ಹಿರಿಯ ಚಿತ್ರನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಗುರುವಾರ ಫೇಸ್‌ಬುಕ್‌ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತಮಗೆ ಕೋವಿಡ್‌19 ಪಾಸಿಟಿವ್ ಇದ್ದ ವಿಚಾರದ ಬಗ್ಗೆ ಹೇಳಿದ್ದಾರೆ. ವೈದ್ಯರು ಸತತ ತಪಾಸಣೆ ಮಾಡುತ್ತಿದ್ದಾರೆ, ಕೆಲವು ದಿನಗಳ ಹಿಂದೆ ಸಿಟಿ ಸ್ಕ್ಯಾನ್‌ ಕೂಡ ಮಾಡಲಾಗಿತ್ತು ನಾನು ಆರೋಗ್ಯವಾಗಿದ್ದೀನಿ ಎಂದು ಮಾತನಾಡಿದ್ದಾರೆ.

ಕೊರೋನಾ ನಿರ್ವಹಣೆ; ವಿಪಕ್ಷಗಳಿಗೆ ರಾಜೀವ್ ಚಂದ್ರಶೇಖರ್‌ರಿಂದ ಅಂಕಿ ಅಂಶಗಳ ಪಾಠ 

ಸೆಪ್ಟೆಂಬರ್ 21ರಂದು ಸಿಂಗೀತಂ ಹುಟ್ಟುಹಬ್ಬವಿದ್ದ ಕಾರಣ ಮಾಧ್ಯಮ ಮಿತ್ರರು ಹಾಗೂ ಸ್ನೇಹಿತರು ಕರೆ ಮಾಡಿದ್ದರು. ಆದರೆ ಸೆಪ್ಟೆಂಬರ್ 9ರಿಂದ ಕ್ವಾರಂಟೈನ್‌ನಲ್ಲಿರುವ ಕಾರಣ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಆರೋಗ್ಯ ಬಹುಬೇಗ ಚೇತರಿಕೆ ಕಂಡಿದೆ. ಆದರೂ ಶ್ರೀನಿವಾಸ‌ ಒಬ್ಬರೇ ಐಸೋಲೇಟ್ ಆಗಿದ್ದಾರೆ. ಕುಟುಂಬಸ್ಥರು ಮನೆಯಲ್ಲಿಯೇ ತಯಾರಿಸಿದ ಅಹಾರವನ್ನು ಬಾಗಿಲಿನಲ್ಲಿ ಇಡುತ್ತಾರಂತೆ. ಚಿತ್ರಕಥೆ ಬರೆಯುತ್ತಾ ಸಮಯ ಕಳೆಯುತ್ತಿದ್ದೇನೆ, ಎಂದಿದ್ದಾರೆ.

ನಟ ಚಿರಂಜೀವಿ ಸಹೋದರ ನಾಗ ಬಾಬುಗೆ ಕೊರೋನಾ ಪಾಸಿಟಿವ್ 

ವಿಡಿಯೋ ಮುಕ್ತಾಯವಾಗುತ್ತಿದ್ದಂತೆ ಕೊರೋನಾ ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ದಯವಿಟ್ಟು ಎಲ್ಲರೂ ಮಾಸ್ಕ್‌ ಧರಿಸಿ, Social Distance ಫಾಲೋ ಮಾಡಿ ಹಾಗೂ ಸ್ಯಾನಿಟೈಸರ್ ಬಳಸಿ ಎಂದು ಮನವಿ ಮಾಡಿದ್ದಾರೆ.