಡ್ ನಿರ್ದೇಶಕ ಜಾನಿ ಭಕ್ಷಿ ಇನ್ನಿಲ್ಲ
ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ಜಾನಿ ಭಕ್ಷಿ(82) ನಿಧನರಾಗಿದ್ದಾರೆ.
ಬಾಲಿವುಡ್‌ನ ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ಜಾನಿ ಭಕ್ಷಿ(82) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತಕ್ಕೊಳಗಾದ ಹಿರಿಯ ನಿರ್ದೇಶಕನನ್ನು ಶುಕ್ರವಾರ ಬೆಳಗ್ಗೆ ಜುಹು ಉಪನಗರದ ಆರೋಗ್ಯ ನಿಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಂದರ್ಭ ಉಸಿರಾಟದ ಸಮಸ್ಯೆಯೂ ಇತ್ತು. ಇವರ ಕೊರೋನಾ ಪರೀಕ್ಷೆಯನ್ನೂ ಮಾಡಿದ್ದು, ವರದಿ ನೆಗೆಟಿವ್ ಬಂದಿದೆ.
ಉಸಿರಾಟದ ತೊಂದರೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೆಂಟಿಲೇಟರ್‌ನಲ್ಲಿರಿಸಲಾಗಿತ್ತು. ಕೊರೋನಾ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿದೆ.
ಸುಶಾಂತ್ ಸಿಂಗ್ ಸಿಬ್ಬಂದಿ ದಿಪೇಶ್ ಅರೆಸ್ಟ್; ಬಾಯ್ಬಿಟ್ಟ ಹೊಸ ಹೆಸರುಗಳು!
ಶುಕ್ರವಾರ 1.30-2 ಗಂಟೆ ಸಂದರ್ಭ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ಭಕ್ಷಿ ಅವರ ಪುತ್ರಿ ಪ್ರಿಯಾ ತಿಳಿಸಿದ್ದಾರೆ. ಶನಿವಾರ ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮ ಕ್ರಿಯೆ ನೆರವೇರಿದೆ.
ಸುಮಾರು 40 ವರ್ಷಗಳ ಕಾಲ ಬಾಲಿವುಡ್‌ನಲ್ಲಿ ನಿರ್ದೇಶಕ, ನಿರ್ಮಾಪಕನಾಗಿದ್ದ ಭಕ್ಷಿ ಮಂಝಿಲೇ ಔರ್ ಭೀ ಹೇಂ(1974), ರಾವನ್(1984), ಫಿರ್ ತೇರಿ ಕಹಾನಿ ಯಾದ್ ಆಯಿ(1993) ಸಿನಿಮಾ ನಿರ್ಮಿಸಿದ್ದಾರೆ. ದಾಕು ಔರ್ ಪೊಲೀಸ್(1992), ಕುದಾಯಿ(1994) ಇವರ ನಿರ್ದೇಶನದ ಸಿನಿಮಾ
ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು: ಈ ಕೇಸ್‌ನಲ್ಲಿ ಮಾಜಿ ಸಚಿವರ ಪುತ್ರ
ಭಕ್ಷಿಯವರಿಗೆ ಬ್ರಾಂಡೋ, ಕೆನ್ನೆಡಿ, ಬ್ರಾಡ್ಮನ್ ಮೂವರು ಪುತ್ರರೂ ಪ್ರಿಯಾ ಎಂಬ ಮಗಳಿದ್ದಾಳೆ. ಜಾನಿ ಭಕ್ಷಿ ಇನ್ನಿಲ್ಲ ಎಂದು ತಿಳಿದು ಬೇಸರವಾಗುತ್ತಿದೆ. ನನ್ನ ಮುಂಬೈ ಜೀವನದ ಅವಿಭಾಜ್ಯ ಅಂಗವಾಗಿದ್ದರು. ನಿರ್ಮಾಪಕ, ಗೆಳೆಯ, ಬೆಂಬಲಿಗನಾಗಿ ಜೊತೆಗಿದ್ದರು. ಅವರ ನಗು ಸುತ್ತಮುತ್ತಲಿನ ಎಲ್ಲರಲ್ಲೂ ನಗು ಮೂಡಿಸುತ್ತಿತ್ತು ಎಂದಿದ್ದಾರೆ ನಟ ಅನುಪಮ್ ಖೇರ್.