Asianet Suvarna News Asianet Suvarna News

ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟಿ ಸುಲೋಚನಾ ಲಾತ್ಕರ್ ನಿಧನ!

250 ಕ್ಕೂ ಹೆಚ್ಚು ಹಿಂದಿ ಮತ್ತು 50 ಮರಾಠಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟಿ ಸುಲೋಚನಾ ಲಾಟ್ಕರ್ ಅವರು ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಕಾಯಿಲೆಯಿಂದ ಭಾನುವಾರದಂದು ನಿಧನರಾಗಿದ್ದಾರೆ. 

Veteran Actor Sulochana Latkar Passed Away gvd
Author
First Published Jun 4, 2023, 11:15 PM IST

ನವದೆಹಲಿ (ಜೂ.04): 250 ಕ್ಕೂ ಹೆಚ್ಚು ಹಿಂದಿ ಮತ್ತು 50 ಮರಾಠಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟಿ ಸುಲೋಚನಾ ಲಾಟ್ಕರ್ ಅವರು ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಕಾಯಿಲೆಯಿಂದ ಭಾನುವಾರದಂದು ನಿಧನರಾಗಿದ್ದಾರೆ. ಅವರು ಮುಂಬೈನ ಶುಶ್ರೂಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಈಗ ಸುಲೋಚನಾ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ 5:30 ಕ್ಕೆ ದಾದರ್ ಸ್ಮಶಾನದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ಅವರು 1940 ರ ದಶಕದ ಆರಂಭದಲ್ಲಿ ಮರಾಠಿ ಚಲನಚಿತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮತ್ತು ತದನಂತರ ಹಿಂದಿ ಸಿನಿಮಾಗಳಲ್ಲಿ ನಟಿಸಿದರು.ಅದರಲ್ಲಿ ಶಮ್ಮಿ ಕಪೂರ್ ಅವರ 'ದಿಲ್ ದೇಖೆ ದೇಖೋ', ದಿಲೀಪ್ ಕುಮಾರ್ ಅವರ 'ಆದ್ಮಿ' ಮತ್ತು ದೇವ್ ಆನಂದ್ ಅವರ 'ಜಾನಿ ಮೇರಾ ನಾಮ್' ಮುಂತಾದ ಚಲನಚಿತ್ರಗಳಲ್ಲಿ ಹಲವಾರು ತಾಯಿ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ಹೋಟೆಲ್‌, ಕ್ಲಬ್‌ಗಳಲ್ಲಿ ರಾಜಕೀಯ ಮಾಡಿದರೆ ಮತ ಬರಲ್ಲ: ಸಂಸದ ಡಿ.ಕೆ.ಸುರೇಶ್‌

1946 ರಿಂದ 1961 ರವರೆಗೆ 'ಸಸುರ್ವಾಸ್' (1946), 'ವಾಹಿನಿಚ್ಯಾ ಬಾಂಗ್ಡಿಯಾ' (1953), 'ಮೀತ್ ಭಾಕರ್', 'ಸಂಗ್ತಿ ಐಕಾ' (1959), 'ಲಕ್ಷ್ಮಿ ಅಲಿ ಘರಾ', 'ಮೋತಿ' ಮನ್ಸೇ', 'ಜೀವಚಾ ಸಖಾ', 'ಪತಿವ್ರತಾ', 'ಸುಖಾಚೆ ಸೋಬ್ತಿ', 'ಭೌಭೀಜ್', 'ಆಕಾಶಗಂಗಾ' ಮತ್ತು 'ಧಕ್ತಿ ಜೌ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಲಾಟ್ಕರ್ ಅವರು 1999ರಲ್ಲಿ ಪದ್ಮಶ್ರೀ  ಪುರಸ್ಕಾರಕ್ಕೆ ಭಾಜನರಾಗಿದ್ದರು.ಅವರಿಗೆ 2004 ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. 2009 ರಲ್ಲಿ, ಅವರಿಗೆ ಮಹಾರಾಷ್ಟ್ರ ಸರ್ಕಾರದಿಂದ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ನೀಡಲಾಯಿತು. 

ಗ್ಯಾರಂಟಿಗೆ ಲಂಚ ಕೇಳಿ​ದರೆ ಒದ್ದು ಒಳಗಾಕ್ತೀವಿ: ಡಿಸಿಎಂ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ

1932ರಲ್ಲಿ ಮಾಧುರಿ ಚಿತ್ರದ ಮೂಲಕ ಬಾಲ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ಚಿತ್ರದಲ್ಲಿ ನಟಿಸಿದಾಗ ಆಕೆಗೆ ಕೇವಲ 4 ವರ್ಷ. ಅಂದಿನಿಂದ ಅವರು ಕಷ್ಟಪಟ್ಟು ಕೆಲಸ ಮಾಡಿದರು. ಅಂತಿಮವಾಗಿ 1946 ರಲ್ಲಿ ಕೀಮಾ ಎಂಬ ಹಿಂದಿ ಚಲನಚಿತ್ರದೊಂದಿಗೆ ನಟನೆಗೆ ಎಂಟ್ರಿ ಕೊಟ್ಟರು. ಸುಲೋಚನಾ ಲತ್ಕರ್ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಜಮೀನ್ದಾರ್ ಕುಟುಂಬದಿಂದ ಅಬಾಸಾಹೇಬ್ ಚವ್ಹಾಣನನ್ನು ವಿವಾಹವಾದರು. ವಿವಾಹವಾದ ಬಳಿಕ ಹೆಚ್ಚಿನ ಸಿನಿಮಾಗಳಲ್ಲಿ ಸುಲೋಚನಾ ಅಭಿನಯಿಸಿಲ್ಲ. ಇನ್ನು ಹಿರಿಯ ನಟಿ ಸುಲೋಚನಾ ಲತ್ಕರ್ ಅಗಲಿಕೆ ಚಿತ್ರರಂಗದಲ್ಲಿ ದೊಡ್ಡ ನಷ್ಟವಾಗಿದೆ. ಅನೇಕ ಹಿರಿಯ ನಟರು, ಆಪ್ತ ಸ್ನೇಹಿತರು ಸುಲೋಚನಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Follow Us:
Download App:
  • android
  • ios