ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗ ಬಾಬು ಅವರಿಗೆ ಕೋರೋನಾ ಪಾಸಿಟಿವ್ ಇರುವುದಾಗಿ ತಿಳಿದು ಬಂದಿದೆ. ಈ ವಿಚಾರದ ಬಗ್ಗೆ ಸ್ವತಃ ಬಾಬು ಟ್ಟೀಟ್ ಮಾಡಿದ್ದಾರೆ.

ಮೆಗಾ ಸ್ಟಾರ್‌ ಚಿರಂಜೀವಿ ಫ್ಯಾಮಿಲಿಯ ಒಂದು ಝಲಕ್‌

'ಸೋಂಕು ಇದೆ ಅಂದರೆ ಸದಾ ಅದರಿಂದ ಬಳಲುತ್ತಿರುವುದಲ್ಲ. ಬದಲಿಗೆ ನಮ್ಮ ದೇಹದಲ್ಲಿರುವ ಇಮ್ಯೂನಿಟಿ  ಪವರ್ ಹೆಚ್ಚಾಗಿ,  ಶಕ್ತಿ ಹೆಚ್ಚಿಸಿಕೊಳ್ಳುವುದು.  ಕೋವಿಡ್‌19 ಪಾಸಿಟಿವ್ ಬಂದಿದೆ. ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡುತ್ತೇನೆ,' ಎಂದು ಬರೆದುಕೊಂಡಿದ್ದಾರೆ.

 

ನಾಗ ಬಾಬು ಅವರದ್ದು ತುಂಬು ಕುಟುಂಬವಾಗಿರುವ ಕಾರಣ ಎಲ್ಲರೂ ಕೋವಿಡ್19 ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

"

ಕೆಲವು ದಿನಗಳ ಹಿಂದೆ ಹೈದರಾಬಾದ್‌ನ ತಾಜ್‌ ಹೊಟೇಲ್‌ನಲ್ಲಿ ಪುತ್ರಿ ನಿಹಾರಿಕಳ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದ್ದು ಭಾಗಿಯಾಗಿದ್ದ ಸ್ಟಾರ್ಸ್‌ಗಳು ಆತಂಕ ಪಡುವ ಅಗತ್ಯವಿಲ್ಲ. ಕಾರಣ ಸಮಾರಂಭಕ್ಕೂ ಇಂದಿಗೂ ಸುಮಾರು 1 ತಿಂಗಳ ಅಂತರವಿದೆ ಎಂದು ಬಾಬು ಆಪ್ತರಿಗೆ ತಿಳಿಸಿದ್ದಾರೆ.

ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ ನಿಶ್ಚಿತಾರ್ಥ; ಸಂಭ್ರಮ ಹೇಗಿತ್ತು ನೋಡಿ!