Harminder Singh: ಖ್ಯಾತ ಬಾಲಿವುಡ್​ ನಟಿ ನೀಲು ಕೊಹ್ಲಿ ಪತಿ ಬಾತ್​ರೂಮಲ್ಲಿ ಶವವಾಗಿ ಪತ್ತೆ

ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಕಾಣಿಸಿಕೊಂಡಿರೋ ನಟಿ ನೀಲು ಕೊಹ್ಲಿ ಅವರ ಪತಿ ಬಚ್ಚಲು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾರಣ ತಿಳಿಯಬೇಕಿದೆಯಷ್ಟೇ. 
 

Veteran actress Nilu Kohlis husband passes away after slipping inside the bathroom

ಕಿರುತೆರೆಯ ಮೂಲಕ ಬಹಳ ಖ್ಯಾತಿ ಪಡೆದಿರುವ  ಹಿರಿಯ ನಟಿ ನೀಲು ಕೊಹ್ಲಿ (Nilu Kohli). ಇವರು  ಜನಪ್ರಿಯ ಟಿವಿ ಮತ್ತು ಬಾಲಿವುಡ್ ನಟಿ. ಅವರ ಪತಿ ಹರ್ಮಿಂದರ್ ಸಿಂಗ್ ಕೊಹ್ಲಿ ಮೃತಪಟ್ಟಿದ್ದು ಅದೀಗ ಭಾರಿ ಸುದ್ದಿಯಾಗಿದೆ. ಇದಕ್ಕೆ ಕಾರಣ,  ಹರ್ಮಿಂದರ್ ಸಿಂಗ್ ಕೊಹ್ಲಿ ಅವರ ಶವ ಅವರ ಮನೆಯ ಸ್ನಾನಗೃಹದಲ್ಲಿ ಬಿದ್ದಿರುವುದು ಕಂಡುಬಂದಿದೆ. ಶುಕ್ರವಾರ ಅಂದರೆ ಮಾರ್ಚ್​ 24ರ  ಮಧ್ಯಾಹ್ನ ಹರ್ಮಿಂದರ್ ಸಿಂಗ್ ಕೊಹ್ಲಿ ಗುರುದ್ವಾರದಿಂದ ಮರಳಿ ಬಂದು ಮನೆಯ ಬಾತ್ ರೂಮ್​ಗೆ  ಹೋಗಿದ್ದಾರೆ. ಮನೆಯಲ್ಲಿ ಕೆಲಸದಾಳು ಮಾತ್ರ ಇದ್ದರು. ಬಾತ್ ರೂಮ್ ನಿಂದ ಹೊರ ಬರದಿದ್ದಾಗ ಕೆಲ ಸಮಯದ ಬಳಿಕ ಕೆಲಸದಾಳು ಹೋಗಿ ನೋಡಿದ್ದಾರೆ. ಈ ವೇಳೆ ಕುಸಿದು ಬಿದ್ದಿರುವ ಸ್ಥಿತಿಯಲ್ಲಿ ಹರ್ಮಿಂದರ್ ಸಿಂಗ್ ಕೊಹ್ಲಿ ಪತ್ತೆಯಾಗಿದ್ದಾರೆ. ಅವರಿಗೆ ಏಕಾಏಕಿ ಏನಾಯಿತು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.  ನೀಲು ಅವರ ಮಗಳು ಸಾಹಿಬಾ ತಂದೆಯ ನಿಧನದ ಸುದ್ದಿಯನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.  ತಾಯಿ ನೀಲು ಅವರ ಆರೋಗ್ಯ ಸ್ಥಿತಿ ಈಗ ಸರಿಯಿಲ್ಲ. ಸಹೋದರ ಇನ್ನಷ್ಟೇ ಬರಬೇಕು. ಎರಡು ದಿನದ ಬಳಿಕ ತಂದೆಯ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮಗಳು ತಿಳಿಸಿದ್ದಾರೆ. 

ಅಂದಹಾಗೆ ಹಿಂದಿಯ ಕಿರುತೆರೆ ಧಾರಾವಾಹಿ ನೋಡುತ್ತಿರುವವರಿಗೆ ನೀಲು ಕೊಹ್ಲಿ ಮುಖ ಚಿರಪರಿಚಿತ. ಸಿನಿಮಾಗಳಲ್ಲಿಯೂ ಇವರು ಅಭಿನಯಿಸಿದ್ದಾರೆ.  ನೀಲು ಅವರು  ಮೂಲತಃ ಚಂಡೀಗಢದವರು. ಅವರು  ಹುಟ್ಟಿದ್ದು ಜಾರ್ಖಂಡ್‌ನ ರಾಂಚಿಯಲ್ಲಿ. ಅವರ ತಾಯಿಯ ಹೆಸರು ಮಿತಾ ದುಗ್ಗಲ್. ನೀಲು ಅವರು ತಮ್ಮ ಶಾಲಾ ಶಿಕ್ಷಣವನ್ನು ರಾಂಚಿಯ ಲೊರೆಂಜೊ ಕಾನ್ವೆಂಟ್ ಶಾಲೆಯಲ್ಲಿ ಮಾಡಿದರು.  ಇಲ್ಲಿನ ನಿರ್ಮಲಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದರು. 19 ಅಕ್ಟೋಬರ್ 1986 ರಲ್ಲಿ ಇವರ ಮದುವೆ   ಹರ್ಮಿಂದರ್ ಸಿಂಗ್ ಕೊಹ್ಲಿ (Harminder Singh) ಅವರ ಜೊತೆ ನಡೆಯಿತು. ಹರ್ಮಿಂದರ್ ಸಿಂಗ್ ಅವರು ಚಂಡೀಗಢದ ನಿವಾಸಿಯಾಗಿರುವುದರಿಂದ. ಹಾಗಾಗಿ ಮದುವೆಯ ನಂತರ ಚಂಡೀಗಢಕ್ಕೆ ಶಿಫ್ಟ್ ಆಗಬೇಕಾಯಿತು. ನೀಲು ಮತ್ತು ಹರ್ಮಿಂದರ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮಗನ ಹೆಸರು ಬಲ್ವೀರ್ ಸಿಂಗ್ ಕೊಹ್ಲಿ ಮತ್ತು ಅವರ ಮಗಳ ಹೆಸರು ಸಾಹಿಬಾ ಕೊಹ್ಲಿ.

Rani Mukharjee: 2ನೇ ಮಗು ಬೇಕಿತ್ತು, ಆದರೆ... ನೋವು ತೋಡಿಕೊಂಡ ನಟಿ

ದಂತ ಚಿಕಿತ್ಸಾಲಯದಲ್ಲಿ ಅವರು ತಮ್ಮ ವೃತ್ತಿಜೀವನದ ಆರಂಭಿಸಿದರು. ಇಲ್ಲಿಯೇ ಅವರಿಗೆ ಮೊದಲ ಪಾತ್ರವೂ ಸಿಕ್ಕಿದ್ದು ವಿಶೇಷ. ಆಗಿದ್ದೇನೆಂದರೆ.  ನೀಲು ಅವರ ಮಗಳ ಹಲ್ಲು ಮುರಿದುಹೋಗಿದ್ದ ಸಂದರ್ಭದಲ್ಲಿ  ಅವಳನ್ನು ಕ್ಲಿನಿಕ್​ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ  ಅವರು ಟಿವಿ ಜಾಹೀರಾತಿಗೆ (TV advertisement) ಆಫರ್​ ಸಿಕ್ಕಿತ್ತು. ನಂತರ ನೀಲು ವೃತ್ತಿಜೀವನದ ಮೊದಲ ಟಿವಿ ಶೋ 'ನಿಮ್ಮೋ ತೆ ವಿಮ್ಮೋ' (ಪಂಜಾಬಿ) ಮಾಡಿದರು. ಆ ಸಮಯದಲ್ಲಿ ಅವರಿಗೆ 35 ವರ್ಷ. ನಂತರ ಅವರು ಟಿವಿಯಲ್ಲಿ 'ಭಾಭಿ', 'ಆಹಟ್​', 'ಸಿಐಡಿ', 'ಮೀಟ್', 'ಖುಷಿಯಾನ್', 'ಪ್ಯಾರ್ ಕಿ ಕಷ್ಟಿ ಮೇ' ಮತ್ತು 'ಜಬ್ ಲವ್ ಹುವಾ' ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ನೀಲು ಅವರು 'ತಪಿಶ್', 'ತೇರೆ ಲಿಯೆ', 'ಸ್ಟೈಲ್', 'ರನ್', 'ಪಟಿಯಾಲಾ ಹೌಸ್' ಮತ್ತು 'ಖನ್ನಾ ಮತ್ತು ಅಯ್ಯರ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

Kangana Ranaut: ಕಂಗನಾಗೆ ಉತ್ತಮ ಭವಿಷ್ಯವಿದೆ... ಆದರೆ ಖ್ಯಾತ ಜ್ಯೋತಿಷಿ ಹೇಳಿದ್ದೇನು?

ಏತನ್ಮಧ್ಯೆ, ನಟಿ ನೀಲು ಅವರ ಪತಿಯ ಸಾವಿನ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಮಧುಮೇಹ ಬಿಟ್ಟರೆ ಬೇರೆ ಏನೂ ಸಮಸ್ಯೆ ಇರದ ಅವರು ಏಕಾಏಕಿ ಮೃತಪಟ್ಟಿರುವುದು ಹೇಗೆ ಎನ್ನುವ ಚರ್ಚೆ ಶುರುವಾಗಿದೆ. ನೀಲು ಅವರ ಸ್ನೇಹಿತೆ ವಂದನಾ  (Vandana)ಕೂಡ ಈ ವಿಷಯ ತಿಳಿಸಿದ್ದಾರೆ. ಹರ್ಮಿಂದರ್ ಸಂಪೂರ್ಣವಾಗಿ ಚೆನ್ನಾಗಿದ್ದರು.  ಗುರುದ್ವಾರ ಲಾಹಿಗೆ ಭೇಟಿ ನೀಡಿದ್ದರು.  ಅಲ್ಲಿಂದ ಬಂದ  ಮೇಲೆ ಏನಾಯಿತೋ ಗೊತ್ತಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios